ಬಂಟ್ವಾಳ, ಫೆ. 25: ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರಿನ ಘಟಕಗಳಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿ ಗಳನ್ನು ನೇಮಕ ಮಾಡಬೇಕು ಎಂದು ಪುರಸಭಾ ಸದಸ್ಯ ಜನಾರ್ದನ ಚೆಂಡ್ತಿಮಾರ್ ಪ್ರಸ್ತಾಪ ಮಾಡಿದರು.

ಅವರು ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್ ಅವರ ಅಧ್ಯಕ್ಷತೆಯಲ್ಲಿ ಪುರಸಭಾ ಸಭಾಂಗಣದಲ್ಲಿ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ.

ಜಕ್ರಿಬೆಟ್ಟು ಸಹಿತ ಪುರಸಭಾ ವ್ಯಾಪ್ತಿಯಲ್ಲಿ ಇರುವ ಕುಡಿಯುವ ನೀರಿನ ಘಟಕಗಳಲ್ಲಿ ಸಿಬ್ಬಂದಿ ಗಳ ಕೊರತೆಯಿಂದ ಸಾರ್ವಜನಿಕ ರಿಗೆ ತೊಂದರೆ ಅಗುತ್ತಿದೆ ಎಂದು ಅವರು ತಿಳಿಸಿದರು.

ಇದೇ ವಿಷಯಕ್ಕೆ ಪೂರಕವಾಗಿ ಮಾತನಾಡಿದ ಸದಸ್ಯ ಮಹಮ್ಮದ್ ನಂದರಬೆಟ್ಟು ಪಿಟ್ ನೆಸ್ ಇಲ್ಲದ ಕಾರ್ಮಿಕ ರ ಬಗ್ಗೆ ನಿಗಾ ವಹಿಸಿ ಸೂಕ್ತವಾದ ಕ್ರಮವನ್ನು ಕೈಗೊಳ್ಳುವ ಬಗ್ಗೆ ಮುಖ್ಯಾಧಿಕಾರಿಗೆ ತಿಳಿಸಿದರು.

ಬೇರೆ ಕಡೆಗಳಿಂದ ತ್ಯಾಜ್ಯ ಗಳನ್ನು ಪುರಸಭಾ ವ್ಯಾಪ್ತಿಯಲ್ಲಿ ತಂದು ಡಂಪ್ ಮಾಡಲಾಗುತ್ತಿದ್ದು ಇವರ ಮೇಲೆ ಕಾನೂನು ಕ್ರಮಕೈಗೊಳ್ಳುವ ಉದ್ದೇಶದಿಂದ. ಆಯ್ದ ಕೆಲವು ಕಡೆಗಳಲ್ಲಿ ಸಿ.ಸಿ‌ಕ್ಯಾಮರಾ ಅಳವಡಿಕೆಗೆ ನಿರ್ಣಯ ಮಾಡುವಂತೆ ಸಭೆಯಲ್ಲಿ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಒತ್ತಾಯಿಸಿದರು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ೨೦೨೧-೨೨ನೇ ಸಾಲಿನಿಂದ ಆಸ್ತಿ ತೆರಿಗೆಯನ್ನು ಚಾಲ್ತಿ ಸಾಲಿನ ಮಾರುಕಟ್ಟೆ ಮಾರ್ಗಸೂಚಿ ಬೆಲೆಯ ಆಧಾರದಲ್ಲಿ ಖಾಲಿ ಭೂಮಿಗೆ ತೆರಿಗೆ ವಿಧಿಸುವ ಸರಕಾರದ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ ಬಂಟ್ವಾಳ ಪುರಸಭೆಯ ಸದಸ್ಯರು ಯಾವುದೇ ಕಾರಣಕ್ಕೂ ಈ ಕುರಿತು ನಿರ್ಣಯ ತೆಗೆದುಕೊಳ್ಳಬಾರದು ಎಂದು ಆಗ್ರಹಿಸಿದರು.

. ಸಭೆಯ ಆರಂಭದಲ್ಲಿ ಕಂದಾಯ ನಿರೀಕ್ಷಕರು ತೆರಿಗೆಯ ವಿಚಾರ ಪ್ರಸ್ತಾಪಿಸುತ್ತಿದ್ದಂತೆ, ಸದಸ್ಯ ಗೋವಿಂದ ಪ್ರಭು ಅವರು, ಈ ವಿಚಾರವನ್ನು ಮೊದಲೇ ಯಾಕೆ ತಿಳಿಸಿಲ್ಲ ಎಂದು ಪ್ರಶ್ನಿಸಿದರು. ಫೆ. ೧೯ರಂದು ಈ ಆದೇಶ ಬಂದಿದ್ದು, ಫೆ. ೨೪ರಂದು ಕಂದಾಯ ನಿರೀಕ್ಷಕರು ತರಬೇತಿ ಮುಗಿಸಿಕೊಂಡು ಬಂದಿದ್ದಾರೆ. ಹೀಗಾಗಿ ನಮಗೂ ಮಾಹಿತಿ ವಿಳಂಬವಾಗಿ ಬಂದಿದೆ ಎಂದು ಅಧ್ಯಕ್ಷರು ತಿಳಿಸಿದರು.

ಜತೆಗೆ ಸದಸ್ಯರಾದ ಮುನೀಶ್ ಆಲಿ, ಲುಕ್ಮಾನ್ ಬಂಟ್ವಾಳ, ಗಂಗಾಧರ ಪೂಜಾರಿ, ಮೊಹಮ್ಮದ್ ನಂದರಬೆಟ್ಟು ಮೊದಲಾದವರು ವಿರೋಧ ವ್ಯಕ್ತಪಡಿಸಿದರು. ತೆರಿಗೆಗೆ ಸಂಬಂದಿಸಿ ೧೯೬೪ರ ನಿಯಮವನ್ನು ಬದಲಿಸಿರುವುದರಿಂದ ನಿರ್ಣಯ ತೆಗೆದುಕೊಳ್ಳದೇ ಇದ್ದರೆ ತೆರಿಗೆ ಸಂಗ್ರಹ ಸಾಧ್ಯವಿಲ್ಲ ಎಂದು ಮುಖ್ಯಾಧಿಕಾರಿ ಲೀಲಾ ಬ್ರಿಟ್ಟೊ ತಿಳಿಸಿದರು. ಬಳಿಕ ಈ ಕುರಿತು ಮುಂದೆ ವಿಶೇಷ ಸಭೆ ಕರೆಯುವುದಾಗಿ ಅಧ್ಯಕ್ಷರು ತಿಳಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here