ಪುಂಜಾಲಕಟ್ಟೆ: ರೋವರ್ಸ್&ರೇಂಜರ್ಸ್ ಘಟಕ ಹಾಗೂ ಭಾರತೀಯ ಯುವ ರೆಡ್ ಕ್ರಾಸ್’ಇದರ ಆಶ್ರಯದಲ್ಲಿ “ಅಗ್ನಿಶಾಮಕ ಠಾಣೆ ಬೆಳ್ತಂಗಡಿ”ಇದರ ಸಹಯೋಗದೊಂದಿಗೆ “ಅಗ್ನಿ ಅವಘಡ ಅರಿವು ಮತ್ತು ಅಗ್ನಿ ಅನಾಹುತ ತಡೆಗಟ್ಟುವ ದಿನ”ದ ಅಂಗವಾಗಿ  ‘ಮಾಹಿತಿ ಶಿಬಿರ ಹಾಗೂ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿಯವರಾದ ಕ್ಲೇವಿಯಸ್ ಡಿಸೋಜಾ ಹಾಗೂ ಸಿಬ್ಬಂದಿಗಳು ಅಂತೆಯೇ ರೋವರ್ಸ್ ಸಂಚಾಲಕರಾದ ಪ್ರೊ. ಆಂಜನೇಯM.N ಹಾಗೂ ರೇಂಜರ್ಸ್ ಸಂಚಾಲಕರಾದ ಪ್ರೊ. ಪ್ರೀತಿ K. ರಾವ್ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಅಗ್ನಿಶಾಮಕ ಸಿಬ್ಬಂದಿ ಉಸ್ಮಾನ್ ಇವರು ಅಗ್ನಿ ಅವಘಡಗಳ ಬಗ್ಗೆ ಹಾಗೂ ಬೆಂಕಿಯಲ್ಲಿನ ವಿಧಗಳ ಬಗ್ಗೆ ಮಾಹಿತಿ ನೀಡಿದರು.ಬೆಂಕಿ ಅವಘಡಗಳು ಸಂಭವಿಸಿದಾಗ ಸಾರ್ವಜನಿಕರು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳನ್ನು ಸವಿವರವಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಲೋಕೇಶ್ ಇವರು ಕಾರ್ಯಕ್ರಮದ ಕುರಿತು ಶ್ಲಾಘನೀಯ ಮಾತುಗಳನ್ನಾಡಿದರು.

ರೋವರ್ ವಸಂತ್ ಇವರು ಅತಿಥಿಗಳನ್ನು ಸ್ವಾಗತಿಸಿ, ರೆಡ್ ಕ್ರಾಸ್ ಸ್ವಯಂ ಸೇವಕಿ ದೀಕ್ಷಾ ಧನ್ಯವಾದವಿತ್ತರು.. ರೋವರ್ ಶಮೀರ್ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here