ಬಂಟ್ವಾಳ: ಧಾರ್ಮಿಕ ಕೇಂದ್ರಗಳು ಹಾಗೂ ಶಾಲೆಗಳು ಅಭಿವೃದ್ಧಿ ಯಾದಾಗ ಗ್ರಾಮದಲ್ಲಿ ಪಾಸಿಟಿವ್ ಎನರ್ಜಿ ಉಂಟಾಗುತ್ತದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಅವರು ಹೇಳಿದರು.

ಅವರು ನಂದಾವರದಲ್ಲಿ ಕಾಂಕ್ರೀಟಿಕರಣಗೊಂಡ ಅರಮನೆ ರಸ್ತೆಯನ್ನು ಉದ್ಘಾಟಿಸಿದ ಬಳಿಕ ನಂದಾವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.

ಅನೇಕ ಸಮಸ್ಯೆಗಳಿಂದ ಕೂಡಿದ್ದ ಜನರ ಬಹು ವರ್ಷ ದ ಕನಸಿನ ರಸ್ತೆಯ ಕಾಂಕ್ರೀಟ್ ಕರಣ ರಸ್ತೆ ಉದ್ಘಾಟನೆ ನಡೆದಿದೆ, ಪ್ರಸ್ತುತ ಬಾಕಿಯಾಗಿರುವ ಅದೇ ರಸ್ತೆಯೆ ಮುಂದುವರಿದ ಭಾಗ ವನ್ನು ಮುಂದಿನ ಹಂತದಲ್ಲಿ ಮಾಡುವ ಭರವಸೆ ನೀಡಿದರು.

ದೇವಸ್ಥಾನದ ಸ್ವಚ್ಚತೆಗೆ ಅಧ್ಯತೆ ನೀಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಯೋಜನೆ ರೂಪಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯರಾದ ರವೀಂದ್ರ ಕಂಬಳಿ, ಬಿಜೆಪಿ ಮುಖಂಡ ಶ್ರೀಕಾಂತ ಶೆಟ್ಟಿ, ರಮನಾಥ ರಾಯಿ, ಸುರೇಶ್ ಶಾರ್ಥವ್, ರೂಪೇಶ್ ಆಚಾರ್ಯ,ಯಶವಂತ ನಗ್ರಿ, ಮಂಜಲ್ಪಾದೆ ವಿಷ್ಣು ಮೂರ್ತಿ ದೇವಸ್ಥಾನದ ಅಧ್ಯಕ್ಷ ಕೃಷ್ಣ ಶ್ಯಾಮ,

ಸ.ನಡು ಸುಬ್ರಹ್ಮಣ್ಯ ದೇವಸ್ಥಾನ ದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೆಂಕಟೇಶ್ ಭಟ್ ಮುಳ್ಳುಂಜ,

ಮುಗುಳಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಶಂಕರ್ ಬಾಸ್ರಿತ್ತಾಯ, ತಂತ್ರಿಗಳಾದ ಸುಬ್ರಹ್ಮಣ್ಯ ಭಟ್ ಸಜೀಪ,

ಸ್ಥಳೀಯ ಗ್ರಾ.ಪಂ.ಸದಸ್ಯರಾದ ಪ್ರವೀಣ್ ಗಟ್ಟಿ, ಸಂದೀಪ್ ಕುಮಾರ್, ಗಣೇಶ್ ಸುಂದರ, ಸುಮತಿ, ಸರೋಜಿನಿ, ಧನಲಕ್ಮೀ, ನವೀನ್ ಅಂಚನ್, ರಾಜೇಶ್ , ಅನಿತಾ, ಚಂದ್ರಕಲಾ, ದೇವಸ್ಥಾನದ ವ್ಯವಸ್ಥಾನ ಸಮಿತಿ ಅಧ್ಯಕ್ಷ ಅರವಿಂದ ಭಟ್, ಸದಸ್ಯರಾದ ಮಾಜಿ ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ, ಕವಿತ, ದೇವಪ್ಪ, ಗಣೇಶ್ ಕಾರಾಜೆ, ಜಯಶ್ರೀಅಶೋಕ್ ಗಟ್ಟಿ, ಮೋಹನ್ ದಾಸ ಹೆಗ್ಡೆ, ಅರುಣ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ಮಹೇಶ್ ಭಟ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳಾದ ಎ.ಇ.ಇ.ಷಣ್ಮುಗಂ, ಎ.ಇ.ಅಮೃತ್ ಕುಮಾರ್, ಜೆ.ಇ.ಅರುಣ್ ಕುಮಾರ್ ಹಾಗೂ ಅರಮನೆ ಹಿತ್ತಲು ಹಾಗೂ ನಂದಾವರದ ನಾಗರಿಕರು ಮತ್ತಿತರ ರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here