ಬಂಟ್ವಾಳ: ಆರನೇ ವೇತನ ಆಯೋಗದ ಶಿಫಾರಸು ಜಾರಿ ಆಗಲೇಬೇಕು, ಎಸ್ಮಾ ಜಾರಿಗೂ ಬಗ್ಗುವುದಿಲ್ಲ ಎಂದು ಪಟ್ಟು ಹಿಡಿದಿರುವ ಸಾರಿಗೆ ನೌಕರರ ಒಕ್ಕೂಟ ಅನಿರ್ದಿಷ್ಟಾವಧಿ ಮುಷ್ಕರದ ಪರಿಣಾಮ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು,  ತಾಲೂಕಿನಲ್ಲೂ ಕೆಎಸ್ ಆರ್ ಟಿಸಿ ಬಸ್ಸುಗಳು ಓಡಾಟ ಸ್ತಬ್ಧಗೊಂಡಿದೆ.

ಬಂಟ್ವಾಳದಲ್ಲೂ ಸಾರಿಗೆ ಸಂಚಾರ ಬಂದ್: ಸಾರಿಗೆ ನೌಕರರ ಮುಷ್ಕರದ ಪರಿಣಾಮ ಬಂಟ್ವಾಳ ತಾಲೂಕಿನಲ್ಲೂ ಕೆಎಸ್‌ಆರ್ ಟಿಸಿ ಬಸ್ಸುಗಳು ಓಡಾಟ ಸ್ತಬ್ದಗೊಂಡಿದ್ದು, ಜನತೆ ಖಾಸಗಿ ಹಾಗೂ ಇತರ ವಾಹನಗಳ ಮೂಲಕ ತಮ್ಮ ಪ್ರಯಾಣ ಬೆಳೆಸುತ್ತಿದ್ದಾರೆ.

ಸಾರಿಗೆ ನೌಕರರ ಮುಷ್ಕರದ ಪರಿಣಾಮ ಬಂಟ್ವಾಳ ತಾಲೂಕಿನಲ್ಲೂ ಕೆಎಸ್‌ಆರ್ ಟಿಸಿ ಬಸ್ಸುಗಳು ಓಡಾಟ ಸ್ತಬ್ದಗೊಂಡಿದ್ದು, ಜನತೆ ಖಾಸಗಿ ಹಾಗೂ ಇತರ ವಾಹನಗಳ ಮೂಲಕ ತಮ್ಮ ಪ್ರಯಾಣ ಬೆಳೆಸುತ್ತಿದ್ದಾರೆ.

ಬೆಳ್ತಂಗಡಿಲ್ಲೂ ಸಾರಿಗೆ ಸಂಚಾರ ಬಂದ್: ವಿವಿಧ ಬೇಡಿಕೆ ಮುಂದಿಟ್ಟು ಸಾರಿಗೆ ನೌಕರರ ನಡೆಸಿರುವ ಮುಷ್ಕರದ ಪರಿಣಾಮ ಬೆಳ್ತಂಗಡಿ ತಾಲೂಕಿನಲ್ಲೂ ಕೆಎಸ್ ಆರ್ ಟಿಸಿ ಬಸ್ಸುಗಳು ಓಡಾಟ ಸ್ತಬ್ಧಗೊಂಡಿದೆ. ಮಂಗಳವಾರ ಸಂಜೆ ಧರ್ಮಸ್ಥಳ ಡಿಪ್ಪೋದಲ್ಲಿ ತಂಗಿದ್ದ ಹುಬ್ಬಳಿ, ಚಿಕ್ಕಮಗಳೂರು, ಕೊಳ್ಳೇಗಾಲ ಬಸ್ ಗಳು ಮುಂಜಾನೆ ಮರಳಿ ಸಂಚರಿಸಿದೆ. ಅದರ ಹೊರತಾಗಿ ಯಾವುದೇ ಕೆಎಸ್‌ಆರ್ ಟಿಸಿ ಬಸ್ ಓಡಾಟ ನಡೆಸಿಲ್ಲ. ಖಾಸಗಿ ಬಸ್ ಮಾಲಕರು ಹೆಚ್ಚುವರಿ ಬಸ್ ಓಡಾಟ ನಡೆಸಿದೆ. ಹೀಗಾಗಿ ಹೆಚ್ಚಿನ ತೊಂದರೆ ಕಂಡುಬಂದಿಲ್ಲ.

ಪುತ್ತೂರಿನಲ್ಲೂ ಸಾರಿಗೆ ಸಂಚಾರ ಬಂದ್: ಪುತ್ತೂರಿನಲ್ಲೂ ಬೆಳಗ್ಗಿನಿಂದಲೇ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಸರಕಾರಿ ಬಸ್ ಸಂಚಾರ ಇಲ್ಲದ ಹಿನ್ನೆಲೆಯಲ್ಲಿ ಹಲವೆಡೆ ಪ್ರಯಾಣಿಕರು ಪರದಾಡುತ್ತಿರುವ ದೃಶ್ಯ ಕಂಡು ಬಂದಿದೆ. ಬಸ್ ನಿಲ್ದಾಣದಲ್ಲಿ ಬಸ್‌ಗಳು ನಿಂತಲ್ಲೇ ಇದ್ದು, ಕೆಲ ಪ್ರಯಾಣಿಕರು ಬಸ್ ಹೊರುಡುವುದನ್ನೇ ನಿರೀಕ್ಷಿಸುತ್ತಿರುವ ದೃಶ್ಯ ಕಂಡು ಬಂದಿದೆ. ಕೆಲ ಕಾರ್ಮಿಕರು ಊರಿಗೆ ತೆರಳಲು ಸಾಧ್ಯವಾಗದೆ ಪರಿತಪಿಸುತ್ತಿದ್ದರೆ, ಬೇರೆ ಊರುಗಳಿಂದ ಬಂದ ಪ್ರಯಾಣಿಕರು ಊರಿಗೆ ತೆರಳಲು ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಗಿದೆ.

ಧರ್ಮಸ್ಥಳ, ಮಂಗಳೂರು, ಪುತ್ತೂರು, ಉಪ್ಪಿನಂಗಡಿ, ಮೂಡುಬಿದ್ರೆ ಸೇರಿದಂತೆ ಪ್ರಮುಖ ಕಡೆಗಳಿಗೆ ಖಾಸಗಿ ಬಸ್ ಒಡಾಟ ನಡೆಸಿವೆ.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here