Thursday, October 26, 2023

“ಸೇವಾ ಹಿ ಸಂಘಟನ್ ಚಟುವಟಿಕೆ”

Must read

ಪುಂಜಾಲಕಟ್ಟೆ: ಪಿಲಾತಬೆಟ್ಟು ಬಿ.ಜೆ.ಪಿ ಬೂತ್ ಸಮಿತಿ ವತಿಯಿಂದ ಪ್ರಧಾನಿ ಮೋದಿಯವರ ಆಡಳಿತದ 7ನೇ ವರ್ಷದ ಸಂಭ್ರಮಾಚರಣೆ , “ಸೇವಾ ಹಿ ಸಂಘಟನ್ ಚಟುವಟಿಕೆ” ಜಿ. ಪಂ. ಸದಸ್ಯ ಯಂ. ತುಂಗಪ್ಪ ಬಂಗೇರ ನೇತೃತ್ವದಲ್ಲಿ , ವಿದ್ಯುತ್ ಬೆಳಕು , ಸ್ವಚ್ಛತೆ, ಗಿಡನೆಡುವಿಕೆ , ಸಹಾಯಹಸ್ತ ಕಾರ್ಯಕ್ರಮ ನಡೆಯಿತು.

1) ಪಿಲಾತಬೆಟ್ಟು ನಿನ್ಯಾರು ಬಳಿಯ  ವಾರಿಜ ಆಚಾರ್ಯರ ಮನೆಗೆ ರೂ. 35,000 ವೆಚ್ಚದಲ್ಲಿ ವಿದ್ಯುಚ್ಛಕ್ತಿಯ ಮೂಲಕ ಬೆಳಕು ನೀಡಲಾಯಿತು.

2) ದುಗಮಾರ್ ಗುಡ್ಡೆ ಸಂಜೀವ ಕೊರಗರ ಮನೆಗೆ ಸಂಪರ್ಕ ಕಡಿದ ವಿದ್ಯುತ್ತಿಗೆ ಸರ್ವಿಸ್ ವಯರ್ ಎಳೆದು ಸಂಪರ್ಕ ಕಲ್ಪಿಸಲಾಯಿತು.

3) ಮೂರ್ಜೆ ಸಾರ್ವಜನಿಕ ಶೌಚಾಲಯ ಹಾಗೂ ಸುತ್ತಮುತ್ತ ಬೆಳೆದ ಗಿಡಗಂಟಿಗಳನ್ನು ಸ್ವಚ್ಛ ಗೊಳಿಸಲಾಯಿತು.

4) ನೈನಾಡು ಶಶಾಂಕ್ ಇಂಡಸ್ಟ್ರೀಯ ಬಳಿ ಹಣ್ಣಿನ ಗಿಡಗಳನ್ನು ನೆಡಲಾಯಿತು.

5) ಅಪಘಾತದಲ್ಲಿ ಅಂಗವೈಕಲ್ಯಕ್ಕೆ ತುತ್ತಾಗಿ ದುಡಿಯಲಾಗದ ನೈನಾಡು ಸ್ನೇಹಗಿರಿ ಬಳಿಯ ಮಾನ್ಯ ಲೋಕಯ್ಯರ ಮನೆಗೆ ಆಹಾರದ ಕಿಟ್ ನೀಡಲಾಯಿತು.

ಈ ಅಭಿಯಾನದಲ್ಲಿ ಜಿ.ಪಂ. ಸದಸ್ಯ ಯಂ. ತುಂಗಪ್ಪ ಬಂಗೇರ, ಪಿಲಾತಬೆಟ್ಟು ಗ್ರಾ. ಪಂ.ಅಧ್ಯಕ್ಷೆ  ಹರ್ಷಿಣಿ ಪುಷ್ಪಾನಂದ , ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ ಹೆಗ್ಡೆ, ಗ್ರಾ. ಪಂ.ಸದಸ್ಯರಾದ ಯೋಗೇಂದ್ರ , ಕಾಂತಪ್ಪ ಕರ್ಕೇರ,  ಶಾರದ, ವಿದ್ಯುತ್ ಸಂಪರ್ಕಕ್ಕೆ ಸಹಕರಿಸಿದ ಪ್ರಸಾದ್ ಅತ್ತಾಜೆ ಇವರೊಂದಿಗೆ ಪುಷ್ಪಾನಂ ಮೂರ್ಜೆ, ಶಶಾಂಕ್ ಕ್ಯಾಶ್ಯೂ ಇಂಡಸ್ಟ್ರೀ ಮ್ಹಾಲಕರಾದ ಹರೀಂದ್ರ ಪೈ , ಪುರುಷೋತ್ತಮ ಅತ್ತಾಜೆ, ರುಕ್ಮಯ್ಯ ಕನಲ್ದಪಲ್ಕೆ, ಹರೀಶ್ ಶೆಟ್ಟಿ ನೈನಾಡು, ಕೇಶವ ಪೂಜಾರಿ ಕಾಡಬೆಟ್ಟು, ರವೀಂದ್ರ ಪೂಜಾರಿ ಕಾಡಬೆಟ್ಟು ಮತ್ತಿತರರು ಭಾಗವಹಿಸಿದರು.

More articles

Latest article