ಮಂಗಳೂರು: ಮಾ 05 ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳಿಂದ ನಡೆದ ರ‍್ಯಾಗಿಂಗ್ ಪ್ರಶ್ನಿಸಿದ ಪ್ರಾಶುಂಪಾಲರಿಗೆ ನಾಲ್ವರು ವಿದ್ಯಾರ್ಥಿಗಳು ಹಲ್ಲೆ ಮಾಡಿದ ಘಟನೆ ಸುರತ್ಕಲ್ ಮುಕ್ಕದ ಖಾಸಗಿ ಕಾಲೇಜಿನಲ್ಲಿ ಮಾ.3ರ ಬುಧವಾರ ನಡೆದಿದೆ.

ಕಾಲೇಜು ಪ್ರಾಶುಂಪಾಲರು ಈ ಬಗ್ಗೆ ದೂರು ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಾದ ಮಹಮ್ಮದ್‌ ಬಾಝಿಲ್‌, ಸಂಭ್ರಮ್‌ ಆಳ್ವ, ಸಮೀಲ್‌, ಅಶ್ವಿನ್‌ ಎಸ್‌. ಜಾನ್ಸನ್‌ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ

ಘಟನೆಯ ವಿವರ:
ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ನಡೆಸಿರುವ ಬಗ್ಗೆ ಕಿರಿಯ ವಿದ್ಯಾರ್ಥಿಗಳು ಪ್ರಾಶುಂಪಾಲರ ಬಳಿ ದೂರು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ನಾಲ್ವರು ವಿದ್ಯಾರ್ಥಿಗಳನ್ನು ಕರೆದ ಪ್ರಾಶುಂಪಾಲರು ವಿದ್ಯಾರ್ಥಿಗಳಿಗೆ ಬುದ್ಧಿಮಾತು ಹೇಳಿದ್ದಾರೆ, ಇಂತಹ ನಡವಳಿಕೆ ಮುಂದುವರಿಸಿದರೆ ಡಿಬಾರ್‌ ಮಾಡುವುದಾಗಿ ಎಚ್ಚರಿಸಿದ್ದಾರೆ. ಈ ಕಾರಣಕ್ಕಾಗಿ ವಿದ್ಯಾರ್ಥಿಗಳು ಪ್ರಿನ್ಸಿಪಾಲ್‌ಗೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.

ವಿದ್ಯಾರ್ಥಿಗಳ ಈ ವರ್ತನೆಯಿಂದ ಪ್ರಾಶುಂಪಾಲರು ಕೆಲ ಕಾಲ ಶಾಕ್‌ಗೊಳಗಾಗಿದ್ದಾರೆ. ಹಲ್ಲೆ ಮಾಡಿದ ಆರೋಪಿಗಳನ್ನು ಸುರತ್ಕಲ್‌ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here