Saturday, April 6, 2024

ರೋಟರಿ ಕ್ಲಬ್ ಮೊಡಂಕಾಪು ವತಿಯಿಂದ ಸ್ವಚ್ಚತಾ ಕಾರ್ಯಕ್ಕೆ ಕೈಕಂಬದಲ್ಲಿ ಚಾಲನೆ

ಬಂಟ್ವಾಳ: ರೋಟರಿ ಕ್ಲಬ್ ಮೊಡಂಕಾಪು ವತಿಯಿಂದ ಅಧ್ಯಕ್ಷ ಎಲಿಯಾಸ್ ಸ್ಯಾಕ್ಟಿಸ್ ಅವರ ನೇತ್ರತ್ವದಲ್ಲಿ ಪ್ರಥಮ ಸೇವಾ ಕಾರ್ಯಕ್ರಮದ ಅಂಗವಾಗಿ ಪೇಟೆ ಸ್ವಚ್ಚತಾ ಕಾರ್ಯಕ್ಕೆ ಕೈಕಂಬದಲ್ಲಿ ಚಾಲನೆ ನೀಡಲಾಯಿತು.
ಪೇಟೆ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ನಿಯೋಜಿತ ಜಿಲ್ಲಾ ಗವರ್ನರ್ ರೋ! ಪ್ರಕಾಶ್ ಕಾರಂತ್ ಅವರು, ರೋಟರಿ ಕ್ಲಬ್ ವಿಶೇಷವಾಗಿ ಸೇವಾ ಸಂಸ್ಥೆಯಾಗಿದ್ದು, ಜನರ ಸೇವೆಗಾಗಿ ಹೆಚ್ಚಿನ ಮಹತ್ವ ನೀಡುತ್ತದೆ. ಈ ನಿಟ್ಟಿನಲ್ಲಿ ಹೊಸದಾಗಿ ರೂಪುಗೊಂಡ ಮೊಡಂಕಾಪು ರೋಟರಿ ಕ್ಲಬ್ ನ ಪ್ರಥಮ ಸೇವಾ ಕಾರ್ಯಕ್ರಮ ಪರಿಸರದ ಸ್ವಚ್ಚತೆಗೆ ಆಧ್ಯತೆ ನೀಡಿದೆ.


ಗಾಂಧಿಯವರ ಪರಿಕಲ್ಪನೆಯ ಸ್ವಚ್ಚತಾ ಆಂದೋಲನದ ಮುಂದಿನ ಹಂತ 2014 ರಲ್ಲಿ ಪ್ರಧಾನಿ ಮೋದಿಯವರ ನೇತ್ರತ್ವದಲ್ಲಿ ವಿಸ್ತಾರವಾಗಿದೆ. ಸ್ವಚ್ಚತೆ ಎಂಬುದು ಸ್ವಂತಿಕೆಯ ಮೂಲಕ ಮನಸ್ಸಿಂದ ಆಗಬೇಕಾಗಿದೆ. ನಾವು ಸ್ವಚ್ಛ ವಾಗುವ ಮೂಲಕ ಮನೆಮನ ಪರಿಸರ ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಬೇಕು ಎಂಬ ದೃಷ್ಟಿಯಿಂದ ರೋಟರಿ ಕ್ಲಬ್ ಮೊಡಂಕಾಪು ಕೇವಲ ಸಂದೇಶವನ್ನು ಮಾತ್ರ ನೀಡುವ ಕೆಲಸ ಮಾಡುತ್ತಿದೆ.
ಪರಿಸರ ಸ್ವಚ್ಚತೆಗೆ ಎಲ್ಲ ರ ಸಹಕಾರ ಬೇಕು , ರೋಟರಿ ಮೊಡಂಕಾಪು ಅವರ ಕಲ್ಪನೆಗೆ ಎಲ್ಲರೂ ಕೈ ಜೋಡಿಸಿ ಎಂದು ಅವರು ವಿನಂತಿ ಮಾಡಿದರು.
ರೋಟರಿ ಕ್ಲಬ್ ಮೊಡಂಕಾಪು ಇದರ ಅಧ್ಯಕ್ಷ ಎಲಿಯಾಸ್ ಸ್ಯಾಕ್ಟಿಸ್ ಅವರು ಮಾತನಾಡಿ ಮೊಡಂಕಾಪು ರೋಟರಿಕ್ಲಬ್ ಉದಯಿಸಿದ ಬಳಿಕ ಪ್ರಥಮ ಸೇವಾ ಕಾರ್ಯವೇ ಸ್ವಚ್ಚತಾ ಆಂದೋಲನ , ಈ ಮೂಲಕ ಪ್ರತಿ ಆದಿತ್ಯವಾರ ಬೆಳಿಗ್ಗೆ 7.30 ರಿಂದ ,9 ಗಂಟೆವರೆಗೆ ರೋಟರಿ ಕ್ಲಬ್ ಸದಸ್ಯರು ಹಾಗೂ ಬಂಟ್ವಾಳ ಪುರಸಭಾ ಇಲಾಖೆಯ ಸಹಕಾರದೊಂದಿಗೆ ಕಾರ್ಮಿಕರ ಜೊತೆ ಪೇಟೆ ಸ್ವಚ್ಚತಾ ಆಂದೋಲನಕ್ಕೆ ಕೈಕಂಬ ದಲ್ಲಿ ಚಾಲನೆ ನೀಡಿದ್ದೇವೆ.ಮುಂದಿನ ದಿನಗಳಲ್ಲಿ ಸ್ವಚ್ಛ ಪರಿಸರ ನಿರ್ಮಾಣ ದೃಷ್ಟಿಯಿಂದ ಬೇರೆ ಬೇರೆ ಯೋಜನೆ ಗಳ ಯೋಚನೆ ಮಾಡಲಾಗಿದೆ.ಜನರಿಗೆ ಮನವರಿಕೆ ಮಾಡುವ ಸಣ್ಣ ಪ್ರಯತ್ನ ನಮ್ಮದು, ಸ್ವಚ್ಛ ನಗರ ಮಾಡಲು ಪ್ರತಿಯೊಬ್ಬರ ಸಹಕಾರ ಅತೀ ಅಗತ್ಯವಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ರೋಟರಿ ಕ್ಲಬ್ ಮಾಜಿ‌ ಅಧ್ಯಕ್ಷ ನಾರಾಯಣ ಹೆಗ್ಡೆ, ಗವರ್ನರ್ ವಿಶೇಷ ಪ್ರತಿನಿಧಿ ಸಂಜೀವ ಪೂಜಾರಿ, ಲೊರೆಟ್ಟೋ ಹಿಲ್ ರೋಟರಿ ಕ್ಲಬ್ ಚಾರ್ಟರ್ ಅಧ್ಯಕ್ಷ ಅವಿಲ್ ಮಿನೇಜಸ್, ಅಧ್ಯಕ್ಷ ರಾಘವೇಂದ್ರ ಭಟ್, ಕಾರ್ಯದರ್ಶಿ ಶೃತಿ ಮಾಡ್ತಾ ಉಪಸ್ಥಿತರಿದ್ದರು.

More from the blog

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ಚೆಂಡಿನ ಗದ್ದೆಯಲ್ಲಿ ಪ್ರಥಮ ಚೆಂಡು

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದ ಚೆಂಡಿನ ಗದ್ದೆಯಲ್ಲಿ ಇಂದು ಪ್ರಥಮ ಚೆಂಡು ನಡೆಯಿತು. ‌ ಇವತ್ತಿನಿಂದ ಮುಂದಿನ ಐದು ದಿನಗಳ ಕಾಲ ಇಲ್ಲಿ ಚೆಂಡು...

ಏಪ್ರಿಲ್ 7ರಂದು ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಬಂಟ್ವಾಳ: ಏಪ್ರಿಲ್ 7ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ತಾಲೂಕು ಘಟಕದ...

ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ : ಸಹಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ನೀಲಪ್ಪ ಪೂಜಾರಿ ಅವರ ಮಗ ಪವನ್ ( 17) ಮೃತಪಟ್ಟ ಬಾಲಕ. ಮನೆಯಿಂದ...