ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್. ರಿ ಇದರ ವತಿಯಿಂದ ಜ.13 ರಂದು ತಾಂತ್ರಿಕ ಸಿರಿ, ಆಧುನಿಕ ಕೃಷಿ ಯಲ್ಲಿ ಯಂತ್ರೋಪಕರಣಗಳ ಆವಿಷ್ಕಾರ ಮತ್ತು ಬಳಕೆ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು ಕೃಷಿ ಇಲಾಖೆ ಯ ಸಹಾಯಕ ನಿರ್ದೇಶಕರು ಪ್ರೇಮ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸಂಪನ್ಮೂಲವ್ಯಕ್ತಿಗಳಾಗಿ ಬಂಟ್ವಾಳ ಕೃಷಿ ಅಧಿಕಾರಿ ಶ್ರೀ ನಂದನ್ ಶೆಣೈ ಮತ್ತುರೈತರತ್ನ ಪ್ರಶಸ್ತಿ ವಿಜೇತ ಪಿಂಗಾರ ರೈತ ಉತ್ಪಾದಕರ ಕಂಪೆನಿಯ ಅಧ್ಯಕ್ಷರು ರಾಮಕಿಶೋರ್ ಇವರು ತಾಂತ್ರಿಕ ಸಿರಿ,ಆಧುನಿಕ ಕೃಷಿ ಯಲ್ಲಿಯಂತ್ರೋಪಕರಣಗಳ ಅವಿಷ್ಕಾರ ಮತ್ತು ಬಳಕೆ ಬಗ್ಗೆ ಮಾಹಿತಿ ನೀಡಿದರು. ರೈತ ರತ್ನ ಪ್ರಶಸ್ತಿ ಗೆ ಬಾಜನರಾದ ರಾಮಕಿಶೋರ್ ಇವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮ ದಲ್ಲಿ ಸಂಸ್ಥೆಯ ಸಂಚಾಲಕ ರು ಮೋಹನ್ ದಾಸ್ ಕೊಟ್ಟಾರಿ ,ಅಧ್ಯಕ್ಷ ರು ಸುದರ್ಶನ್ ಜೈನ್, ಚಿನ್ನ ರಲೋಕ ಅಧ್ಯಕ್ಷೆ ಕುಮಾರಿ ಭಾಗ್ಯಶ್ರೀ ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ರಾಮಚಂದ್ರ ಸ್ವಾಗತಿಸಿ, ವಕೀಲರಾದ, ಜೇಸಿಐ ಅಧ್ಯಕ್ಷ ರು ಶೈಲಜಾ ರಾಜೇಶ್ ಕಾರ್ಯಕ್ರಮ ನಿರೂಪಿಸಿ, ಸೌಮ್ಯಯಶವಂತ್ ಭಂಡಾರಿಬೆಟ್ಟು ವಂದಿಸಿದರು.














