ಬಂಟ್ವಾಳ, ಫೆ. 23: ಪೊಲೀಸ್ ಇಲಾಖೆಗೆ ಹಸ್ತಾಂತರಗೊಂಡಿರುವ ಪಾಣೆಮಂಗಳೂರು ಗೂಡಿನಬಳಿಯ ಪಶು ಇಲಾಖೆಯ ಹಳೆ ಕಟ್ಟಡಕ್ಕೆ ಇದೀಗ ದುರಸ್ತಿ ಭಾಗ್ಯ ದೊರಕಿದ್ದು, ಕಟ್ಟಡದ ಕೆಲಸ ಕರ‍್ಯಗಳು ನಡೆಯುತ್ತಿದೆ. ಮುಂದೆ ಈ ಕಟ್ಟಡವು ಪೊಲೀಸರಿಗೆ ಉಳಿದುಕೊಳ್ಳುವ ವಸತಿ ಗೃಹವಾಗಿ ಪರಿರ‍್ತನೆಗೊಳ್ಳಲಿದೆ.ಬಂಟ್ವಾಳಲ್ಲಿ ರ‍್ತವ್ಯ ನರ‍್ವಹಿಸುವ ಕೆಎಸ್‌ಆರ್‌ಸಿ ಸಿಬಂದಿಗೆ ಉಳಿದುಕೊಳ್ಳುವುದಕ್ಕೆ ಸೂಕ್ತ ಸ್ಥಳವಿಲ್ಲದೆ ಯಾವುದೋ ಮದುವೆ ಹಾಲೇ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಉಳಿದುಕೊಳ್ಳಬೇಕಿತ್ತು. ಇದೀಗ ಇಂತಹ ಸಿಬಂದಿಗಾಗಿ ಪೊಲೀಸ್ ಇಲಾಖೆ ಸೂಕ್ತ ನರ‍್ಧಾರ ಕೈಗೊಂಡಿದ್ದು, ಪ್ರಸ್ತುತ ಕಟ್ಟಡ ದುರಸ್ತಿಗೊಳ್ಳುತ್ತಿದೆ.

ಬಂಟ್ವಾಳ ಪಶು ಇಲಾಖೆ ಹಾಗೂ ಆಸ್ಪತ್ರೆ ಕಟ್ಟಡ ಗೂಡಿನಬಳಿಯಲ್ಲೇ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕ ಹಳೆ ಕಟ್ಟಡ ಹಾಗೂ ನಿವೇಶನ ಪಾಳು ಬಿದ್ದಿತ್ತು. ಬಳಿಕ ಅದನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿ ಟ್ರಾಫಿಕ್ ಠಾಣೆ ಮಾಡುವುದಕ್ಕೆ ಯೋಚಿಸಲಾಗಿತ್ತು. ಆದರೆ ಟ್ರಾಫಿಕ್ ಪೊಲೀಸ್ ಠಾಣೆ ಅಲ್ಲಿ ಸೂಕ್ತ ಸ್ಥಳವಕಾಶವಿಲ್ಲದ ಕಾರಣದಿಂದ ಅವರು ಬೇರೆ ಸ್ಥಳವನ್ನು ಹುಡುಕುತ್ತಿದ್ದಾರೆ.

ಈ ಕಟ್ಟಡ ಪಾಳು ಬಿದ್ದಿದ್ದು, ನಿವೇಶನಕ್ಕೆ ಆವರಣ ಗೋಡೆಯೂ ಇಲ್ಲ, ಹೀಗಾಗಿ ಅನೈತಿಕ ಚಟುವಟಿಕೆಯ ಅಪಾಯದ ಜತೆಗೆ ಒತ್ತುವರಿಯಾಗುವ ಸಾಧ್ಯತೆಯ ಕುರಿತು ಉದಯವಾಣಿ ಸುದಿನದಲ್ಲಿ ಜ. ೨೦ರಂದು ತೆರವುಗೊಳ್ಳದ ಪಾಳು ಬಿದ್ದ ಕಟ್ಟಡ ಎಂಬ ಶರ‍್ಷಿಕೆಯಲ್ಲಿ ಸಚಿತ್ರ ವರದಿ ಪ್ರಕಟಗೊಂಡಿತ್ತು.

 

ರ‍್ಧಂರ‍್ಧ ಬಿದ್ದಿತ್ತು

ಕಟ್ಟಡದ ಗೋಡೆ, ಅಡಿಪಾಯ ಸುಸಜ್ಜಿತವಾಗಿದ್ದರೂ, ಹಂಚಿನ ಮೇಲ್ಛಾವಣಿ ರ‍್ಧಂರ‍್ಧ ಬಿದ್ದುಕೊಂಡಿತ್ತು. ಆದರೆ ಇದೀಗ ಹಂಚಿನ ಮೇಲ್ಛಾವಣಿಯನ್ನು ಸಂಪರ‍್ಣ ದುರಸ್ತಿ ಪಡಿಸಲಾಗುತ್ತಿದೆ. ಎದುರಿನ ಭಾಗದಲ್ಲಿ ಜಿಐ ಶೀಟ್‌ಗಳ ಮೂಲಕ ಮೇಲ್ಛಾವಣಿ ಮಾಡಲಾಗಿದೆ. ಜತೆಗೆ ಸಿಮೆಂಟ್‌ಫಾಸ್ಟರಿಂಗ್ ಮಾಡಲಾಗುತ್ತಿದೆ. ಈ ಎಲ್ಲಾ ಕರ‍್ಯಗಳು ನಡೆದು ಬಣ್ಣ ಬಳಿದರೆ ಹೊಸ ಕಟ್ಟಡದಂತೆ ಮಿಂಚಲಿದೆ.

ಪ್ರಸ್ತುತ ಕಟ್ಟಡದಲ್ಲಿ ಕೆಎಸ್‌ಆರ್‌ಸಿ ಸಿಬಂದಿ, ಬಂದೋಬಸ್ತ್ಗೆ ಆಗಮಿಸಿದ ಸಿಬಂದಿಗೆ ಉಳಿದುಕೊಳ್ಳುವುದಕ್ಕೆ ಹಾಲ್ ಇರುತ್ತದೆ. ಜತೆಗೆ ಶೌಚಾಲಯ, ವಿದ್ಯುತ್, ನೀರಿನ ವ್ಯವಸ್ಥೆ ಬಂದಲ್ಲಿ ವಸತಿ ಗೃಹವಾಗಿ ಪರಿರ‍್ತನೆಗೊಳ್ಳಲಿದೆ. ಎಲ್ಲೆಲ್ಲೋ ಉಳಿದುಕೊಳ್ಳುವ ಸಿಬಂದಿ ತಮ್ಮದೇ ಸೂರಿನಲ್ಲಿ ಆಶ್ರಯ ಪಡೆಯಬಹುದಾಗಿದೆ.

 

ಸಮಾರಂಭಗಳಿದ್ದಾಗ ತೊಂದರೆ

ಬಂಟ್ವಾಳದಲ್ಲಿ ೨ ಕೆಎಸ್‌ಆರ್‌ಟಿ ತಂಡವಿದ್ದು, ತಲಾ ೨೦ ಮಂದಿ ಇರುತ್ತಾರೆ. ಇವರು ಇಲ್ಲಿನ ಮದುವೆ ಹಾಲ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಉಳಿಯಬೇಕಿತ್ತು. ಹಾಲ್‌ಗಳಲ್ಲಿ ಮದುವೆ, ಇನ್ನಿತರ ಸಮಾರಂಭಗಳಿದ್ದಾಗ ಎದ್ದು ಹೋಗಬೇಕಿತ್ತು. ಇದು ಸಾಕಷ್ಟು ತೊಂದರೆಯಾಗುತ್ತಿರುವ ಕಾರಣ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಂಡಿದೆ. ಗೂಡಿನ ಬಳಿಯಲ್ಲಿ ನದಿ ಬದಿಯಲ್ಲೇ ಈ ಕಟ್ಟಡವಿದ್ದು, ಕೆಎಸ್‌ಆರ್‌ಟಿಯ ಬಸ್ಸು ನಿಲ್ಲಿಸುವುದಕ್ಕೂ ಸೂಕ್ತ ಸ್ಥಳವಿದೆ.

 

ವಸತಿ ಗೃಹದ ರೀತಿ ದುರಸ್ತಿ

ಈ ಕಟ್ಟಡವು ಪೊಲೀಸ್ ಇಲಾಖೆಗೆ ಹಸ್ತಾಂತರವಾಗಿದ್ದು, ಕೆಎಸ್‌ಆರ್‌ಪಿ ಸಿಬಂದಿಗೆ ಉಳಿದುಕೊಳ್ಳುವುದಕ್ಕೆ ವಸತಿ ಗೃಹದ ರೀತಿಯಲ್ಲಿ ದುರಸ್ತಿ ಮಾಡಲಾಗುತ್ತಿದೆ. ಉಳಿದುಕೊಳ್ಳುವುದಕ್ಕೆ ಹಾಲ್ ಸೇರಿದಂತೆ ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಾಮಾನ್ಯವಾಗಿ ಸಿಬಂದಿ ಮದುವೆ ಹಾಲ್‌ಗಳಲ್ಲಿ ಉಳಿದುಕೊಂಡಾಗ ಸಮಾರಂಭಗಳಿದ್ದಾಗ ಎದ್ದು ಹೋಗಬೇಕಾಗುತ್ತದೆ. ಆದರೆ ಈ ವ್ಯವಸ್ಥೆಯಿಂದ ಸೂಕ್ತ ವಸತಿ ಸಿಕ್ಕಂತಾಗುತ್ತದೆ.

ಅವಿನಾಶ್

ಪಿಎಸ್‌ಐ, ಬಂಟ್ವಾಳ ನಗರ ಪೊಲೀಸ್ ಠಾಣೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here