ಬಂಟ್ವಾಳ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ (ರಿ.) ಬಂಟ್ವಾಳ ತಾಲೂಕು ಶಾಖೆ ಇದರ ವತಿಯಿಂದ ಬಂಟ್ವಾಳ ತಾಲೂಕು ಸರಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ 2018-19 ಕಾರ್ಯಕ್ರಮ ಡಿ.1 ಶನಿವಾರ ಮತ್ತು 2 ಆದಿತ್ಯವಾರ ಬಂಟ್ವಾಳ ಎಸ್.ವಿ.ಎಸ್.ದೇವಳ ದ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಸರಕಾರಿ ನೌಕರರು ಮಾನಸಿಕವಾಗಿ ದೈಹಿಕವಾಗಿ ಬಲಾಢ್ಯರಾಗಲು ಕ್ರೀಡೆ ಸಹಕಾರಿಯಾಗಲಿದೆ.
ಕ್ರೀಡೆ ಕೇವಲ ಒಂದು ದಿನಕ್ಕೆ ಸೀಮಿತ ವಾಗದೆ ಪ್ರತಿದಿನವೂ ತೊಡಗಿಸಲು ಕರೆನೀಡಿದರು. ಕೆಲಸದ ಒತ್ತಡವನ್ನು ಕಡಿಮೆ ಮಾಡಿ ಆರೋಗ್ಯ ರಕ್ಷಣೆ ಪಡೆಯಲು ಕ್ರೀಡೆ ಸಹಕಾರಿಯಾಗಲಿದೆ ಎಂದರು. ಪ್ರತಿಯೊಬ್ಬ ನೌಕರರನು ಇಂತಹ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಎಂದು ಅವರು ಹೇಳಿದರು.
ತಾ.ಪಂ.ಅದ್ಯಕ್ಷ ಚಂದ್ರಹಾಸ ಕರ್ಕೇರ ಧ್ವಜಾರೋಹಣ ನಡೆಸಿ , ಸಾಮರಸ್ಯದ ಕ್ರೀಡಾಕೂಟದಲ್ಲಿ ಸರಕಾರಿ ಅಧಿಕಾರಿಗಳು ಭಾಗವಹಿಸಿ, ಮನಸ್ಸಿಗೆ ಖುಷಿ ತಂದಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಆಧ್ಯಕ್ಷ ಉಮಾನಾಥ ರೈ ಮೇರಾವು ಸ್ವಾಗತಿಸಿದರು. ವೇದಿಕೆಯಲ್ಲಿ ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ತಹಶೀಲ್ದಾರ ಪುರಂದರ ಹೆಗ್ಡೆ, ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ, ತಾಲೂಕು ಆರೋಗ್ಯಾಧಿಕಾರಿ ಡಾ! ದೀಪಾ ಪ್ರಭು, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಪಿಂಚಣಿದಾರರ ಸಂಘದ ತಾಲೂಕು ಅಧ್ಯಕ್ಷ ಬಿ.ತಮ್ಮಯ್ಯ, ರಾಷ್ಟ್ರ ಪ್ರಶಸ್ತಿ ವಿಜೇತ ರಮೇಶ್ ನಾಯಕ್ ರಾಯಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕ ರ ಸಂಘದ ಗೌರವ ಸಲಹೆಗಾರ ಗಂಗಾದರ ರೈ, ಮಾಂಡೋವಿ ಮೋಟಾರ್ ಪ್ರೈ.ಲಿ.ನ ಎ.ಜಿ.ಎಂ. ಶಶಿಧರ ಕಾರಂತ, ಶಿಕ್ಷಣ ಸಮನ್ವಧಿಕಾರಿ, ರಾಧಾಕ್ರಷ್ಣ ಭಟ್, ಸಂಘದ ಖಜಾಂಚಿ ಜೆ.ಜನಾರ್ದನ, ಕ್ರೀಡಾ ಕಾರ್ಯದರ್ಶಿ ಅಖಿಲ್ ಶೆಟ್ಟಿ, ಕರ್ನಾಟಕ ರಾಜ್ಯ ಪ್ರಾ.ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಧಿಕಾರಿ ನವೀನ್ ಪಿ.ಎಸ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚಿನ್ನಪ್ಪ, ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಜೋಯೆಲ್ ಲೋಬೋ, ಎನ್.ಪಿ.ಎಸ್.ನೌಕರರ ಸಂಘದ ಅದ್ಯಕ್ಷ ಸಂತೋಷ್ , ಜಿಲ್ಲಾ ಭಡ್ತಿ ಹೊಂದಿದ ಶಿಕ್ಷಕರ ಸಂಘದ ಅಧ್ಯಕ್ಷ ಮಹಮ್ಮದ್ ತುಂಬೆ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಚಂದ್ರ ರಾವ್, ತಾಲೂಕು ಭಡ್ತಿ ಹೊಂದಿದ ಶಿಕ್ಷಕ ರ ಸಂಘದ ಅಧ್ಯಕ್ಷ ರಾಘವೇಂದ್ರ ಬಲ್ಲಾಳ್, ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರ ಸಂಘದ ಅಧ್ಯಕ್ಷ ರಮಾನಂದ ಎನ್, ಗ್ರಾಮಕರಣೀಕರ ಸಂಘದ ಅಧ್ಯಕ್ಷ ತೌಫೀಕ್, ಸರಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ವೇಣುಗೋಪಾಲ, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಚೆನ್ನಕೇಶವ, ಡಿ.ಗ್ರೂಪ್ ನೌಕರರ ಸಂಘಧ ಆಧ್ಯಕ್ಷ ಕೇಶವ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಪ್ರಾ.ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ವಂದಿಸಿದರು. ಸುರೇಶ್ ಶೆಟ್ಟಿ ಕೇಪು ಕಾರ್ಯಕ್ರಮ ನಿರೂಪಿಸಿದರು.