Wednesday, April 17, 2024

ಬಂಟ್ವಾಳ: 1983ರಲ್ಲಿ ನಿರ್ಮಾಣವಾಗಿ 2017ರ ವರೆಗೆ ಬಂಟ್ವಾಳದ ಜನರ ಸಾಂಸ್ಕೃತಿ, ರಾಜಕೀಯ ಚಟುವಟಿಕೆಗಳಿಗೆ ವೇದಿಕೆಯಾಗಿದ್ದ ಸುಮಾರು 40 ವರ್ಷ ಹಳೇಯ ಬಿ.ಸಿ.ರೋಡಿನ ರಂಗಮಂದಿರ ಕಟ್ಟಡ ಇನ್ನೇನು ಕೆಲವೇ ದಿನಗಳಲ್ಲಿ ಧರೆಶಾಯಿಯಾಗಲಿದೆ.

1983ರಲ್ಲಿ ಈ ಸಾರ್ವಜನಿಕ ರಂಗಮಂದಿರವನ್ನು ನಿರ್ಮಿಸಲಾಗಿತ್ತು. ಅಂದಿನ ತಹಶೀಲ್ದಾರ್ ಆರ್.ಕೆ.ರಾಜು ಅವರ ಮುತುವರ್ಜಿಯಿಂದ ರಂಗಮಂದಿರವನ್ನು ಸಾರ್ವಜನಿಕರ ಸಹಕಾರದೊಂದಿಗೆ ನಿರ್ಮಿಸಲಾಗಿತ್ತು. ಅಂದಿನಿಂದ ಅಂದರೆ 1983ರಿಂದ 2017ರವರೆಗೆ ಸಾಂಸ್ಕೃತಿಕ, ರಾಜಕೀಯ ಚಟುವಟಿಕೆಗಳಿಗೆ ಸಾಕ್ಷಿಯಾಗಿದೆ.

ಕಟ್ಟಡ ನಿರ್ಮಾಣದ ಬಳಿಕ ಬಂಟ್ವಾಳ ತಾಲೂಕಿನ ಸಾರ್ವಜನಿಕರಿಗೆ ನಾಟಕ, ಕರಾವಳಿ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮ, ರಾಜಕೀಯ ಕಾರ್ಯಕ್ರಮ, ಪ್ರತಿಭಟನೆ ಹಾಗೂ ಇತರ ಸಾರ್ವಜನಿಕ ಕಾರ್ಯಕ್ರಮಗಳು ಇದೇ ರಂಗಮಂದಿರ‌ ಕಟ್ಟಡದಲ್ಲಿ ನಡೆಯುತ್ತಿದ್ದವು.

ಈ ಕಟ್ಟಡ ಪ್ರಸಕ್ತ ನಿರುಪಯುಕ್ತವಾಗಿದ್ದು ಸಂಪೂರ್ಣ ಶಿಥಿಲಗೊಂಡಿದೆ. ಕಾರ್ಯಕ್ರಮ ಆಯೋಜಿಸಲು ಅಯೋಗ್ಯವಾಗಿದೆ. ಎರಡು ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಬಿ.ಸಿ.ರೋಡ್ ಕೈಕುಂಜೆ ರಸ್ತೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಈ ಕಟ್ಟಡವನ್ನು ಕೆಡವಲು ನಿರ್ಧರಿಸಲಾಗಿದೆ.

ತಾಲೂಕು ಕಚೇರಿಯನ್ನು ಕೆಡವಿ ನೂತನ ಮಿನಿ ವಿಧಾನ ಸೌಧ ನಿರ್ಮಾಣದ ಸಂದರ್ಭದಲ್ಲಿ ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತ ಜನಸ್ನೇಹಿ ಕೇಂದ್ರವನ್ನು ಈ ಕಟ್ಟಡಕ್ಕೆ ವರ್ಗಾಹಿಸಲಾಗಿತ್ತು. ಮಿನಿವಿಧಾನ ಸೌಧ ನಿರ್ಮಾಣದ ಬಳಿಕ ಈ ಕಟ್ಟಡವನ್ನು ಕೆಡವುವ ಪ್ರಸ್ತಾಪ ಕೇಳಿ ಬಂದರೂ ಕೆಡವದೆ ಹಾಗೆಯೇ ಉಳಿಸಲಾಗಿತ್ತು.

ಇದೀಗ ರಸ್ತೆ ಅಭಿವೃದ್ಧಿಯ ಕೆಲಸದ ಹೊತ್ತಿನಲ್ಲಿ ಬಿ.ಸಿ.ರೋಡಿನ ಮರಣಶಯ್ಯೆಯಲ್ಲಿದ್ದ ಹಳೆಯ ಕಟ್ಟಡವೊಂದಕ್ಕೆ ಮೋಕ್ಷ ನೀಡುವ ಕಾರ್ಯವಾಗುತ್ತಿದೆ.

More from the blog

ಜಿಲ್ಲೆಯಲ್ಲಿ ಜೆ.ಡಿ.ಎಸ್.ಪಕ್ಷ ನಿಷ್ಕ್ರಿಯವಾಗಲು ಕಾರಣರಾದ ಜೆ.ಡಿ.ಎಸ್.ಜಿಲ್ಲಾಧ್ಯಕ್ಷ ಮಾದವ ಗೌಡರು ರಾಜೀನಾಮೆ ನೀಡುವಂತೆ ಒತ್ತಾಯ

ಜೆ.ಡಿ.ಎಸ್.ಪಕ್ಷ ಜಿಲ್ಲೆಯಲ್ಲಿ ನಿಷ್ಕ್ರಿಯವಾಗಲು ಜೆ.ಡಿ.ಎಸ್.ಜಿಲ್ಲಾಧ್ಯಕ್ಷ ಮಾದವ ಗೌಡ ಅವರೇ ಕಾರಣರಾಗಿದ್ದು, ನೈತಿಕ ಹೊಣೆ ಹೊತ್ತು ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಮುಖಂಡ ಅಬುಬಕ್ಕರ್ ಅಮ್ಮಂಜೆ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಅಧ್ಯಕ್ಷ...

ಹಿಂದೂ ಸಂಘಟನೆ ಮುಖಂಡನಿಗೆ ಚೂರಿ ಇರಿದ ಪ್ರಕರಣ : ಆರೋಪಿ ಅರೆಸ್ಟ್

ಬಂಟ್ವಾಳ: ಹಿಂದೂ ಸಂಘಟನೆಯ ಮುಖಂಡನೋರ್ವನಿಗೆ ಚೂರಿ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ನಗರ ಠಾಣೆಯ ಪೋಲೀಸರು ಬಂಧಿಸಿದ ಘಟನೆ ಇಂದು ನಡೆದಿದೆ. ಬಂಟ್ವಾಳ ನಿವಾಸಿ ರವಿ ಯಾನೆ ರವೀಂದ್ರ ಬಂಧಿತ ಆರೋಪಿಯಾಗಿದ್ದಾನೆ. ಎ.14 ರಂದು ಆದಿತ್ಯವಾರ...

ಬಂಟ್ವಾಳ: ಕರ್ಪೆ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕಸಭಾ ಚುನಾವಣೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಬಹುಮತದಿಂದ ಗೆಲ್ಲಿಸಿಕೊಡುವಂತೆ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ" ಕಾರ್ಯಕ್ರಮದ ಮೂಲಕ ಬಂಟ್ವಾಳದ...

ವೈದ್ಯರ ಎಡವಟ್ಟು : ಕುಡಿದ ಮತ್ತಿನಲ್ಲಿ ರೈಲ್ವೆ ಗೇಟ್ ಗೆ ಡಿಕ್ಕಿ

ಮಂಗಳೂರಿನ ಹೆಸರಾಂತ ಮನೋರೋಗ ತಜ್ಞರೊಬ್ಬರು ಕುಡಿದ ಮತ್ತಿನಲ್ಲಿ ರೈಲ್ವೆ ಗೇಟ್ ಗೆ ಡಿಕ್ಕಿ ಹೊಡೆದು ಆವಾಂತರ ಸೃಷ್ಟಿಸಿದ ಘಟನೆ ನಗರ ಹೊರ ವಲಯದ ಪರಂಗಿಪೇಟೆ ಬಳಿಯ ಅರ್ಕುಳ ಎಂಬಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಕುಡಿದ...