Tuesday, October 24, 2023

ಕೇರಳದಿಂದ ದ.ಕ.ಜಿಲ್ಲೆಗೆ ಪ್ರವೇಶ ಪಡೆಯಲು ಆರ್.ಟಿ.ಪಿ.ಸಿ.ಆರ್.ನೆಗೆಟಿವ್ ವರದಿ ಕಡ್ಡಾಯ

Must read

ಬಂಟ್ವಾಳ: ಕೇರಳದಿಂದ ವಿಟ್ಲ ಗಡಿಭಾಗದ ಮೂಲಕ ಜಿಲ್ಲೆಗೆ ಆಗಮಿಸುವರ ಮೇಲೆ ನಾಳೆಯಿಂದ ಪೋಲೀಸ್ ಕಣ್ಗಾವಲು.

ಆಗಸ್ಟ್ 2 ರಿಂದ ಕೇರಳ ರಾಜ್ಯದಿಂದ ದ.ಕ.ಜಿಲ್ಲೆಗೆ ಬರುವವರಿಗೆ ಆರ್.ಟಿ.ಪಿ.ಸಿ.ಆರ್.ನೆಗೆಟಿವ್ ರಿಪೋರ್ಟ್ ಕಡ್ಡಾಯ ಎಂದು ದ.ಕ.ಜಿಲ್ಲಾಧಿಕಾರಿ ಡಾ! ರಾಜೇಂದ್ರ ಕೆ.ವಿ.ಅವರು ನೀಡಿದ ನೂತನ ಆದೇಶದಂತೆ ಬಂಟ್ವಾಳ ತಾಲೂಕಿನ ನಾಲ್ಕು ಕಡೆ ಗಡಿಭಾಗದಲ್ಲಿ ಚೆಕ್ ಪೋಸ್ಟ್ ಅಳವಡಿಸಿ ತಪಾಸಣೆ ಗೆ ವಿಟ್ಲ ಇನ್ಸ್ ಪೆಕ್ಟರ್ ನಾಗರಾಜ್ ಹೆಚ್.ವಿ.ಅವರ ತಂಡ ಸಂಪೂರ್ಣ ಸಜ್ಜಾಗಿದೆ.

ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚಳದ ಹಿನ್ನೆಲೆಯಲ್ಲಿ ದ‌.ಕ.ಜಿಲ್ಲೆಗೆ ಬರುವವರಿಗೆ ದ.ಕ‌.ಜಿಲ್ಲಾಧಿಕಾರಿ ಡಾl ರಾಜೇಂದ್ರ ಕೆ.ವಿ.ಅವರು ನಿಯಮಗಳನ್ನು ಜಾರಿಗೆ ತಂದಿದ್ದಾರೆ.

ಜಿಲ್ಲಾಧಿಕಾರಿ ಅವರ ಅದೇಶದಂತೆ ಬಂಟ್ವಾಳ ತಾಲೂಕಿನ ವಿಟ್ಲ ಗಡಿಭಾಗವಾದ ಸಾರಡ್ಕ ಚೆಕ್ ಪೋಸ್ಟ್ ನಲ್ಲಿ ಪೋಲೀಸ್ ತಂಡ ಬ್ಯಾರಿಕೇಡ್ ಗಳನ್ನು ಅಳವಡಿಸಿ ತಪಾಸಣೆ ಗೆ ಬೇಕಾದ ಎಲ್ಲಾ ವ್ಯವಸ್ಥೆ ಗಳನ್ನು ಮಾಡಿದ್ದಾರೆ.ಉಳಿದಂತೆ ಸಾಲೆತ್ತೂರು, ಕನ್ಯಾನ ಹಾಗೂ ಬೆರಿಪದವು ಹೀಗೆ ಒಟ್ಟು ನಾಲ್ಕು ಕಡೆಗಳಲ್ಲಿ ಪೋಲೀಸ್ ಚೆಕ್ ಪೋಸ್ಟ್ ಗಳನ್ನು ತಯಾರು ಮಾಡಲಾಗಿದೆ.

ಎಲ್ಲಾ ಚೆಕ್ ಪೊಸ್ಟ್ ಗಳಲ್ಲಿ ಓರ್ವ ಎ.ಎಸ್.ಐ.ಹಾಗೂ ಹೆಚ್.ಸಿ. ಸಿಬ್ಬಂದಿ ಅವರ ಜೊತೆ ಹೋಮ್ ಗಾರ್ಡ್ ಗಳನ್ನು ನಿಯೋಜನೆ ಮಾಡಲಾಗುತ್ತದೆ.

ಜಿಲ್ಲಾಧಿಕಾರಿ ಅದೇಶದಂತೆ ಜಿಲ್ಲೆಗೆ ಆಗಮಿಸುವವರ ಬಳಿ ಎರಡು ಡೋಸ್ ವ್ಯಾಕ್ಸಿನೇಷನ್‌ ಆದರೂ 72 ಗಂಟೆಯೊಳಗಿನ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ಇದ್ದರೆ ಮಾತ್ರ ಪೋಲೀಸರು ಗಡಿಭಾಗದಲ್ಲಿ ಪ್ರವೇಶ ನೀಡುತ್ತಾರೆ.

ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಪ್ರವೇಶ ಕ್ಕೆ ಅವಕಾಶವಿಲ್ಲ ಹಾಗಾಗಿ ಸಂಚಾರದ ವೇಳೆ ಯಾವುದೇ ಗೊಂದಲಗಳು ಮಾಡುವುದು ಬೇಡ, ಪೋಲೀಸರ ಜೊತೆ ಅನುಚಿತ ವರ್ತನೆ ಮಾಡದೆ ರಿಪೋರ್ಟ್ ಕಡ್ಡಾಯವಾಗಿ ಇರಬೇಕು ಎಂಬ ವಿಚಾರವನ್ನು ವಿಟ್ಲ ಪೋಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಅವರು ತಿಳಿಸಿದ್ದಾರೆ.

ಇದೇ ರೀತಿ ನಿತ್ಯ ಕೇರಳದಿಂದ ಉದ್ಯೋಗ, ಅಥವಾ ಶಾಲಾ ಶಿಕ್ಷಕರು ಸೇರಿದಂತೆ ಸಿಬ್ಬಂದಿ ಗಳಿಗೆ 7 ದಿನಗಳ ಒಳಗಿನ ಆರ್‌ಟಿ.ಸಿ.ಪಿ.ಆರ್ ಜೊತೆ ಸಂಸ್ಥೆ ಗೆ ಸಂಬಂಧಿಸಿದ ಐ.ಡಿ.ಕಾರ್ಡ್ ಕಡ್ಡಾಯ ವಿರಬೇಕು.

ಅಲ್ಲೇ ಗಡಿಭಾಗದಲ್ಲಿ ವಾಸವಿರುವ ಮನೆಗಳ ನಿವಾಸಿಗಳಿಗೆ ಆರ್.ಟಿ.ಪಿ.ಸಿ.ಆರ್.ಪರೀಕ್ಷೆ ರಿಪೋರ್ಟ್ ಬರಲು ಕಾಲಾವಕಾಶ ಇರುವ ಕಾರಣ ಪರೀಕ್ಷೆ ಮಾಡಿದ ಬಗ್ಗೆ ಖಚಿತ ಪಡಿಸುವ ಚೀಟಿ ಅದರ ಜೊತೆ ನೆಗೆಟಿವ್ ರ್ಯಾಟ್ ರಿಪೋರ್ಟ್ ಇದ್ದರೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಆದಿತ್ಯವಾರ ಜಿಲ್ಲಾ ಪೋಲೀಸ್ ವರಿಷ್ಢಾಧಿಕಾರಿ ಹೃಷಿಕೇಶ್ ಸೋನಾವಣೆ ಅವರು ಈ ಬಗ್ಗೆ ಸಭೆ ನಡೆಸಿ ನಾಳೆಯಿಂದ ಜಿಲ್ಲಾಧಿಕಾರಿ ಅದೇಶದಂತೆ ಕಟ್ಟುನಿಟ್ಟಿನ ತಪಾಸಣೆಗೆ ಯಾವ ರೀತಿ ವ್ಯವಸ್ಥೆ ಗಳನ್ನು ಮಾಡಬೇಕು ಎಂಬ ಬಗ್ಗೆ ನಿರ್ದೇಶನ ಮಾಡಿದ್ದಾರೆ.

More articles

Latest article