


ಬಂಟ್ವಾಳ: ಶ್ರೀರಾಮ ಪದವಿ ಮಹಾವಿದ್ಯಾಲಯದ ಪ್ರದೀಪ್ತ ಸಾಂಸ್ಕೃತಿಕ ಸಂಘವನ್ನು ಖ್ಯಾತ ಯಕ್ಷಗಾನ ಹಾಸ್ಯಕಲಾವಿದ ದಿನೇಶ್ ಕೊಡಪದವು ಇವರು ಉದ್ಘಾಟಿಸಿದರು. ನಿಜವಾದ ಸಂಸ್ಕೃತಿ, ಸಾಂಸ್ಕೃತಿಕ ವೈಭವವನ್ನು ನೋಡಲು ಶ್ರೀರಾಮ ವಿದ್ಯಾಕೇಂದ್ರಕ್ಕೆ ಬರಬೇಕು ಎಂದವರು ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ನಾಗೇಶ್ ಇರಾ, ಶ್ರೀಮತಿ ಲಕ್ಷ್ಮಿ ರಘುರಾಜ್ ಹಾಗೂ ಪ್ರಾಚಾರ್ಯರಾದ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಇವರು ಉಪಸ್ಥಿತರಿದ್ದರು. ಇದಾದ ಬಳಿಕ ‘ಕಾಲಯ ತಸ್ಮೈ ನಮಃ’ ಎಂಬ ಶೀರ್ಷಿಕೆಯಡಿ ಅಂತಿಮ ಪದವಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.





