Tuesday, October 31, 2023

ರಾಜ್ಯದಲ್ಲಿ 7 ಸೇರಿ ದೇಶದಲ್ಲಿ ಮತ್ತೆ 14 ಬ್ರಿಟನ್ ರೂಪಾಂತರಿ ವೈರಾಣು ಪ್ರಕರಣ ಪತ್ತೆ, ಒಟ್ಟು ಸಂಖ್ಯೆ 20ಕ್ಕೆ ಏರಿಕೆ!

Must read

ಬೆಂಗಳೂರು : ಭಾರತದಲ್ಲಿ ಬ್ರಿಟನ್ ರೂಪಾಂತರಿ ವೈರಾಣು ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆ ಕಂಡಿದ್ದು, ಬ್ರಿಟನ್ ನಿಂದ ಬಂದಂತ 107 ಜನರ ಆರ್ ಟಿ ಪಿಸಿ ಆರ್ ನಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಇವರನ್ನು ಜನೆಟಿಕ್ ಪರೀಕ್ಷೆಗೆ ಒಳಪಿಡಿಸಾಗ 20 ಜನರಿಗೆ ರೂಪಾಂತರಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಇವರಲ್ಲಿ ಕರ್ನಾಟಕದ 7 ಜನರಿದ್ದಾರೆ. ಬೆಂಗಳೂರಿನಲ್ಲಿ ಮೂವರು, ಶಿವಮೊಗ್ಗದಲ್ಲಿ ನಾಲ್ವರಿಗೆ ರೂಪಾಂತರಿ ವೈರಸ್ ದೃಢಪಟ್ಟಿದೆ. ಬೆಂಗಳೂರಿನಲ್ಲಿಯೇ 39 ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ. ಅವರನ್ನು ಕೂಡ ಕೊರೋನಾ ಪರೀಕ್ಷೆಗೆ ಒಳಪಡಿಸಾಲಗಿದೆ. ಶಿವಮೊಗ್ಗದಲ್ಲಿ ಬಂದಿದ್ದ ದಿನವೇ ಕ್ವಾರಂಟೈನ್ ಗೆ ಒಳಪಡಿಸಿದ ಕಾರಣ, ಹೆಚ್ಚು ಜನರಿಲ್ಲ. 7 ಜನರು ಕಾಂಟ್ಯಾಕ್ ಇದ್ದರು. ಮೂವರಿಗೆ ಪಾಸಿಟಿವ್ ಆಗಿದೆ. ಅವರನ್ನು ಮತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೂಪಾಂತರ ವೈರಸ್ ಸೋಂಕಿತರಾದಂತ 7 ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಕೆಲವರನ್ನು ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಕ್ವಾರಂಟೈನ್ ಕಡ್ಡಾಯವಾಗಿ ಎಲ್ಲರೂ ಒಪ್ಪಲೇ ಬೇಕು. ಸಾಂಸ್ಥಿಕವಾಗಿ ಕ್ವಾರಂಟೈನ್ ರೂಪಾಂತರಿ ವೈರಸ್ ದೃಢಪಟ್ಟವರು ಇರಲೇ ಬೇಕಾಗಿದೆ. ಇದಕ್ಕೆ ಒಪ್ಪದಿದ್ದರೇ ಆಗೋದಿಲ್ಲ ಎಂದರು.

1614 ಜನರ ಪರೀಕ್ಷೆಯಾಗಿದೆ. 26 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಬೆಂಗಳೂರಿನ 7 ಜನರು, ಶಿವಮೊಗ್ಗದ ನಾಲ್ವರು ಸೇರಿದಂತೆ ಒಟ್ಟು 11 ಜನರಿಗೆ ರೂಪಾಂತರಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 11 ಜನರಿಗೆ ಕೊರೋನಾ ರೂಪಾಂತರಿ ವೈರಸ್ ದೃಢಪಟ್ಟಿರುವುದಾಗಿ ಸ್ಪಷ್ಟ ಪಡಿಸಿದರು.

More articles

Latest article