


ಬಂಟ್ವಾಳ: ಪಣಂಬೂರು ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯಿ ದೇವಸ್ಥಾನ ಸಂಗಬೆಟ್ಟು, ಸಿದ್ದಕಟ್ಟೆಯಲ್ಲಿ ವರ್ಷಾವಧಿ ಮಹೋತ್ಸವವು ಬ್ರಹ್ಮಶ್ರೀ ಕುಡುಪು ಶ್ರೀ ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಫೆ.23ರಿಂದ 24ರವರೆಗೆ ನಡೆಯಲಿದೆ.
ಆ ಪ್ರಯುಕ್ತ ಫೆ.23ರಂದು ಸಿದ್ದಕಟ್ಟೆ ಮಹಮ್ಮಾಯಿ ಕಟ್ಟೆಯ ವಠಾರದಲ್ಲಿ ಸಂಜೆ 6 ಗಂಟೆಗೆ ಶ್ರೀ ಮಹಮ್ಮಾಯಿ ಫ್ರೆಂಡ್ಸ್ ಸಂಗಬೆಟ್ಟು ಅರ್ಪಿಸುವ ಕಲರ್ಸ್ ಕನ್ನಡ ಕ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ ಆಚಾರ್ಯ ಬಳಗದಿಂದ ಮ್ಯೂಸಿಕಲ್ ನೈಟ್ 2021ನಡೆಯಲಿದೆ.





