






ಬಂಟ್ವಾಳ : ಹಿರಿಯ ರಂಗಕಲಾವಿದ ಚಿ.ರಮೇಶ್ ಕಲ್ಲಡ್ಕ ಅವರ ಧರ್ಮಪತ್ನಿ ಶ್ರೀ ಲತಾ ಆಚಾರ್ಯ(49) ಅವರು ಮಂಗಳವಾರ ರಾತ್ರಿ ತನ್ನ ಸ್ವಗೃಹದಲ್ಲಿ ನಿಧನಹೊಂದಿದರು.ಏಕಾಏಕಿ ಕಾಣಿಸಿಕೊಂಡ ರಕ್ತದೊತ್ತಡ ಸಮಸ್ಯೆಯಿಂದ ಅಸ್ವಸ್ಥಗೊಂಡ ಇವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮೃತರು ಪತಿ ಚಿ.ರಮೇಶ್ ಕಲ್ಲಡ್ಕ, ಓರ್ವ ಪುತ್ರಿ , ಪುತ್ರ , ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಮಾಜಿಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ನಾಟಕನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್, ಬಂಟ್ವಾಳ ಜಯರಾಮ ಆಚಾರ್ಯ ಮೊದಲಾದವರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.





