ಬಂಟ್ವಾಳ: ಬಂಟ್ವಾಳ ತಾಲೂಕಿನ ಅನೇಕ ಗ್ರಾಮಗಳ ಮಧ್ಯೆ ಉಡುಪಿಯಿಂದ- ಕಾಸರಗೋಡಿಗೆ ಹೈ- ಟೆನ್ಸನ್ ವಿದ್ಯುತ್ ಸರಬರಾಜು ಯೋಜನೆಗೆ ಕೇಂದ್ರ  ಸರಕಾರ ಹಾಗೂ ರಾಜ್ಯ ಸರಕಾರವು ಅನುಮತಿ ನೀಡಿರುವುದರ ವಿರುದ್ದ ಸಮಾನ ಮನಸ್ಕರ ಹೋರಾಟ ಸಮಿತಿ ಬಂಟ್ವಾಳ ಇದರ ವತಿಯಿಂದ ಅನೇಕ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಇತರ ಸಂಘ ಸಂಸ್ಥೆಯ ಮುಖಂಡರು ಮತ್ತು ಈ ಯೋಜನೆಯಿಂದ ಕೃಷಿ ಭೂಮಿ ನಷ್ಟಕ್ಕೊಳಗಾಗುವವರು ಬಿ ಸಿ ರೋಡಿನ ರಂಗೋಲಿ ಸಭಾಂಗಣದಲ್ಲಿ ಯು. ಪಿ. ಸಿ. ಎಲ್ ನ ಯೋಜನೆಯ ವಿರುದ್ದ ಪ್ರತಿಭಟಿಸಲು ರೂಪುರೇಷೆಯನ್ನು ಮಾಜಿ ಸಚಿವ ರಮಾನಾಥ ರೈ  ಯವರ ನೇತೃತ್ವದಲ್ಲಿ ನಡೆಯಿತು.

ಮುಂದಿನ  ದಿನದಲ್ಲಿ ಈ ಯೋಜನೆಯ ವಿರುದ್ದ ಇಡೀ ಬಂಟ್ವಾಳ ತಾಲೂಕಿನಾದ್ಯಂತ ಗ್ರಾಮಗಳಿಗೆ ಸಂಚರಿಸಿ ಈ ಯೋಜನೆ ಯಿಂದ ಆಗು ದುಷ್ಪರಿನಾಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ಈ ಯೋಜನೆಯನ್ನು ಸಂಪೂರ್ಣ ಕೈ ಬಿಡುವವರೆಗೆ  ತೀವ್ರ  ಹೋರಟ ಮಾಡುವಂತೆ ತೀ ತೀರ್ಮಾನಿಸಲಾಯಿತು ಎಂದು ಸಮಿತಿಯ ಸದಸ್ಯರಾದ ಬೇಬಿ ಕುಂದರ್ ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here