ಬಂಟ್ವಾಳ: ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ.

2017 ರ ಮೇ 15 ರಂದು ಬಂಟ್ವಾಳ ತಾಲೂಕಿನ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಬಾಳ್ತಿಲ ಗ್ರಾಮದ ನಿವಾಸಿ ರಾಜೇಶ್ ಆತನ ದೊಡ್ಡಪ್ಪನ‌ ಮಗ ರಂಜಿತ್ ನನ್ನು ಕೊಲೆ ಮಾಡಿದ್ದ.

ಅ ಬಳಿಕ ಜೈಲು ಸೇರಿದ್ದ ರಾಜೇಶ್ ನಿಗೆ ಪ್ರಸ್ತುತ ನ್ಯಾಯಾಲಯ ವಿಚಾರಣೆ ನಡೆಸಿ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

 

ಬಂಟ್ವಾಳ ನಗರ ಪೊಲೀಸ್ ಠಾಣಾ ಅ. ಕ್ರ 131/2017 ಕಲಂ 447,324,302 ಐಪಿಸಿ ಪ್ರಕರಣದಲ್ಲಿ ಆರೋಪಿ ರಾಜೇಶ್ ಯಾನೆ ನವೀನ್ ಎಂಬುವವನು 15.05.2017 ರಂದು ಆರೋಪಿಯ ದೊಡ್ಡಪ್ಪನ ಮಗ ರಂಜಿತ್ ಎಂಬಾತನನ್ನು ಚೂರಿಯಿಂದ ಚುಚ್ಚಿ ಕೊಲೆಗೈದಿದ್ದು ಈ ಬಗ್ಗೆ ನ್ಯಾಯಾಲಯವು ವಿಚಾರಣೆ ನಡೆಸಿ ಆರೋಪಿ ರಾಜೇಶ್ ಯಾನೆ ನವೀನ್ ನಿಗೆ ಜೀವಾವಧಿ ಶಿಕ್ಷೆ ನೀಡಿರುತ್ತದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here