ಬಂಟ್ವಾಳ: ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದು ಯುವಕನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನ ಕಳೆದರು ಆರೋಪಿಗಳ ಪತ್ತೆಯಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

ಬ್ರಹ್ಮರಕೋಟ್ಲು ನಿವಾಸಿ ಮನೋಜ್ ಸಪಲ್ಯ ಅವರಿಗೆ ಆದಿತ್ಯವಾರ ರಾತ್ರಿ ವೇಳೆ ತುಂಬೆಯಿಂದ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದ ಅಪರಿಚಿತ ವ್ಯಕ್ತಿಗಳು ಬಿಸಿರೋಡು ಅಜ್ಕಿಬೆಟ್ಟು ಕ್ರಾಸ್ ನಲ್ಲಿ ಚೂರಿ ಯಿಂದು ಇರಿದು ಪರಾರಿಯಾಗಿದ್ದರು.

ಘಟನೆ ನಡೆದು ಎರಡು ದಿನಗಳು ಕಳೆದರೂ ಆರೋಪಿಗಳ ಸುಳಿವು ಪೋಲೀಸರಿಗೆ ಲಭ್ಯವಾಗಿಲ್ಲ.

ಘಟನೆ ನಡೆದ ಜಾಗದಲ್ಲಿ ಸಿ.ಸಿ.ಕ್ಯಾಮರಾ ಇದ್ದರೂ ಕೂಡ ಆರೋಪಿಗಳ ಪತ್ತೆಗೆ ಯಾಕೆ ತಡ ಎಂಬ ಮಾತುಗಳು ಕೇಳಿಬರುತ್ತಿದೆ.

*ಪತ್ತೆಗೆ ಮೂರು ತಂಡ*

ಬೈಕಿನಲ್ಲಿ ಬಂದು ಚೂರಿ ಇರಿತ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಡಿ.ವೈ.ಎಸ್.ಪಿ. ವೆಲೆಂಟೈನ್ ಡಿ.ಸೋಜ ತಿಳಿಸಿದ್ದಾರೆ.

ಡಿ.ವೈ.ಎಸ್.ಪಿ.ನೇತೃತ್ವದಲ್ಲಿ ಒಂದು ತಂಡ ಮತ್ತು ಉಳಿದಂತೆ ಅವರ ನೇತೃತ್ವದಲ್ಲಿ ನಗರ ಪೋಲೀಸ್ ಠಾಣೆಯ ಇನ್ಸ್ ಪೆಕ್ಟರ್ ಚೆಲುವರಾಜ್ ಹಾಗೂ ಟ್ರಾಫಿಕ್ ಎಸ್.ಐ. ರಾಜೇಶ್ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಲಾಗಿದೆ.

ಸ್ವಂತ ಅಣ್ಣನೇ ಚೂರಿ ಹಾಕಿದ್ದ ಎಂಬುದು ಕಟ್ಟು ಕಥೆ ಎಂಬ ವಿಷಯ ಬಹಿರಂಗ ವಾಗಿದೆ.

ಪ್ರಕರಣವನ್ನು ತಿರುಚುವ ಉದ್ದೇಶದಿಂದ ಅಣ್ಣನ ಹೆಸರು ಬಳಸಿ ಸಾಮಾಜಿಕ ಜಾಲತಾಣದ ಲ್ಲಿ ಸಂದೇಶ ಹರಿಯಬಿಡಲಾಗಿದೆ.

ಘಟನೆಗೂ ಅಣ್ಣ ನಿಗೂ ಯಾವುದೇ ಸಂಬಂಧ ವಿಲ್ಲ ಎಂಬುದು ಪೋಲೀಸರಿಗೆ ಮಾಹಿತಿ ಲಭ್ಯವಾಗಿದೆ.

ಆರೋಪಿಗಳು ಸುಳಿವು ಪೋಲೀಸರಿಗೆ ಲಭ್ಯವಾಗಿದ್ದು ಶೀಘ್ರದಲ್ಲಿ ಪತ್ತೆ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here