Thursday, October 19, 2023

ಪೊಳಲಿ ದೇವಾಲಯದಲ್ಲಿ ಕಲಶಾಭಿಷೇಕ

Must read

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಾಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವರುಗಳಿಗೆ ಶ್ರೀ ರಾಜರಾಜೇಶ್ವರೀ .ಶ್ರೀ ಸುಬ್ರಹ್ಮಣ್ಯ, ಶ್ರೀ ವಿನಾಯಕ, ಶ್ರೀ ಭದ್ರಕಾಳಿ ದೇವರುಗಳ ಜೀವಕಲಶಾಭಿಷೇಕ ನಡೆಯಿತು. ಹಾಗೂ ಶ್ರೀ ಕ್ಷೇತ್ರಪಾಲನ ಬಿಂಬಪ್ರತಿಷ್ಠೆ, ಶ್ರೀ ಮಗೃಂತಾಯ ದೈವದ ಪ್ರತಿಷ್ಠೆ , ಅಭಿಷೇಕವು ಪೊಳಲಿ ಕೃಷ್ಣ ತಂತ್ರಿ ಗಳ ನೇತೃತ್ವದಲ್ಲಿ ನಡೆಯಿತು.

ಕಾಲ ಪ್ರಸನ್ನಪೂಜೆ, ಶ್ರೀ ಕ್ಷೇತ್ರಪಾಲ ಬಿಂಬಪ್ರತಿಷ್ಠೆ, ಶ್ರೀ ಮಗೃಂತಾಯ ದೈವದ ಪ್ರತಿಷ್ಠೆ ಹಾಗೂ ಮದ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.
ಸಾಯಾಂಕಾಲ ಭದ್ರಕಾಳಿ ಮಂಡಲ ಪೂಜೆ, ವನದುರ್ಗಾಹವನ, ಶ್ರೀ ಕೊಡಮಣಿತ್ತಾಯ ದೈವಕ್ಕೆ 25 ಕಲಶಾಧಿವಾಸ, ಅಧಿವಾಸಹವನ, ಪ್ರಸನ್ನಪೂಜೆ ವೈಧಿಕ ವಿಧಿವಿಧನಗಳೋಂದಿಗೆ ಕ್ಷೇತ್ರದ ತಂತ್ರಿ ಸುಬ್ರಹ್ಮಣ್ಯ ,ವೇಂಕಟೇಶ್ ತಂತ್ರಿಗಳ ನೇತೃತ್ವದಲ್ಲಿ ದೇವಾಲಯದ ಪವಿತ್ರಪಾಣಿ ಮಾಧವ ಭಟ್, ರಾಮಭಟ್, ಕೆ. ನಾರಾಯಣ ಭಟ್, ಪರಮೇಶ್ವರ ಭಟ್, ಮಾಧವ ಮಯ್ಯ, ವಿಷ್ಣೂಮೂರ್ತಿ ನಟ್ಟೋಜ ಪುರೋಹಿತ ವರ್ಗದವರು ನೆರವೇರಸಿದರು. ಈ ಸಂಧರ್ಭದಲ್ಲಿ ಕಟೀಲು ದೇವಳದ ಅನಂತ ಪದ್ಮನಾಭ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಕಮಲಾದೇವಿ ಪ್ರಸಾದ, ವೆಂಕಟರಮಣ ಆಸ್ರಣ್ಣ, ಹಿಂದೂ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ ಭಟ್ ಮಾಜಿ ಸಚಿವರುಗಳಾದ ಬಿ.ನಾಗರಾಜ ಶೆಟ್ಟಿ, ಬಿ.ರಮಾನಾಥ ರೈ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ಧಾರ್ಮಿಕ ಪರಿಷತ್ ಸದಸ್ಯ ಪೊಳಲಿ ಗಿರಿಪ್ರಕಾಶ್ ತಂತ್ರಿ , ಉಧ್ಯಮಿ ಪುಣೆ ರೋಹಿತ್ ಶೆಟ್ಟಿ ಹಾಗೂ ಹಲಾವಾರು ಗಣ್ಯರು ಉಪಸ್ಥಿತರಿದ್ದರು.

ದೇವಳದ ಅನುವಂಶಿಕ ಆಡಳಿತ ಮೊಕತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಅನುವಂಶಿಕ ಮೊಕ್ತೇಸರರಾದ ಯು. ತಾರಾನಾಥ ಆಳ್ವ, ಚೇರಾ ಸೂರ್ಯ ನಾರಾಯಣ ರಾವ್ ದೇವಳದ ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ ಹಾಗೂ ಸಾವಿರ ಸೀಮೇಯ ಭಕ್ತಾಧಿಗಳು ಉಪಸ್ಥಿತರಿದ್ದರು.

More articles

Latest article