



ವಿಟ್ಲ: ಬಂಟ್ವಾಳ ಗೌಡ ಯಾನೆ ಒಕ್ಕಲಿಗರ ಸಂಘ ವಿಟ್ಲ ಇದರ ಮಹಾಸಭೆ ವಿಟ್ಲ ಅಕ್ಷಯ ಸಮುದಾಯ ಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಮೋಹನ ಕಾಯರ್ಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮೋನಪ್ಪ ಗೌಡ ಶಿವಾಜಿನಗರ ಲೆಕ್ಕಪತ್ರ ಮಂಡಿಸಿದರು. ಯುವವೇದಿಕೆ ಕಾರ್ಯದರ್ಶಿ ಯತೀಶ್ ಪಾದೆ ಯುವವೇದಿಕೆಯ ವರದಿ ವಾಚಿಸಿದರು.
ಸಂಘದ ಗೌರವಾಧ್ಯಕ್ಷ ಲಿಂಗಪ್ಪ ಗೌಡ ಅಳಿಕೆ ಪ್ರಸ್ತಾವಿಸಿದರು. ಪುತ್ತೂರು ಶಾಸಕ ಸಂಜೀವ ಮಠಂದೂರು ಅತಿಥಿಯಾಗಿ ಭಾಗವಹಿಸಿದ್ದರು. ಯುವವೇದಿಕೆ ಅಧ್ಯಕ್ಷ ವಿನಯ ಸಂಕೇಶ ಉಪಸ್ಥಿತರಿದ್ದರು.
ಸಂಘದ ಕೋಶಾಧಿಕಾರಿ ವಿಶ್ವನಾಥ ಗೌಡ ಕುಳಾಲು ಸ್ವಾಗತಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಜಲಜಾಕ್ಷಿ ಪೊನ್ನೆತ್ತಡಿ ವಂದಿಸಿದರು.
ಬೆಳಗ್ಗೆ ಗಣಹೋಮ, ಶ್ರೀಸತ್ಯನಾರಾಯಣ ಪೂಜೆ ನಡೆಯಿತು.






