

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ)ವಿಟ್ಲ ಹಾಗೂ ಸಿಂಧೂರ ಜ್ಞಾನವಿಕಾಸ ಕೇಂದ್ರ, ಭಾರತ ಸರ್ಕಾರ ದತ್ತೋಪಂತ್ ಠೇಂಗಡಿ ,ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ಧಿ ಮಂಡಳಿ ಮತ್ತು ಉದ್ಯೋಗ ಸಚಿವಾಲಯ, ಉಪ ಪ್ರಾದೇಶಿಕ ನಿರ್ದೇಶನಾಲಯ ಮಂಗಳೂರು ಇದರ ಸಂಯುಕ್ತಾಶ್ರಯದಲ್ಲಿ ಇರಾ ಕಂಚಿನಡ್ಕಪದವು ಅಂಬೇಡ್ಕರ್ ಭವನದಲ್ಲಿ ಸ್ವ-ಉದ್ಯೋಗ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವು ಪ್ರಗತಿಬಂಧು ಸ್ವಸಾಯ ಸಂಘ ಇರಾ ಒಕ್ಕೂಟದ ಮುಡಿಪು ವಲಯದ ಅಧ್ಯಕ್ಷರಾದ ಜಯಪ್ರಕಾಶ್ ಕಾಜವ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಮಮತಾ ಹರೀಶ್ ರಾವ್ ರವರು ಉದ್ಘಾಟಿಸಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಉದ್ದೇಶ ಹಾಗೂ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಬಂಟ್ವಾಳ ತಾಲೂಕು ಪಂಚಾಯತ್ ನ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ ರವರು ಭಾಗವಹಿಸಿ ಇಂದಿನ ಪರಿಸ್ಥಿತಿಯಲ್ಲಿ ಮಹಿಳೆಯರಿಗೆ ಸ್ವಉದ್ಯೋಗದ ಮೂಲಕ ಸ್ವಾವಲಂಬಿ ಜೀವನದ ಅವಶ್ಯಕತೆಯ ಬಗ್ಗೆ ತಿಳಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರೇಖಲತಾ, ಅಧ್ಯಕ್ಷರು ಯುವವಾಹಿನಿ ಮಹಿಳಾ ಘಟಕ ಮಂಗಳೂರು, ಹರಿಣ ಜಿ ರಾವ್ ಅಧ್ಯಕ್ಷರು ಜಿಲ್ಲಾ ಸಣ್ಣ ಕೈಗಾರಿಕಾ ಮಹಿಳಾ ಸಂಘ ಹಾಗೂ ಶಾಂತಿ ಸದಸ್ಯರು ಜಿಲ್ಲಾ ಸಣ್ಣ ಕೈಗಾರಿಕಾ ಮಹಿಳಾ ಸಂಘ ಭಾಗವಹಿಸಿ ಸೂಕ್ತ ಮಾಹಿತಿ ನೀಡಿದರು, ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷರಾದ ನವೀನ್ ಪಾದಲ್ಪಾಡಿ ,ಇರಾ ಒಕ್ಕೂಟದ ಅಧ್ಯಕ್ಷರಾದ ಭಾಸ್ಕರ್ ಹಾಗೂ ಸೇವಾ ಪ್ರತಿನಿಧಿ ಕವಿತಾ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಲ್ಲೂಕು ಯೋಜನಾಧಿಕಾರಿ ಪಿ ಚೆನ್ನಪ್ಪ ಗೌಡ ರವರು ಸ್ವಾಗತಿಸಿ ,ಮೇಲ್ವಿಚಾರಕಿ ಮೋಹಿನಿ ಧನ್ಯವಾದವಿತರು. ತಾಲ್ಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ನಳಿನಾಕ್ಷಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.








