Friday, October 20, 2023

ಬಂಟ್ವಾಳ: ಮತ ಎಣಿಕೆ ಕಾರ್ಯ ಆರಂಭ

Must read

ಬಂಟ್ವಾಳ: ಬಂಟ್ವಾಳ ತಾಲೂಕಿನ 57 ಗ್ರಾ.ಪಂ.ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯವು ಇಂದು ಬೆಳಗ್ಗೆ 8ಕ್ಕೆ ಆರಂಭಗೊಂಡಿದೆ. ಪ್ರಾರಂಭದಲ್ಲಿ ಸಂಬಂಧಿಸಿದ ಅಧಿಕಾರಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ನ ಬಾಗಿಲು ತೆರೆದು ಬಳಿಕ ಮತ ಪೆಟ್ಟಿಗೆಗಳನ್ನು ಆಯಾಯ ಎಣಿಕಾ ಕೇಂದ್ರಗಳಿಗೆ ಸಾಗಿಸಲಾಯಿತು.

ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯ ಒಟ್ಟು 23 ಕೊಠಡಿಗಳಲ್ಲಿ 89 ಟೇಬಲ್ ಗಳ ಮೂಲಕ ಎಣಿಕೆ ಕಾರ್ಯ ನಡೆಯುತ್ತಿದೆ. ಅಭ್ಯರ್ಥಿಗಳು ಹಾಗೂ ಅವರು ಸೂಚಿಸಿದ ಏಜೆಂಟ್ ಗಳ ಸಮ್ಮುಖದಲ್ಲಿ ಎಣಿಕೆ ಕಾರ್ಯ ನಡೆಯುತ್ತಿದ್ದು, ಕೇಂದ್ರದ ಹೊರಭಾಗದಲ್ಲಿ ರಾಜಕೀಯ ಪಕ್ಷಗಳ ಬೆಂಬಲಿಗರು ಸೇರುತ್ತಿರುವುದು ಕಂಡುಬಂದಿದೆ.

More articles

Latest article