ಬಂಟ್ವಾಳ: ಬಂಟ್ವಾಳ ತಾಲೂಕಿನ ವರದಿಗಾರನೋರ್ವನ ಪೇಸ್‌ ಬುಕ್ ಪೇಜ್ ಅನ್ನು ಹ್ಯಾಕ್ ಮಾಡಿ ಹಣದ ಅವಶ್ಯಕತೆ ಇದೆ ಹಾಗಾಗಿ ಹಣ ನೀಡುವಂತೆ ಮೆಸೇಜ್ ಹಾಕಿದ ಘಟನೆ ಇಂದು ಬೆಳಕಿಗೆ ಬಂದಿದೆ.

ಬಂಟ್ವಾಳ ನಿವಾಸಿ ರತ್ನದೇವ್ ಪುಂಜಾಲಕಟ್ಟೆ ಅವರ ಪೇಸ್ ಬುಕ್ ಪೇಜ್ ಅನ್ನು ಹ್ಯಾಕ್ ಮಾಡಿದ ಅಪರಿಚಿತ ವ್ಯಕ್ತಿ ಗಳು ಹಣದ ಬೇಡಿಕೆ ಇಟ್ಟಿದ್ದಾರೆ.

ಪುಂಜಾಲಕಟ್ಟೆ ವ್ಯಾಪ್ತಿಯ ಲ್ಲಿ ಉದಯವಾಣಿ ದಿನಪತ್ರಿಕೆಗೆ ವರದಿಗಾರ ನಾಗಿ ಕೆಲಸ ಮಾಡುವ ರತ್ನದೇವ್ ಅವರಿಗೆ ಈ ಘಟನೆಯಿಂದ ಕಿರಿಕಿರಿಯಾಗಿದ್ದು ಈ ಬಗ್ಗೆ ಬಂಟ್ವಾಳ ನಗರ ಠಾಣಾ ಪೋಲೀಸರಿಗೆ ದೂರು ನೀಡಿದ್ದಾರೆ.

ಇಂತಹ ಘಟನೆ ತಿಂಗಳ. ಹಿಂದೆ ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ಅವರಿಗೆ ನಡೆದಿದ್ದು ಸಾರ್ವಜನಿಕ ರು ಎಚ್ಚರಿಕೆ ಯಿಂದ ಇರುವ ಅಗತ್ಯವಿದೆ.

ಜೊತೆಗೆ ರತ್ನ ದೇವ್ ಅವರ ಪೇಸ್ ಬುಕ್ ಹ್ಯಾಕ್ ಮಾಡಲಾಗಿರುವುದರಿಂದ ಮತ್ತು ಸುಳ್ಳು ಸುದ್ದಿ ಯನ್ನು ಹಬ್ಬಿಸಿ ಹಣ ವಸೂಲಿಗೆ ಯತ್ನಿಸಿರುವುದರಿಂದ ಅವರ ಸ್ನೇಹಿತರು ಹಣ ನೀಡದಂತೆ ಅವರು ಮನವಿ ಮಾಡಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here