Tuesday, April 9, 2024

ಕುಸಿಯುವ ಭೀತಿಯಲ್ಲಿದೆ ಮನೆ ಮನೆ ರಿಪೇರಿಗೆ ಬೇಕಾಗಿದೆ ಸಹಾಯ ಹಸ್ತ

ಬಂಟ್ವಾಳ: ನೋಡಲು ಮನೆಯಂತೆ ಕಾಣುತ್ತದೆ ಆದರೆ ಮನೆಯೊಳಗೆ ಕಾಲಿಟ್ಟರೆ ಹಾವಿನ ಹುತ್ತಗಳು ಬೆಳೆದಿದೆ, ಮೇಲೆ ನೋಡಿದರೆ ಆಕಾಶ ಕಾಣುತ್ತದೆ, ಕೆಳಗೆ ಮಣ್ಣಿನ ನೆಲ , ಯಾವಾಗ ಮೈಮೇಲೆ ಬೀಳುತ್ತೆ ಅನ್ನುವ ಭಯ, ಆದರೆ ಭಯದ ನಡುವೆಯೂ ಬದುಕುವ ಆಸೆ.

ಇದು ಸಜೀಪಮುನ್ನೂರು ಗ್ರಾಮದ ನಾಗನವಳಚ್ಚಿಲ್ ಎಂಬಲ್ಲಿ ವಾಸ ವಾಗಿರುವ ತಾಯಿ ಮತ್ತು ಮಗನ ಮುರುಕಲು ಮನೆಯ ಕಥೆ.

ನಾಗನವಳಚ್ಚಿಲ್ ನಿವಾಸಿ ಕಮಲಾಕ್ಷಿ ಹಾಗೂ ಅವರ ಪುತ್ರ ಜಯಪ್ರಕಾಶ್ ಈ ಮನೆಯಲ್ಲಿ ವಾಸವಾಗಿದ್ದು ತೀರಾ ಬಡತನದ ಜೀವನ‌ ಇವರದು.

ಇಂತಹ ಧಯನೀಯ ಪರಿಸ್ಥಿತಿಯಲ್ಲಿ ವಾಸಿಸುತ್ತಿರುವ ಕುಟುಂಬದ ಬಗ್ಗೆ ಬೆಳಕು ಚೆಲ್ಲುವ ಬಗ್ಗೆ ಈ ವರದಿ.

ಈ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಮನೆಯೇ ಕುಸಿಯುವ ಭೀತಿಯಲ್ಲಿದೆ.

ಪ್ರಸ್ತುತ ಹಂಚುಗಳು ಬಿದ್ದು ಹೋಗಿದ್ದು ಅರ್ಧ ಉಳಿದ ಮೇಲ್ಚಾವಣಿಗೆ ಟರ್ಪಾಲು ಮುಚ್ಚಲಾಗಿದ್ದು, ಆದು ಹರಿದಿದೆ. ಮಳೆ ಬಂದರೆ ನೀರು ಮನೆಯೊಳಗೆ ಬೀಳುತ್ತದೆ ಎಂಬ ಚಿಂತೆ ಅವರದ್ದು,

ಗಂಡನನ್ನು ಕಳೆದಕೊಂಡು ಮಗನ ಜವಬ್ದಾರಿ ಕಮಲಾಕ್ಷಿ ಅವರ ಹೆಗಲಿಗೆ ಬಿದ್ದಾಗ , ಅವರು ಬೀಡಿ ಸುತ್ತಿ ಜೀವನ ಮಾಡುತ್ತಾ ಜೊತೆಗೆ ಮಗನಿಗೆ ವಿದ್ಯಾಭ್ಯಾಸ ನೀಡಿದರು. ಅ ಬಳಿಕ ದುಡಿಯಲು ಶಕ್ತಿ ಯಿಲ್ಲದ ತಾಯಿಯನ್ನು ಸಾಕಬೇಕಾದ ಹೊಣೆ ಮಗನ ಮೇಲೆ ಬಿತ್ತು.

ಜಯಪ್ರಕಾಶ್ ಅವರು ಸಮರ್ಪಕ ಕೆಲಸವಿಲ್ಲದೆ, ಸಣ್ಣ ಪುಟ್ಟ ಕೆಲಸಕ್ಕೆ ಹೋಗುತ್ತಾರೆ. ಇವರ ದುಡಿಮೆ ಮನೆ ನಿರ್ವಹಣೆಗೆ ಮಾತ್ರ ಸಾಲುತ್ತಿದ್ದು, ಮನೆಯ ದುರಸ್ತಿ ಕಾರ್ಯ ಮಾಡುವುದು ಇವರ ದುಡಿಮೆಯಿಂದ ಸಾಧ್ಯವಾಗಿಲ್ಲ.

ಮೇಲಿಂದ ನೋಡುವಾಗ ಮನೆ ಸುಸ್ಥಿತಿಯಲ್ಲಿ ಕಂಡರೂ, ಒಳಭಾಗಕ್ಕೆ ನೋಡಿದರೆ ಮನೆಯ ದಯನೀಯ ಸ್ಥಿತಿಯ ಅರಿವಾಗುತ್ತದೆ. ಮನೆಯ ಹಿಂಭಾಗ ಒಳಗಡೆಯೇ ಹುತ್ತ ಬೆಳೆದಿದ್ದು, ಅದನ್ನು ನೋಡುವಾಗಲೇ ಹೆದರಿಕೆ ಹುಟ್ಟುತ್ತದೆ. ಮಳೆ ಗೋಡೆಗಳು ಮಣ್ಣಿನ ಗೋಡೆಗಳಾಗಿದ್ದು, ಮಳೆ ಸುರಿದು ನೀರು ನುಗ್ಗಿದ್ದರೆ ಗೋಡೆಗಳು ಕೂಡ ಬೀಳುವ ಅಪಾಯವಿದೆ.

ಮನೆಯ ಅವ್ಯವಸ್ಥೆಯ ಕುರಿತು ಸಂಬಂಧಪಟ್ಟ ಗ್ರಾ.ಪಂ., ಸ್ಥಳೀಯ ದಾನಿಗಳಿಗೂ ಮನವಿ ಮಾಡಿರುವುದಾಗಿ ಮನೆಯವರು ತಿಳಿಸಿದ್ದು, ಈ ಕುರಿತು ತತ್‌ಕ್ಷಣ ಕ್ರಮಕೈಗೊಳ್ಳಬೇಕಿದೆ. ಕಳೆದ ಹಲವು ದಶಕಗಳಿಂದ ಇವರಿಬ್ಬರು ಇದೇ ಮನೆಯಲ್ಲಿ ವಾಸಿಸುತ್ತಿದ್ದು, ದುರಸ್ತಿ ಮಾಡುವುದು ನಮ್ಮಿಂದ ಸಾಧ್ಯವಾಗಿಲ್ಲ ಎಂದು ಕಮಲಾಕ್ಷಿಯವರು ಅಭಿಪ್ರಾಯಿಸುತ್ತಾರೆ. ಹೀಗಾಗಿ ಸಹೃದಯಿ ದಾನಿಗಳು ಮನೆಯ ದುರಸ್ತಿಗೆ ನೆರವು ನೀಡುವ ಕಾರ್ಯ ಮಾಡಬೇಕಿದೆ.

More from the blog

ಭಕ್ತರೇ ಗಮನಿಸಿ…. ಈ ದಿನ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಆಗೇಲು ಸೇವೆ ಇರುವುದಿಲ್ಲ

ಬಂಟ್ವಾಳ ತಾಲೂಕು ಸಜೀಪಮೂಡ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಏ.12, 14, 16 ರಂದು ಆಗೇಲು ಸೇವೆ ಇರುವುದಿಲ್ಲ. ಏ. 19ರಿಂದ ಆಗೇಲು ಸೇವೆ ನಡೆಯುತ್ತದೆ ಹಾಗೂ ಏ.21 ರಂದು ಆಗೇಲು ಸೇವೆ...

ಲೋಕಸಭಾ ಚುನಾವಣೆ : ಅಕ್ರಮ ವ್ಯವಹಾರಿಗಳಿಗೆ ರಹದಾರಿಯಾದ ಸಾಲೆತ್ತೂರು ಬಳಿಯ ಕೂಡುರಸ್ತೆ ಚೆಕ್ ಪೋಸ್ಟ್

ವಿಟ್ಲ: ಲೋಕಸಭಾ ಚುನಾವಣೆಗೆ ಈಗಾಗಲೇ ದಿನ ನಿಗದಿಯಾಗಿದ್ದು, ಜಿಲ್ಲಾಡಳಿತ ಸರ್ವ ಸನ್ನದ್ದವಾಗಿದೆ. ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತವು ಗಡಿಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ 23 ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದೆ. ಆದರೆ...

5,8,9,11ನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: 5, 8, 9 ಮತ್ತು 11 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ. ರಾಜ್ಯದಲ್ಲಿ 5, 8, 9ನೇ ತರಗತಿಗೆ ಬೋರ್ಡ್​ ಪರೀಕ್ಷೆ ಮುಗಿದಿದ್ದು,...

ಮನೆಯೊಳಗೆ ‌ನುಗ್ಗಿ ವ್ಯಕ್ತಿಗೆ ಚೂರಿ ಇರಿತ : ಆರೋಪಿ ಪರಾರಿ

ಬಂಟ್ವಾಳ: ಮನೆಯೊಳಗೆ ‌ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ ನಡೆದಿದೆ. ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ...