ಆ ಗ್ರಾಮದೊಳಗೆ ಒಂದು ರಾಷ್ಟ್ರೀಯ ಹೆದ್ದಾರಿ ರಸ್ತೆ ಹಾದು ಹೋದರೆ, ಮತ್ತೊಂದು ಕಡೆಯಿಂದ ನಮ್ಮ ಗ್ರಾಮ ನಮ್ಮ ರಸ್ತೆಯಲ್ಲಿ ಮಾಡಿದ ನೂತನ ರಸ್ತೆ ಇದ್ರೂ ಆ ಊರಿಗೆ ಇನ್ನೂ ಮುಖ ಮಾಡದ ಸರಕಾರಿ ಬಸ್ಸುಗಳು. ನಗರದೊಳಗೆ ಬಸ್ಸು ಸಂಚಾರವಿದ್ದರೆ ಎಷ್ಟೋ ಜನರಿಗೆ ಅದರ ಪ್ರಯೋಜನ ವಾಗುತ್ತದೆ. ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಬಸ್ಸುನ ವ್ಯವಸ್ಥೆ ಇದ್ದರೆ ಆ ಎರಡು ಊರುಗಳ ಬಾಂಧವ್ಯ ವೃದ್ಧಿಯಾಗುತ್ತದೆ. ಇದರಿಂದ ಮಾರುಕಟ್ಟೆ ವಿಸ್ತರಣೆಯೂ ಅಗುತ್ತದೆ. ಆದರೆ ಸೂಕ್ತ ರಸ್ತೆ ವ್ಯವಸ್ಥೆ ಇದ್ದರೂ ಆ ಗ್ರಾಮಕ್ಕೆ ಯಾವುದೇ ಸರಕಾರಿ ಬಸ್ಸಾಗಲೀ ಖಾಸಗೀ ಬಸ್ಸಾಗಲೀ ಕಾಲಿಡಲಿಲ್ಲ.

ಇದು ಇರುವುದು ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದಲ್ಲಿ. ಈ ಗ್ರಾಮದಲ್ಲಿರುವ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಭಾಗದ ಜನರು ಕಾಲ್ನಡಿಗೆಯ ಮೂಲಕವೇ ಬಂಟ್ವಾಳ ಬೈಪಾಸ್ ಅಜೆಕಲಕ್ಕೆ ಬಂದು ಬಂಟ್ವಾಳ ಪೇಟೆಗೆ ಬರುತ್ತಾರೆ. ನಮ್ಮ ಗ್ರಾಮದ ನಮ್ಮ ರಸ್ತೆ ಹಾದು ಹೋಗುವ ರಸ್ತೆಯ ಭಾಗದಲ್ಲಿರುವ ಗ್ರಾಮಸ್ಥರು ಸಿಕ್ಕಿದರೆ ಅಟೋ ಇಲ್ಲವೇ ನಮ್ಮದೇ ಕಾಲು ಎಂದು ಎಣಿಸಿ ತಮ್ಮ ನಿತ್ಯ ಕೆಲಸಗಳಿಗೆ ತೆರಳುತ್ತಾರೆ. ಇನ್ನು ಕೆಲವರು ತುರ್ತು ಕೆಲಸಕ್ಕೆಂದು ಮನೆಯಿಂದ ಹೊರಡುವಾಗಲೇ ಯಾರಾದರೂ ಪರಿಚಯಸ್ಥರ ವಾಹನ ಸಿಕ್ಕಿದರೆ ಸಾಕು ಎಂದು ದೇವರನ್ನು ಸ್ಮರಿಸಿಯೇ ಹೊರಡುತ್ತಾರೆ. ಪ್ರೌಢ ಶಿಕ್ಷಣ, ಕಾಲೇಜು ಶಿಕ್ಷಣ, ಐಟಿಐ, ಡಿಪ್ಲೋಮಾಗಳಂತಹ ಕೋರ್ಸುಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳು ಬಂಟ್ವಾಳ ಬೈಪಾಸ್ ಮಾರ್ಗ ಇಲ್ಲವೇ ನಲ್ಕೆಮಾರ್ ರಸ್ತೆ ಮೂಲಕವೇ ತಮ್ಮ ಕಾಲೇಜುಗಳಿಗೆ ಹೋಗಬೇಕು. ಪರೀಕ್ಷೆಯ ಸಮಯದಲ್ಲಂತೂ ವಿದ್ಯಾರ್ಥಿಗಳು ತುಂಬಾ ಕಷ್ಟ ಪಡಬೇಕು. ಮೇಲ್ಮಧ್ಯಮವರ್ಗದವರು ತಮ್ಮ ಸ್ವಂತ ವಾಹನಗಳನ್ನು ಸಂಚಾರಕ್ಕಾಗಿ ಬಳಸಿದರೆ, ಇತರ ಮಧ್ಯಮ ವರ್ಗದವರು ಹಾಗೂ ಬಡವರು ಆಟೋರಿಕ್ಷಾವನ್ನೇ ಅವಲಂಬಿಸಬೇಕಾಗಿದೆ.

ಹಿರಿಯ ಸಾಹಿತಿ ದಿ| ಏಂiiಲಕ್ಷ್ಮೀನಾರಾಯಣ ಆಳ್ವ, ಈಗ ಘನ ಸರಕಾರದ ಕಿಯೋನಿಕ್ಸ್‌ನ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಇವರ ಹುಟ್ಟೂರಾಗಿ ಆಗಿದ್ದು ಅವರ ಮನೆಯ ಬಳಿಯಲ್ಲಿಯೇ ಹೆದ್ದಾರಿ ರಸ್ತೆ ಹಾದು ಹೋಗಿರುತ್ತದೆ. ನಲ್ಕೆಮಾರ್, ತಲೆಂಬಿಲ, ಮಂಗ್ಲಿಮಾರ್, ಕಂಗಿಹಿತ್ಲು, ಕೆಂಪುಗುಡ್ಡೆ, ತಡ್ಯಾಲುಗುಡ್ಡೆ, ಕಜಿಪಿತ್ಲು, ಬಾಂಬಿಲ, ತಡ್ಯಾಲ್, ಮೈರಾ, ಕಿನ್ನಿಬೆಟ್ಟು, ಕಾಯರ್‌ಮಾರ್, ಅಜೆಕಲ, ಹೊಳ್ಳರಬೈಲು, ಮಾಣಿಜಾಲು, ಕಲಾಯಿ ಹೀಗೆ ಇದೆಲ್ಲಾ ಅಮ್ಟಾಡಿ ಗ್ರಾಮದ ಮುಖ್ಯ ಊರುಗಳು. ಇಷ್ಟು ಊರಿನಲ್ಲಿ ನೂರಕ್ಕಿಂತ ಜಾಸ್ತಿಯೇ ವಸತಿಗೃಹಗಳು, ಇಷ್ಟೇ ಅಲ್ಲದೇ ಭಜನಾ ಮಂದಿರ, ಬಾಂಬಿಲ ಚರ್ಚ್, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಶಾಲೆ, ಮಂಗ್ಲಿಮಾರ್ ಪುರಾತನ ದೈವಸ್ಥಾನ, ಅಂಬೇಡ್ಕರ್ ಭವನ ಹೀಗೆ ಜನರ ಅಗತ್ಯಕ್ಕೆ ಇರುವ ಎಲ್ಲ ವಿಷಯಗಳೂ ಇಲ್ಲಿವೆ.

ರಸ್ತೆ ಇದೆ ಬಸ್ಸಿಲ್ಲ : ಬಂಟ್ವಾಳ ಬೈಪಾಸ್ ಬಳಿಯಿಂದ ಅಮ್ಟಾಡಿ ಗ್ರಾಮದೊಳಗೆ ಅಜೆಕಲ-ಕೆಂಪುಗುಡ್ಡೆ-ಕಲ್ಪನೆ ರಸ್ತೆ ಕಾಮಗಾರಿಗೆ ಕೇಂದ್ರೀಯ ರಸ್ತೆ ನಿಧಿ ಯೋಜನೆಯಡಿ 2013ರಲ್ಲಿ ಸುಮಾರು 4 ಕೋಟಿ ಅನುದಾನ ಮಂಜೂರಾಗಿ ಅಚ್ಚುಕಟ್ಟಾಗಿ ಸುಸಜ್ಜಿತ ರಸ್ತೆಯನ್ನು ನಿರ್ಮಾಣವಾಗಿ ವರ್ಷಗಳು ಎಂಟು ಆದವು. ನಮ್ಮ ಗ್ರಾಮ ನಮ್ಮ ರಸ್ತೆಯಡಿಯಲ್ಲಿ ……………….. .ಆದರೆ ಆ ರಸ್ತೆಯಲ್ಲಿ ಕೆಂಪುಕಲ್ಲಿನ ವಾಹನಗಳು, ಮರಳಿನ ವಾಹನಗಳು ಹೀಗೆ ಸಾಲು ಸಾಲಾಗಿ ಘನವಾಹನಗಳು ಸಂಚರಿಸುತ್ತಿದ್ದರೂ ಕೆಎಸ್‌ಆರ್‌ಟಿಸಿ ಬಸ್ಸನ್ನು ಈ ಗ್ರಾಮದೊಳಗೆ ಕಳುಹಿಸಲು ಇನ್ನೂ ಮನಸ್ಸು ಮಾಡಿಲ್ಲ.

ಈ ಊರಿನಿಂದ ಕಲ್ಪನೆಗೆ ಕೇವಲ 8 ಕಿ.ಮೀ. ದೂರ ಇರುವುದು. ಇಲ್ಲಿಂದ ಬೆಂಜನಪದವು ಮಾರ್ಗವಾಗಿ ನೀರುಮಾರ್ಗ-ಮಂಗಳೂರು, ಫರಂಗಿಪೇಟೆ-ಮಂಗಳೂರು ತಲುಪಬಹುದು. ಅದೇ ರೀತಿ ಪುಣ್ಯ ಕ್ಷೇತ್ರಗಳಾದ ಕಲ್ಪನೆ-ಪೊಳಲಿ, ಕಟೀಲು ಹಾಗೂ ಬಜಪೆ ವಿಮಾನ ನಿಲ್ದಾಣವನ್ನೂ ತಲುಪಬಹುದು. ಬಂಟ್ವಾಳ ಹಾಗೂ ಸುತ್ತಲಿನ ಗ್ರಾಮೀಣ ಪ್ರದೇಶದ ಜನರಿಗೆ ಬಿ.ಸಿ.ರೋಡು ಹೋಗುವ ಬದಲು ಈ ಮಾರ್ಗವಾಗಿ ಮೇಲಿನ ಸ್ಥಳಗಳನ್ನು ತಲುಪುವುದು ಸುಲಭ ಸಾಧ್ಯವಾಗಿದೆ.

ಬಂಟ್ವಾಳ ಪೇಟೆಯೇ ಇಲ್ಲಿನವರಿಗೆ ಹತ್ತಿರ : ಕೆಂಪುಗುಡ್ಡೆ, ಕಾಯರ್‌ಮಾರ್, ಬಾಂಬಿಲ, ನಲ್ಕೆಮಾರ್, ಮಂಗ್ಲಿಮಾರ್ ಇತ್ಯಾದಿ ಊರುಗಳಿಂದ ಕೃಷಿಕರು, ವಿದ್ಯಾರ್ಥಿಗಳು, ಜನಸಾಮಾನ್ಯರು ಬಂಟ್ವಾಳ ಪೇಟೆ ಹೋಗಲು ಪಡುವ ಕಷ್ಟ ಹೇಳತೀರದು. ಬಟ್ಟೆ ಅಂಗಡಿ, ಚಿನ್ನದಂಗಡಿ, ಮನೆ ಸಾಮಾಗ್ರಿ ಇನ್ನಿತರ ಯಾವುದೇ ವಸ್ತುಗಳನ್ನು ತೆಗೆದುಕೊಳ್ಳಲು ಜನರು ಬಂಟ್ವಾಳ ಪೇಟೆಯನ್ನೇ ಅವಲಂಬಿಸಬೇಕಾಗಿದೆ. ಅಮ್ಟಾಡಿ ಗ್ರಾಮದ ಪಂಚಾಯತ್ ಕಚೇರಿ ಇರುವುದು ಲೊರೊಟ್ಟೋ ಭಾಗದಲ್ಲಿ. ಆದರೆ ಈ ಭಾಗದಲ್ಲಿರುವ ಜನರು ತನ್ನ ಪಂಚಾಯತ್‌ನ ಕೆಲಸಗಳಿಗೆ ಕೈಕಂಬ-ಬಿ.ಸಿ.ರೋಡು ನಗರದೊಳಗೆ ಬರುವ ಬದಲು ಗ್ರಾಮದೊಳಗಿಂದ ನೇರ ಬಂಟ್ವಾಳ ಬೈಪಾಸ್‌ಗೆ ಬಸ್ಸುನ ವ್ಯವಸ್ಥೆ ಇದ್ದರೆ ಎಷ್ಟೋ ಜನರ ಸಮಯ ಉಳಿಯುತ್ತದೆ.

ಕೆಎಸ್‌ಆರ್‌ಟಿಸಿ ಇಲಾಖೆ ಈ ಗ್ರಾಮದೊಳಗೆ ಬಸ್ಸು ಹಾದು ಹೋಗುವ ಬಗ್ಗೆ ಸರ್ವೆ ಮಾಡಿದ್ದು ಆದರೆ ಸರ್ವೆಯ ನಂತರ ಆ ಊರಿಗೆ ಅಗತ್ಯವಾದ ಬಸ್ಸುಗಳನ್ನು ಹಾಕಲು ಇನ್ನು ಸಮಯ ಬಂದಿಲ್ಲ. ಈ ಊರಿಗೆ ಬಸ್ಸಿನ ಅಗತ್ಯ ತುಂಬಾ ಇದೆ. ಸಂಬಂಧಪಟ್ಟ ಇಲಾಖೆಯ ಈ ಊರಿನ ಹಲವು ವರ್ಷದ ಬೇಡಿಕೆಗೆ ಸ್ಪಂದಿಸಿ ಬಸ್ಸು ಸಂಚಾರಕ್ಕೆ ಅವಕಾಶವನ್ನು ಆದಷ್ಟು ಬೇಗ ಮಾಡಬೇಕು. ಬಂಟ್ವಾಳ ಪೇಟೆಯ ಮಾರ್ಗವಾಗಿ ಬಸ್ಸು ಸಂಚಾರ ಆರಂಭಿಸಿದರೆ ಈ ಊರಿನ ಜನರ ಎಲ್ಲಾ ತೊಂದರೆಗಳಿಗೆ ಪರಿಹಾರ ಸಿಕ್ಕಿದಂತಾಗುತ್ತದೆ. ಅದಲ್ಲದೆ ಈಗ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯವೂ ಆಗಿದೆ. ಈ ಸಮಯದಲೇ ಬಸ್ಸು ಸಂಚಾರ ಆರಂಭಿಸಿದರೆ ವಿದ್ಯಾರ್ಥಿಗಳಿಗೂ ಉಪಕಾರವಾಗುತ್ತದೆ. ಆದ್ದರಿಂದ ಈ ಬಗ್ಗೆ ಇಲಾಖೆ ಆದಷ್ಟು ಬೇಗ ಕ್ರಮಕೈಗೊಂಡರೆ ಒಳಿತು.

***********

 

ಅಮ್ಟಾಡಿ ಗ್ರಾಮದೊಳಗೆ ಬಸ್ಸುಗೆ ಬೇಕಾಗುವಷ್ಟು ಜನಸಂಖ್ಯೆಯ ಪ್ರಮಾಣ ಕಡಿಮೆ ಇರುತ್ತದೆ. ಸರಕಾರಿ ಬಸ್ಸುಗಳನ್ನು ಹಾಕಿದರೆ ಖಾಲಿ ಬಸ್ಸೇ ಹೋಗಬಹುದು. ಆದ್ದರಿಂದ ಬಸ್ಸು ಗ್ರಾಮದೊಳಗೆ ಬಂದರೆ ನಷ್ಟ ಅನುಭವಿಸಬಹುದು.

– ಹರಿಕೃಷ್ಣ ಬಂಟ್ವಾಳ, ಕಿಯೋನಿಕ್ಸ್ ಅಧ್ಯಕ್ಷರು

*****

ಧರಂ ಸಿಂಗ್ ಸರಕಾರ ಇದ್ದಾಗ ಅಮ್ಟಾಡಿ ಗ್ರಾಮದೊಳಗೆ ಬಸ್ಸಿನ ವ್ಯವಸ್ಥೆ ಮಾಡಿತ್ತು. ಮೊದಲು ದೊಡ್ಡ ಬಸ್ಸು zaಬಂದಿತ್ತು. ರಸ್ತೆಯು ಸ್ವಲ್ಪ ತಿರುಗಲು ಕಷ್ಟವಾದಾಗ ನಂತರ ಸಣ್ಣ ಮಿನಿ ಬಸ್ಸು ಈ ರಸ್ತೆಯಲ್ಲಿ ಸಂಚಾರವಾದವು. ಆದರೆ ಸ್ಥಗಿತಗೊಂಡ ಬಗ್ಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here