ದ್ರಿಥ್ವಿ ಕ್ರಿಯೇಷನ್ ಅರ್ಪಿಸುವ ಬಹುನಿರೀಕ್ಷಿತ ಕನ್ನಡ ಆಲ್ಬಂ ಸಾಂಗ್ ಬಿಡುಗಡೆಗೊಂಡಿದ್ದು ಜನರ ಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ.ಅದರಲ್ಲು ಮಹಿಳಾಮಣಿಗಳ ಮನಸನ್ನು ಹೆಚ್ಚು ಆಕ್ರಮಿಸಿಕೊಂಡ ಆಲ್ಬಂ ಸಾಂಗ್ ಇದಾಗಿದೆ.
ಉತ್ಸವ್ ವಾಮಂಜೂರು ನಿರ್ದೇಶಿಸಿರುವ ಹಾಡಿಗೆ ನಟಿಸಿ ಧ್ವನಿಯನ್ನು ನೀಡಿದ್ದಾರೆ ರಕ್ಷಣ್ ಹಾಗು ನಟಿಯಾಗಿ ಶ್ವೇತಾ ಸುವರ್ಣ ಅಭಿನಯಿಸಿದ್ದಾರೆ.ಚಂದ್ರಹಾಸ ಬಳಂಜ ಸಾಹಿತ್ಯ ಬರೆದಿದ್ದು ಅರುಣ್ ರೈ ಕ್ಯಾಮರಾ ಕೈಚಳಕವಿದೆ. ಜೀವನ್ ರಶ್ಮಿ ನಿರ್ಮಾಪಕರು ಹಾಗು ಪ್ರೀಶಾನ್ ಉಳ್ಳಾಲ್,ಅಕ್ಷಿತ್ ಸಜಿಪ ಸಹ ನಿರ್ಮಾಣ ಮಾಡಿದ್ದಾರೆ.