ಬಂಟ್ವಾಳ: ಇರಾ ಗ್ರಾಮ ಪಂಚಾಯತ್, ಪಶುಪಾಲನೆ ಪಶು ವೈದ್ಯಕೀಯ ಸೇವಾ ಇಲಾಖೆ ಬಂಟ್ವಾಳ, ಮಂಚಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಇದರ ಜಂಟಿ ಆಶ್ರಯದಲ್ಲಿ ನಾಯಿಗಳಿಗೆ ಹುಚ್ಚು ರೋಗವನ್ನು ತಡೆಗಟ್ಟುವ ರೇಬಿಸ್ ಲಸಿಕಾ ಕಾರ್ಯಕ್ರಮವು ಇಂದು ಇರಾ ಗ್ರಾಮದ ವಿವಿಧ ಕಡೆಗಳಲ್ಲಿ ನಡೆಯಿತು.


ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಗೋಪಾಲ ಅಶ್ವತ್ತಡಿ,ಮೊಯ್ದೀನ್ ಕುಂಞಿ,ರಮೇಶ್ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಳಿನಿ ಎ ಕೆ ಪಶು ವೈದ್ಯಧಿಕಾರಿ ಡಾಕ್ಟರ್ ಅವಿನಾಶ್ ಭಟ್ ಮಂಚಿ ಜಾನುವಾರು ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ ಸಜಿಪಮುಡ ಪಶು ವೈದ್ಯಕೀಯ ಪರೀಕ್ಷರಾದ ಸೀನಪ್ಪ ಹಾಗೂ ಪಂಚಾಯತ್ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.