


ಬಂಟ್ವಾಳ: ಪುಣ್ಯಕ್ಷೇತ್ರವಾಗಿರುವ ನಂದಾವರ ಶ್ರೀ ಶಂಕರನಾರಾಯಣ ವಿನಾಯಕ ದುರ್ಗಾಂಬ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಸುಲಭ ಸಂಪರ್ಕದ ದೃಷ್ಟಿಯಿಂದ ಪಾಣೆಮಂಗಳೂರು ಶ್ರೀ ವೀರ ವಿಠಲ ದೇವಸ್ಥಾನದ ಬಳಿಯಿಂದ ನೂತನ ರಸ್ತೆ ನಿರ್ಮಾಣದ ಅನುದಾನಕ್ಕಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದರ ಕಾಮಗಾರಿಯ ಸಾಧ್ಯ ಸಾಧ್ಯತೆಯ ಕುರಿತು ಶಾಸಕರು ಪರಿಶೀಲನೆ ನಡೆಸಿದರು.
ನಂದಾವರ ಕ್ಷೇತ್ರದ ಮೂಲಸೌಕರ್ಯ ವೃದ್ಧಿಯ ದೃಷ್ಟಿಯಿಂದ ಇದು ಬಂಟ್ವಾಳ ಶಾಸಕರ ಕನಸಿನ ಯೋಜನೆಯಾಗಿದ್ದು, ಇದಕ್ಕೆ ಈಗಾಗಲೇ ಲೋಕೋಪಯೋಗಿ ಇಲಾಖೆಯ ಮೂಲಕ 10 ಕೋ.ರೂ.ಗಳ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಹೀಗಾಗಿ ಶಾಸಕರು ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ, ಮಳೆಗಾಲಕ್ಕೆ ಮುಂಚಿತವಾಗಿ ಕಾಮಗಾರಿ ಆರಂಭದ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯರಾದ ರವೀಂದ್ರ ಕಂಬಳಿ, ಬಿಜೆಪಿ ಮುಖಂಡ ಶ್ರೀಕಾಂತ ಶೆಟ್ಟಿ, ರಮನಾಥ ರಾಯಿ, ಸುರೇಶ್ ಶಾರ್ಥವ್, ರೂಪೇಶ್ ಆಚಾರ್ಯ,ಯಶವಂತ ನಗ್ರಿ, ಮಂಜಲ್ಪಾದೆ ವಿಷ್ಣು ಮೂರ್ತಿ ದೇವಸ್ಥಾನದ ಅಧ್ಯಕ್ಷ ಕೃಷ್ಣ ಶ್ಯಾಮ,
ಸ.ನಡು ಸುಬ್ರಹ್ಮಣ್ಯ ದೇವಸ್ಥಾನ ದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೆಂಕಟೇಶ್ ಭಟ್ ಮುಳ್ಳುಂಜ,
ಮುಗುಳಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಶಂಕರ್ ಬಾಸ್ರಿತ್ತಾಯ, ತಂತ್ರಿಗಳಾದ ಸುಬ್ರಹ್ಮಣ್ಯ ಭಟ್ ಸಜೀಪ, ಸ್ಥಳೀಯ ಗ್ರಾ.ಪಂ.ಸದಸ್ಯರಾದ ಪ್ರವೀಣ್ ಗಟ್ಟಿ, ಸಂದೀಪ್ ಕುಮಾರ್, ಗಣೇಶ್ ಸುಂದರ, ಸುಮತಿ, ಸರೋಜಿನಿ, ಧನಲಕ್ಮೀ, ನವೀನ್ ಅಂಚನ್, ರಾಜೇಶ್ , ಅನಿತಾ, ಚಂದ್ರಕಲಾ, ದೇವಸ್ಥಾನದ ವ್ಯವಸ್ಥಾನ ಸಮಿತಿ ಅಧ್ಯಕ್ಷ ಅರವಿಂದ ಭಟ್, ಸದಸ್ಯರಾದ ಮಾಜಿ ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ, ಕವಿತ, ದೇವಪ್ಪ, ಗಣೇಶ್ ಕಾರಾಜೆ, ಜಯಶ್ರೀಅಶೋಕ್ ಗಟ್ಟಿ, ಮೋಹನ್ ದಾಸ ಹೆಗ್ಡೆ, ಅರುಣ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ಮಹೇಶ್ ಭಟ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳಾದ ಎ.ಇ.ಇ.ಷಣ್ಮುಗಂ, ಎ.ಇ.ಅಮೃತ್ ಕುಮಾರ್, ಜೆ.ಇ.ಅರುಣ್ ಕುಮಾರ್ ಹಾಗೂ ಅರಮನೆ ಹಿತ್ತಲು ಹಾಗೂ ನಂದಾವರದ ನಾಗರಿಕರು ಮತ್ತಿತರ ರು ಉಪಸ್ಥಿತರಿದ್ದರು.





