



ಬಂಟ್ವಾಳ: ಮಂತ್ರದೇವತೆ ಕ್ರಿಯೇಶನ್ ನಿರ್ಮಾಣದಲ್ಲಿ ಬಿಡುಗಡೆಗೆ ಸಿದ್ಧಗೊಂಡಿರುವ ಕಿರು ಚಿತ್ರ ಚಂದ್ರನ್ ಇದರ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಕರಾವಳಿ ಕಲೋತ್ಸವ ೨೦೨೧ ಇದರ ಸಮಾರೋಪದಲ್ಲಿ ಬಿ.ಸಿ.ರೋಡ್ನ ಗೋಲ್ಡನ್ ಪಾರ್ಕ್ ಮೈದಾನದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವೇದಿಕೆಯಲ್ಲಿ ನಡೆಯಲಿದೆ.
ಕಿರು ಚಿತ್ರವನ್ನು ಚಲನಚಿತ್ರ ನಟ, ರಂಗಭೂಮಿ ರಮೇಶ್ ರೈ ಕುಕ್ಕುವಳ್ಳಿ ಅವರು ಬಿಡುಗಡೆಗೊಳಿಸಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು, ಕಲೋತ್ಸವ ಸಮಿತಿ ಪದಾಧಿಕಾರಿಗಳು ಭಾಗವಹಿಸಲಿರುವರು.
ಕಿರುಚಿತ್ರದ ಕಥೆ ಕುಶಲ್ ಗೌಡ ಹೊಸಮನೆ, ರಕ್ಷಿತ್ ರೈ ಪುಂಜಾಲಕಟ್ಟೆ ನಿರ್ದೇಶನದಲ್ಲಿ ,ಜಯರಾಜ್ ಅತ್ತಾಜೆ ಮತ್ತು ಸಚಿನ್ ಅತ್ತಾಜೆ ಸಹ ನಿರ್ದೇಶನದಲ್ಲಿ ,ಗುರು ಬಾಯಾರು ಸಂಗೀತವಿದ್ದು , ಸವ್ಯರಾಜ್ ಕಲ್ಲಡ್ಕ ಅವರ ಪ್ರಸಾಧನವಿದೆ. ಕ್ರಿಯೇಟಿವ್ ಕ್ಯಾಮೆರಾಮೆನ್ ಬಾತು ಕುಲಾಲ್ ಛಾಯಾಗ್ರಹಣ ಮತ್ತು ಸಂಕಲನ ಮಾಡಿರುವ ಕಿರು ಚಿತ್ರದಲ್ಲಿ ಚಲನಚಿತ್ರ ನಟ ಡಿ.ಎಸ್. ಬೋಳೂರು, ರತ್ನದೇವ್ ಪುಂಜಾಲಕಟ್ಟೆ , ಜಯರಾಜ್ ಅತ್ತಾಜೆ, ಸಚಿನ್ ಅತ್ತಾಜೆ, ನಮಿತಾ ಸುವರ್ಣ, ಹರಿಶ್ಚಂದ್ರ ಶೆಟ್ಟಿಗಾರ್, ದಾಮೋದರ ಆಚಾರ್ಯ, ಜಗದೀಶ ಮತ್ತಿತರರು ಅಭಿನಯಿಸಿರುವರು.






