


ಮೆಹಂದಿ ಕಾರ್ಯಕ್ರಮ ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ರೂಪಗಳೊಂದಿಗೆ ಮೆರುಗು ನೀಡುವ ಮೂಲಕ ಹೆಸರುಪಡೆಯುತ್ತಿದೆ.
ಮೆಹಂದಿ,ಮದುವೆ ಕಾರ್ಯಕ್ರಮಗಳಲ್ಲಿ ದೇವರ ಸ್ತುತಿ, ಭಜನೆ, ಹಾಡು, ಹೀಗೆ ಬೇರೆ ಬೇರೆ ರೀತಿಯ ಕಾರ್ಯಕ್ರಗಳನ್ನು ಆಯೋಜಿಸುವ ಮೂಲಕ ಜನರನ್ನು ಆಕರ್ಷಿಸಲು ಮುಂದಾಗುತ್ತಾರೆ.
ಇಂತಹ ಒಂದು ಅದ್ಭುತವಾದ ಕಾರ್ಯಕ್ರಮ ನಡೆದದ್ದು ವೀರಕಂಭದಲ್ಲಿ…..
ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ವೀರಕಂಭ ಗ್ರಾಮದ ಕೇಪುಳಕೋಡಿ ” ತನುಜ” ಅವರ ಮೆಹಂದಿ ಕಾರ್ಯಕ್ರಮದಲ್ಲಿ
” ಯಕ್ಷಗಾನ ವೈಭವದ” ಕಾರ್ಯಕ್ರಮ ಆಯೋಜಿಸಿ ಸೇರಿದ ಜನರನ್ನು ರಂಜಿಸಿದ್ದಾರೆ.
ಸುಮಾರು ಎರಡು ತಾಸುಗಳ ಕಾಲ ನಡೆದ ಗಾನವೈಭವ ಕಾರ್ಯಕ್ರಮ ನಿಜಕ್ಕೂ ಮೆಹಂದಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ವಿಶಿಷ್ಟ ರೀತಿಯಲ್ಲಿ ಮೆಹಂದಿ ಕಾರ್ಯಕ್ರಮ ವನ್ನು ಮಾಡಲು ಮುಂದಾಗಿ ನಿಜವಾದ ಅರ್ಥದಲ್ಲಿ ಆಗಬೇಕಾದ ಕಾರ್ಯಕ್ರಮಗಳು ರೂಪಾಂತರ ಹೊಂದಿ ಯುವಕರ ಮನಸ್ಸುಗಳು ದಾರಿ ತಪ್ಪುವ ಈ ಕಾಲಘಟ್ಟದಲ್ಲಿ ಇಂತಹ ಸಾಹಿತ್ಯದ ಕಾರ್ಯಕ್ರಮ ಆಯೋಜನೆ ನಿಜಕ್ಕೂ ಉತ್ತಮವಾದದ್ದು.
ಯುವ ಜನತೆ ಹಾಗೂ ಮಕ್ಕಳಿಗೆ ಸಾಹಿತ್ಯದ ಸವಿಯ ಜೊತೆ ಆಸಕ್ತಿ ಮೂಡಲು ಇಂತಹ ಕಾರ್ಯಕ್ರಮ ಗಳಿಂದ ಮಾತ್ರ ಸಾಧ್ಯ…
ಕಾರ್ಯಕ್ರಮ ನಿರೂಪಕ ವಾದಿರಾಜ ಕಲೂರಾಯ ಅವರ ತಂಡದಲ್ಲಿ ಭಾಗವತರಾದ ಅಮೃತ ಅಡಿಗ , ಭವ್ಯಹರೀಶ ಕುಲ್ಕುಂದ, ಚೆಂಡೆ ಕೌಶಿಕ್, ಮದ್ದಲೆಯಲ್ಲಿ ಸುಮಿತ್ ಆಚಾರ್ಯ ಕಿನ್ನಿಕಂಬಳ ಅವರು ಭಾಗವಹಿಸಿದ್ದರು.





