ಹೌದು ಹೇಗಿರಬೇಕು ನನ್ನವಳು
ಪದೇ ಪದೇ ಕಾಡಿದ ಪ್ರಶ್ನೆಗೆ ಉತ್ತರ
ಏನೆಲ್ಲಾ ಅನಿಸಿತು ಹೇಳಬೇಕೆ ಆ ಕ್ಷಣ
ಒಡಮೂಡಿದ ಆ ಸಾಲುಗಳ ಹಂದರ


ಮೊದಲ ನೋಟದಲ್ಲಿ ಮನ ಸೆಳೆಯುವ
ಅವಳ ಕಂಗಳಲ್ಲಿ ಬಾಳು ಬೆಳಗುವ ದೀಪ
ಘಲ್ ನಾದಕ್ಕೆ ಎದೆ ಝಲ್ ಆಗುವ ಭಾವ
ಮೆಲ್ಲನೆ ತದೇಕ ಚಿತ್ತ ತನ್ಮಯ ಸಲ್ಲಾಪ
ಸೀರೆ ಉಡುವ ಸಂಸ್ಕೃತಿಯ ಸೊಗಡು
ಸರಳ ಅಂದದ ಕನ್ನಡ ಕಂಪಿನ ಅರಗಿಣಿ
ಚಂದನ ತೀಡಿದಂತೆ ವ್ಯಾಪಿಸಿದ ಸೌಗಂಧ
ನಕ್ಕೊಡನೆ ತುಂಬಬೇಕು ಖುಷಿಯ ಗಣಿ
ಮನೆಗೆ ಇರಬೇಕು ಹೊಂದಿಕೊಂಡು
ನಡೆ ನುಡಿಯಲ್ಲಿ ಇರಲಿ ನನಗಿಂತ ಎತ್ತರ
ಅಡಿಗೆಯ ಪರಿಣಿತಿ ಒಂದಿಷ್ಟು ಶುಚಿ ರುಚಿ
ವಿದ್ಯೆ ಬುದ್ಧಿ ಹಿತ ಮಿತವಾಗಿದ್ದರೆ ಸುಂದರ
ಪ್ರತಿ ವಿಷಯಗಳ ಚರ್ಚೆ ಪರಸ್ಪರರ ಅರ್ಥ
ತೋರಿಸುವ ಪ್ರೀತಿ ನಕ್ಷತ್ರಗಳ ಶಿಖರ
ಇಷ್ಟ ಕಷ್ಟ ಬೇಕು ಬೇಡಗಳ ವಿನಿಮಯ
ಅರಿತು ನಡೆಯಬೇಕು ಜೊತೆಗೆ ನಿರಂತರ
ಬಸವರಾಜ ಕಾಸೆ