ಪುಂಜಾಲಕಟ್ಟೆ: ಮದುವೆ ಎಂದರೆ ಅದ್ದೂರಿಯಾಗಿ ಮಾಡಿ ಪರಿಸರಕ್ಕೆ ಅನೇಕ ಹಾನಿ‌ಮಾಡುವವರ ಮಧ್ಯದಲ್ಲಿ ಇಲ್ಲೊಂದು ಜೋಡಿ “ಪರಿಸರಸ್ನೇಹಿ” ಯಾಗಿ ತಮ್ಮ ಮದುವೆ ಸಡಗರವನ್ನು ಸಂಭ್ರಮಿಸಿದ್ದಾರೆ.

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರು ದೀಕ್ಷಿತಾ ವರ್ಕಾಡಿ ಹಾಗು ಕುಶಾಲನಗರದ ಹೇಮಂತ್ ಎಂಬುವವರು ಮಾದರಿಯಾದ ಜೋಡಿಗಳು

ಪ್ಲಾಸ್ಟಿಕ್ ರಹಿತ ಮದುವೆಯ ಆಮಂತ್ರಣ ಪತ್ರ, ಬಟ್ಟೆಯ ಚೀಲ, ಬಟ್ಟೆಯ ಟಿಶ್ಯು, ಕಾಗದದ ಲೋಟಗಳು, ಮದುವೆಯ ಅಲಂಕಾರಿಕ ವಸ್ತುವಾಗಿ ಕೈಬರಹಗಳಲ್ಲಿ ಮೂಡಿಬಂದ ಕಾಗದಗಳ ಚಿತ್ರಗಳು ಕವನಗಳು, ಹಸಿರು ಸಸಿಗಳ ಬಗೆಗೆ ಪ್ರತಿಜ್ಞಾ ವಿಧಿ, ಕನ್ನಡದ ಬರಹಗಾರರಿಂದ ಕವನಗಳು, ಹಾಗು ಬಂದಿರುವಂತಹ ಅತಿಥಿಗಳಿಗೆ ಉಡುಗೊರೆಯಾಗಿ ಪುಸ್ತಕಗಳ ಕೊಡುಗೆ ಹೀಗೆ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಸೃಜನಶೀಲತೆಗೆ ಅವಕಾಶದಂತೆ ಹೊಸತನವನ್ನು ತುಂಬಿಕೊಂಡು ಮದುವೆ ಸಮಾರಂಭವನ್ನು ಸಂಭ್ರಮಿಸಿದ್ದಾರೆ.

ಮದುವೆ ಎಂಬುವುದು ಮಾದರಿಯಾಗಬೇಕು ಎಂಬ ಮಾತಿನಂತೆ .ಒಂದೇ ಒಂದು ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೆ ಪರಿಸರ ಹಾನಿ ಮಾಡದೆ ಮದುವೆಯ ಸಡಗರವನ್ನು ಸಂಭ್ರಮಿಸಿದ್ದಾರೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here