ಬಂಟ್ವಾಳ: ಪುರಾತನ ಪ್ರಸಿದ್ಧ *ಪೆರಾಜೆ ವಿಷ್ಣುಮೂರ್ತಿ ದೇವಸ್ಥಾನ* ದ ಜೀರ್ಣೋದ್ಧಾರ ದ ಬಗ್ಗೆ ಪೂರ್ವಭಾವಿ ಸಭೆ ದೇವಸ್ಥಾನದ ವಠಾರದಲ್ಲಿ ನಡೆಯಿತು.. ಈ ದೇವಾಲಯ ವು ಸುಮಾರು ಐದುನೂರು ವರ್ಷಗಳ ಹಿಂದಿನದ್ದಾಗಿದ್ದು ಕೆಲವು ವರ್ಷಗಳ ಹಿಂದೆ ದೇವರ ಗರ್ಭಗುಡಿ, ತೀರ್ಥಮಂಟಪವು ಊರ, ಪರವೂರ ಭಗವಧ್ಬಕ್ತರ ನೆರವು, ಶ್ರಮದೊಂದಿಗೆ ಪುನರುಜ್ಜೀವನಗೊಂಡು ಬ್ರಹ್ಮಕಲಶ ನೇರೆವೇರಿದ್ದು ಪ್ರಸ್ತುತ ದೇವಾಲಯ ದ *ಸುತ್ತುಗೋಪುರ, ಬೋಜನಾಲಯ, ಅರ್ಚಕರ ಮನೆ* ಆಗಬೇಕಿದ್ದು ಈ ನಿಟ್ಟಿನಲ್ಲಿ ಪೆರಾಜೆ ಗ್ರಾಮಸ್ಥರ ಸಲಹೆ ಸೂಚನೆಗಳನ್ನು, ಸಹಕಾರಗಳನ್ನು ಪಡೆಯಲು ಡಿ 02 ರ ಆದಿತ್ಯವಾರ ದೇವಾಲಯ ದ ವಠಾರದಲ್ಲಿ ಸಭೆ ನಡೆಯಿತು .ಈ ಸಭೆಯಲ್ಲಿ ವಿಷ್ಣುಮೂರ್ತಿ ದೇವಸ್ಥಾನ ದ ಆಡಳಿತ ಸಮಿತಿಯ ಆಧ್ಯಕ್ಷರಾದ ಶ್ರೀ ಅಪ್ರಾಯ ಪೈ ಕೋಶಾಧಿಕಾರಿಡಾ.ಶ್ರೀನಾಥ್ ಆಳ್ವಉಪಾಧ್ಯಕ್ಷರುಶ್ರೀ ಕುಶಾಲ ಯಂ.ಪೆರಾಜೆಕಾರ್ಯದರ್ಶಿ ಶ್ರೀ ಜನಾರ್ದನ ಪೆರಾಜೆ, ವ್ಯವಸ್ಥಾಪನ ಸದಸ್ಯರಾದ ಸುಂದರ ಬಂಗೇರ, ರಾಮಣ್ಣ ಗೌಡ, ಚಂದ್ರಹಾಸ ಶೆಟ್ಟಿ ಹಿರಿಯರಾದ ಮೋಹನದಾಸ್ ಹೆಗ್ಡೆ , ಬಿ.ಟಿ.ನಾರಾಯಣ ಭಟ್, ಶ್ರೀಕಾಂತ್ ಆಳ್ವ ಪೆರಾಜೆ ಗುತ್ತು, ಜಯರಾಮ ರೈ ಪಂಚಾಯತ್ ಅದ್ಯಕ್ಷ ರಾದ ಪುಷ್ಪ , ಪಂಚಾಯತ್ ಸದಸ್ಯರಾದ ತಿಮ್ಮಪ್ಪ ಗೌಡ,ಉಮೇಶ್ ಎಸ್. ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.
