Tuesday, October 31, 2023

ಸದಾನಂದ ಪೂಂಜರು ಸಜೀಪ ಮೂಡ ಗ್ರಾಮದ ಅಭಿವೃದ್ಧಿಯ ಹರಿಕಾರ: ಮಾಜಿ ಸಚಿವ ಬಿ.ರಮಾನಾಥ ರೈ

Must read

ಬಂಟ್ವಾಳ: ದ.ಕ.ಜಿ.ಪಂ.ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜ ಅವರು ಸಜೀಪ ಮೂಡ ಗ್ರಾಮದ ಅಭಿವೃದ್ಧಿ ಯ ಹರಿಕಾರ , ಅವರ ಚಿಂತನೆ ಗ್ರಾಮದಲ್ಲಿ ಬದಲಾವಣೆ ತರುವಲ್ಲಿ ಪ್ರಧಾನ ಪಾತ್ರ ವಹಿಸಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ದ.ಕ.ಜಿ.ಪಂ.ಮಾಜಿ ಅಧ್ಯಕ್ಷ, ಸಜೀಪಮೂಡ ಗ್ರಾ.ಪಂ.ನಲ್ಲಿ ಸುದೀರ್ಘ 40 ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಬಿ.ಸದಾನಂದ ಪೂಂಜ ಅವರಿಗೆ ಸಜೀಪಮೂಡ ಗ್ರಾ.ಪಂ.ವತಿಯಿಂದ ಶುಕ್ರವಾರ ಗ್ರಾ.ಪಂ.ಸಭಾಂಗಣದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿ ಮಾತನಾಡಿದರು.

ಸಾಮಾಜಿಕ ವಾಗಿ , ಶೈಕ್ಷಣಿಕವಾಗಿ , ಧಾರ್ಮಿಕ ವಾಗಿ

ಇಡೀ ಜಿಲ್ಲೆಯ ಅಭಿವೃದ್ಧಿ ಕಾರ್ಯವನ್ನು ಅವರು ಮಾಡಿದ್ದಾರೆ ಎಂಬುದಕ್ಕೆ ಅನೇಕ ಸಾಕ್ಷಿಗಳು ನಮ್ಮ ಕಣ್ಣ ಮುಂದೆ ಜೀವಂತವಾಗಿದೆ.

ಹಠವಾದಿಯಾಗಿ ಹಿಡಿದ ಕೆಲಸವನ್ನು ಸಾಧಿಸಿ ತೋರಿಸಿದ್ದಾರೆ .

ಪಂಚಾಯತ್ ಆಳವನ್ನು ಅರಿತಿದ್ದು ವ್ಯವಸ್ಥೆಯ ಅರಿವನ್ನು ಹೊಂದಿ ಕೆಲಸ ಮಾಡಿದ್ದಾರೆ. ಬಂಟ್ವಾಳ ತಾ.ಪಂ.ಉಪಾಧ್ಯಕ್ಷರಾಗಿ ಜನಸೇವೆಯಲ್ಲಿ ತೊಡಗಿದ್ದರು. ಪ್ರಶ್ನಾತೀತ ನಾಯಕರಾಗಿ ಅವರು ಅನೇಕ ವರ್ಷಗಳ ಕಾಲ ಕೆಲಸ ಮಾಡಿ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ.

ವೇದಿಕೆಯಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸದಸ್ಯ ಕೆ.ಸಂಜೀವ ಪೂಜಾರಿ, ಸಜೀಪಮೂಡ ಗ್ರಾ.ಪಂ.ಅಧ್ಯಕ್ಷೆ ಹರಿಣಾಕ್ಷಿ, ಉಪಾಧ್ಯಕ್ಷ ಸಿದ್ದೀಕ್ ಕೊಳಕೆ, ಮಾಜಿ ಅಧ್ಯಕ್ಷ ದೇವಿಪ್ರಸಾದ್ ಪೂಂಜ, ಸಜೀಪ ಮಾಗಣೆಯ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ಹಿರಿಯರಾದ ವಸಂತ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಇರಾ ಗ್ರಾ.ಪಂ.ಮಾಜಿ ಅಧ್ಯಕ್ಷ ರಝಾಕ್ ಕುಕ್ಕಾಜೆ,

ಮಾಗಣೆ ತಂತ್ರಿ ಸುಬ್ರಹ್ಮಣ್ಯ ಭಟ್, ಪ್ರಗತಿಪರ ಕೃಷಿಕ ಶ್ರೀನಿವಾಸ ಭಟ್ ನಗ್ರಿ, ಗ್ರಾ.ಪಂ.ಸದಸ್ಯರಾದ ವಸಂತ ಪೂಜಾರಿ, ಸುಂದರಿ, ಅಬ್ದುಲ್ ಅಜೀಜ್ ಬೊಳ್ಳಾಯಿ, ವಿಶ್ವನಾಥ ಬೆಳ್ಚಾಡ, ಯೋಗೀಶ್ ಬೆಳ್ಚಾಡ, ಸೀತಾರಾಮ, ಪೌಝಿಯಾ, ಸೋಮನಾಥ, ಪ್ರಮೀಳಾ ಡಿ.ಸೋಜ, ಯಮುನ, ವಿಜಯ, ಹೇಮಾವತಿ, ಕುಶಲ ಪೂಜಾರಿ, ಅರುಂಧತಿ, ಪ್ರಮುಖರಾದ ಕರೀಂ ಬೊಳ್ಳಾಯಿ, ಸ್ಟೀವನ್ ಡಿಸೋಜ, ಚಂದ್ರಶೇಖರ ಶೆಟ್ಟಿ, ಪಂ.ಅಭಿವೃದ್ಧಿ ಅಧಿಕಾರಿ ನಿರ್ಮಲ, ಪಂ.ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಗ್ರಾ.ಪಂ.ಸದಸ್ಯರು‌, ಮೊದಲಾದವರು ಉಪಸ್ಥಿತರಿದ್ದರು.

ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರ್ವಹಿಸದರು.

More articles

Latest article