Thursday, October 19, 2023

ಚೆನ್ನೈತ್ತೋಡಿ ಗ್ರಾಮ ಸಂಪೂರ್ಣ ಸೀಲ್ ಡೌನ್ ಆಗುತ್ತಾ?

Must read

ಬಂಟ್ವಾಳ: ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮಪಂಚಾಯತ್ ನ ಎಲ್ಲಾ ಗ್ರಾಮಗಳು ಜೂನ್ 13 ರ ಸೋಮವಾರದಿಂದ ಮುಂದಿನ ಸೋಮವಾರದ ವರಗೆ ಒಂದು ವಾರಗಳ ಕಾಲ ಸಂಪೂರ್ಣ ಸೀಲ್ ಡೌನ್ ? ಹೀಗೊಂದು ನಿರ್ಣಯವನ್ನು ಗ್ರಾಮಪಂಚಾಯತ್ ಟಾಸ್ಕ್ ಫೋರ್ಸ್ ಸಮಿತಿ ನಿರ್ಣಯ ಮಾಡಿದ್ದು ಜಿಲ್ಲಾಧಿಕಾರಿ ಅದೇಶಕ್ಕಾಗಿ ಎದುರುನೋಡುತ್ತಿದ್ದಾರೆ.

ಜಿಲ್ಲಾಧಿಕಾರಿಯವರ ಕಚೇರಿಗೆ ನಿರ್ಣಯ ದ ವರದಿಯನ್ನು ಕಳುಹಿಸಲಾಗಿದ್ದು ಇನ್ನೇನು ಅದೇಶಕ್ಕಾಗಿ ಕಾಯುತ್ತಿದ್ದಾರೆ.

ಜಿಲ್ಲೆಯಲ್ಲಿ ಪ್ರಥಮವಾಗಿ ಬಂಟ್ಚಾಳ ವಿಧಾನಸಭಾ ಕ್ಷೇತ್ರದ ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿ ಸೀಲ್ ಡೌನ್ ಮಾಡಲು ಸಮಿತಿ ನಿರ್ಣಯ ಮಾಡಿದೆ.

ಚೆನ್ನೈತ್ತೋಡಿ ಗ್ರಾ.ಪಂ.ನ ಲ್ಲಿ ಒಟ್ಟು ನಾಲ್ಕು ಗ್ರಾಮಗಳು ಒಳಗೊಂಡಿದೆ.

*ಗ್ರಾಮ ಪಂಚಾಯತು ವ್ಯಾಪ್ತಿಯ ಅಜ್ಜಿಬೆಟ್ಟು, ಚೆನ್ನೈತ್ತೋಡಿ, ಕುಡಂಬೆಟ್ಟು ಹಾಗೂ ಪಿಲಿಮೊಗರು ಗ್ರಾಮಗಳ ಪೇಟೆಗಳು ಹಾಗೂ ಗ್ರಾಮೀಣ ಪ್ರದೇಶಗಳು ಸಂಪೂರ್ಣವಾಗಿ ಸೀಲ್ ಡೌನ್ ಆಗಲಿದ್ದು ಅಂಗಡಿ ಮುಗ್ಗಟ್ಟುಗಳು ಸಹಿತ ಎಲ್ಲಾ ರೀತಿಯ ವ್ಯವಹಾರಗಳನ್ನು ಸ್ಥಗಿತಗೊಳಿಸಲಾಗಿದೆ.*

*ಇದೇ ಭಾನುವಾರ 12 ಗಂಟೆ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು ಸೋಮವಾರದಿಂದ ಮುಂದಿನ ಭಾನುವಾರ ತನಕ ಮೆಡಿಕಲ್ ಮತ್ತು ಅಸ್ಪತ್ರೆ ಸೇವೆಗಳನ್ನು ಹೊರತು ಪಡಿಸಿ ಸರಕಾರಿ ಕಚೇರಿಗಳು, ಬ್ಯಾಂಕಿಂಗ್ ಕಚೇರಿಗಳ ಸಹಿತ ಎಲ್ಲಾ ರೀತಿಯ ವ್ಯವಹಾರ, ಸಾರ್ವಜನಿಕರ ಓಡಾಟ ಹಾಗೂ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.*

*ತುರ್ತು ಸಂದರ್ಭದಲ್ಲಿ ಅಡುಗೆ ಅನಿಲ ಮತ್ತು ಪಡಿತರ ಸಾಮಾಗ್ರಿಗಳಿಗಾಗಿ ಕರೆ ಮಾಡಿದ್ದಲ್ಲಿ ವಿತರಕರು ಗ್ರಾಹಕರ ಮನೆಗೆ ತಲುಪಿಸಲು ಅವಕಾಶವಿದೆ*

*ಅತೀ ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಗ್ರಾಮ ಪಂಚಾಯತು ಕಾರ್ಯಪಡೆಯ ಪ್ರಮುಖರ ಸಹಾಯವನ್ನು ಪಡೆಯಬಹುದಾಗಿದೆ.*

ಕೊರೊನಾ ಸೊಂಕಿತರ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗಿದೆ.

ಸೊಂಕು ಕಡಿಮೆ ಮಾಡುವ ಉದ್ದೇಶದಿಂದ ಸೀಲ್ ಡೌನ್ ಮಾಡಲು ಟಾಸ್ಕ್ ಫೋರ್ಸ್ ಸಮಿತಿ ನಿರ್ಣಯ ಮಾಡಿದೆ.

ನಾಳೆ 10 ಗಂಟೆ ವರೆಗೆ ಅಂಗಡಿಗಳು ಓಪನ್ ಮಾಡಲು ಅವಕಾಶ ನೀಡಿದ್ದು ಅ ಬಳಿಕ ಒಂದು ವಾರಗಳ ಕಾಲ ಸಂಪೂರ್ಣ ಬಂದ್ ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಗ್ರಾ.ಪಂ.ಅಧ್ಯಕ್ಷೆ ಭಾರತಿರಾಜೇಂದ್ರ ತಿಳಿಸಿದ್ದಾರೆ.

ಕೋವಿಡ್ ಎರಡನೇ ಅಲೆಯ ಸೊಂಕು ನಿಯಂತ್ರಣಕ್ಕಾಗಿ ಯಾವುದೇ ಗ್ರಾಮವನ್ನು ಸಂಪೂರ್ಣ ಸೀಲ್ ಡೌನ್ ಮಾಡಿಲ್ಲ, ಆದರೆ

ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾ.ಪಂ.ನಲ್ಲಿ ಕೋವಿಡ್ 19 ನ ಎರಡನೇ ಅಲೆಯಲ್ಲಿ ಸೊಂಕು ನಿಯಂತ್ರಣ ಸಾಧಿಸಲು ಗ್ರಾ.ಪಂ. ಒಂದುವಾರಗಳ ಕಾಲ ಸಂಪೂರ್ಣ ಸೀಲ್ ಡೌನ್ ಮಾಡುವ ಚಿಂತನೆಯಿಂದ ನಿರ್ಣಯ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ವರದಿ ಕಳುಹಿಸಲಾಗಿದೆ.ಮುಂದಿನ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಅವರ ಸೂಚನೆ ಮೇರೆಗೆ ಕೈಗೊಳ್ಳಲಾಗುತ್ತದೆ ಎಂದು ಬಂಟ್ವಾಳ ತಹಶಿಲ್ದಾರ್ ರಶ್ಮಿ. ಎಸ್ ಆರ್ ತಿಳಿಸಿದ್ದಾರೆ.

More articles

Latest article