Wednesday, October 18, 2023

ನೈತಿಕ ಮೌಲ್ಯಗಳು ಪಠ್ಯದಲ್ಲಿ ಬರಲಿ : ವಿಠಲ್ ನಾಯಕ್

Must read

ಪುತ್ತೂರು: ಅಂಕ ಆಧಾರಿತ ಶಿಕ್ಷಣ ಬದುಕಿನಲ್ಲಿ ಭರವಸೆ ತುಂಬುವುದಿಲ್ಲ, ಬದುಕನ್ನು ಎದುರಿಸುವ ನೈತಿಕ ಮೌಲ್ಯಗಳು ಪಠ್ಯದಲ್ಲಿ ಸ್ಥಾನಪಡೆಯಲಿ ಎಂದು ಹಾಸ್ಯಕಲಾವಿದ, ಶಿಕ್ಷಕ ವಿಠಲ್ ನಾಯಕ್ ಹೇಳಿದರು.

ರೋಟರಿ ಪುತ್ತೂರು ಎಲೈಟ್, ರೋಟರಿ ಪುತ್ತೂರು ಸ್ವರ್ಣ, ರೋಟರಿ ಪುತ್ತೂರು ಸೆಂಟ್ರಲ್ ಹಾಗೂ ಸುದಾನ ವಸತಿಯುತ ಶಾಲೆ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಜನವರಿ 14 ರಂದು ಸುದಾನ ಆವರಣದ ಎಡ್ವರ್ಡ್ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಯುವದಿನಾಚರಣೆ ಹಾಗೂ ಸಂಕ್ರಾಂತಿ ನಗೆಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ವಿದ್ಯಾರ್ಥಿ ಸಮೂಹ ವಿವಿಧ ರೀತಿಯ ಮಾನಸಿಕ ತಲ್ಲಣಗಳನ್ನು ಎದುರಿಸುತ್ತಿದ್ದು, ಮನೆ, ಸಮಾಜ, ಶಾಲೆಯ ಪರಿಸರವೂ ಇದಕ್ಕೆ ಕಾರಣವಾಗಿದೆ ಎಂದ ಅವರು, ಹಲವು ಹಾಸ್ಯ ಸನ್ನಿವೇಶಗಳ ಮೂಲಕ ವಾಸ್ತವ ವಿಚಾರಗಳನ್ನು ತೆರೆದಿಟ್ಟರು.

ಸಮಯಪ್ರಜ್ಞೆ, ಪರೋಪಕಾರ ವನ್ನು ಮೈಗೂಡಿಸಿಕೊಂಡು ಬದುಕನ್ನು ಸಮರ್ಥವಾಗಿ ಎದುರಿಸುವ ಸಂಸ್ಕಾರಯುತ ಶಿಕ್ಷಣ ಇಂದಿನ ಅಗತ್ಯ ಎಂದವರು ಅಭಿಪ್ರಾಯಿಸಿದರು.

ರೋಟರಿ ಸೆಂಟ್ರಲ್ ಅಧ್ಯಕ್ಷ ರೊ.ವೆಂಕಟರಾಜು ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸ್ವರ್ಣದ ಅಧ್ಯಕ್ಷೆ ರೊ.ಸೆನೊರಿಟಾ ಆನಂದ್, ರೋಟರಿ ಎಲೈಟ್ ನ ನಿಯೋಜಿತ ಕಾರ್ಯದರ್ಶಿ ರೊ.ರಂಜಿತ್ ಮಥಾಯಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ರೋಟರಿ ಕುಟುಂಬದ ಮಕ್ಕಳು ಹಾಗೂ ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿಗಳಿಗಾಗಿ ವಿವಿಧ ಮನರಂಜನಾ ಆಟಗಳನ್ನು ಆಯೋಜಿಸಲಾಗಿತ್ತು. ರೋಟರಿ ಸೆಂಟ್ರಲ್ ಕಾರ್ಯದರ್ಶಿ ರೊ.ಅಶೋಕ್ ನಾಯ್ಕ್ ಸ್ವಾಗತಿಸಿದರು. ರೋಟರಿ ಎಲೈಟ್ ನ ಯೂತ್ ಸರ್ವೀಸ್ ಡೈರೆಕ್ಟರ್ ರೊ.ಮೌನೇಶ ವಿಶ್ವಕರ್ಮ ಕಾರ್ಯಕ್ರಮ‌ ನಿರ್ವಹಿಸಿ ವಂದಿಸಿದರು. ರೊ.ಬಾಲುನಾಯ್ಕ್ ಸಹಕರಿಸಿದರು.

More articles

Latest article