ಬಂಟ್ವಾಳ: ಪುದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ವಾಹನದ ಮೂಲಕ ಮನೆ ಮನೆಯಿಂದ ಕಸ ಸಂಗ್ರಹಿಸುವ ಕಾರ್ಯಕ್ಕೆ ಪುದು ಗ್ರಾಮ ಪಂಚಾಯತಿ ಕಚೇರಿ ಮುಂದೆ ಶನಿವಾರ ಚಾಲನೆ ನೀಡಲಾಯಿತು.
ಬಂಟ್ವಾಳ ತಾಲೂಕು ಪಂಚಾಯತಿ ಕಾರ್ಯನಿರ್ವಹಾಣಾಧಿಕಾರಿ ರಾಜಣ್ಣ ಅವರು ಕಸ ಸಂಗ್ರಹಿಸುವ ವಾಹನಕ್ಕೆ ತ್ಯಾಜ್ಯ ಸುರಿಯುವ ಮೂಲಕ ಪಂಚಾಯತಿ ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪಂಚಾಯತ್ ಕೈಗೊಂಡಿರುವ ಈ ಕಾರ್ಯ ಅಭಿನಂದನೀಯವಾದುದು, ಗ್ರಾಮದ ಸ್ವಚ್ಛತೆಯ ದೃಷ್ಟಿಯಿಂದ ಪ್ರತಿಯೋಬ್ಬ ನಾಘರಿಕನೂ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಕಸ ಸಂಗ್ರಹಿಸುವ ವಾಹನಗಳು ಮನೆ ಮನೆಗೆ ಬಂದಾಗ ನೀಡಿ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.
ಪುದು ಗ್ರಾಮ ಪಂಚಾಯತಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿ ಪುದು ಗ್ರಾಮ ಪಂಚಾಯತ್ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದು ಬೇರೆ ಗ್ರಾಮಗಳ ಜನರು ಬಂದು ಇಲ್ಲಿ ಕಸ ಎಸೆದು ಹೋಗುತ್ತಿದ್ದಾರೆ. ಮನೆಮನೆಗೆ ಕಸ ಸಂಗ್ರಹಣೆಯ ವಾಹನಗಳು ಬಂದಾಗ ಎಲ್ಲಾ ಜನರು ಕಸ ನೀಡಬೇಕು, ಈ ಮೂಲಕ ರಸ್ತೆ ಪಕ್ಕ ಕಸ ಎಸೆಯುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸಾಹಿತಿ ಮಹಮ್ಮದ್ ಮಾರಿಪಳ್ಳ ಸ್ವಚ್ಛತೆ ಗೀತೆ ಹಾಡಿದರು. ಪಂಚಾಯತಿ ಉಪಾಧ್ಯಕ್ಷೆ ಲೀಡಿಯಾ ಪಿಂಟೋ, ಸದಸ್ಯರಾದ ಇಕ್ಬಾಲ್ ಸುಜೀರ್, ಝಾಹೀರ್, ರಿಯಾಝ್ ಕುಂಪಣ ಮಜಲು, ರಿಯಾಝ್ ಅಮ್ಮೆಮಾರ್, ಮುಸ್ತಾಫ ಅಮ್ಮೆಮಾರ್, ರಝಾಖ್ ಅಮ್ಮೆಮಾರ್, ಮಮ್ತಝ್, ರಯಾನಾ, ರಶೀದಾ, ಲಕ್ಷ್ಮಿ, ಆಶಾನಯನ, ಮನೋಜ್ ಆಚಾರ್ಯ, ಸಂತೋಷ್, ಕಿಶೋರ್, ಭಾಸ್ಕರಮ, ನಝೀರ್, ಲವಿನಾ, ಶೋಭಾ, ಜಯಂತಿ, ಸರೋಜಿನಿ, ನಾಗವೇಣಿ, ಹೇಮಾಲತಾ, ಪಿಡಿಓ ಪ್ರೇಮಲತಾ, ಪ್ರಮುಖರಾದ ಮಹಮ್ಮದ್ ಬಾವಾ, ಟಿ.ಕೆ. ಬಶೀರ್, ಮಜೀದ್ ಫರಂಗಿಪೇಟೆ, ಸಿಬ್ಬಂದಿಗಳಾದ ಅಬ್ದುಲ್ ಸಲಾಂ, ವಿನಯ, ಯಶೋಧಾ, ಸುರೇಖಾ, ಮಹಮ್ಮದ್ ಕೈಪ್ ಮತ್ತಿತರರು ಹಾಜರಿದ್ದರು. ಬಳಿಕ ನಡೆದ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಸ್ವಚ್ಛತೆಯ ಬಗ್ಗೆ ಕಾರ್ಯನಿರ್ವಾಹಣಾಧಿಕಾರಿ ರಾಜಾಣ್ಣ ಸದಸ್ಯರಿಗೆ ಮಾರ್ಗದರ್ಶನ ಮಾಡಿದರು.

