ಬಂಟ್ವಾಳ: ತಂತ್ರಜ್ಞಾನದ ಬಳಕೆ ಅನಿವಾರ್ಯವಾಗಿರುವ ಈ ಕಾಲಘಟ್ಟದಲ್ಲಿ
ಮಾನವ ಸಂಪನ್ಮೂಲದ ಸಧ್ವಿನಿಯೋಗಕ್ಕೆ ಪೂರಕವಾಗಿ ದೇಶಿಯ ಕೌಶಲ್ಯವನ್ನು ಹೆಚ್ಚಿಸುವಲ್ಲಿ ಕೇಂದ್ರ ಸರ್ಕಾರ ದಿಟ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ.ಆಪರೇಟಿವ್ ಬೆಂಗಳೂರು, ಸದಾಸ್ಮಿತ ಫೌಂಡೇಷನ್ ಬೆಂಗಳೂರು ಹಾಗೂ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕಲ್ಲಡ್ಕದಲ್ಲಿ, ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ 30ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಗಳನ್ನು ವಿತರಿಸಿ ಮಾತನಾಡಿದರು.
ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದ 75 ವಿಭಾಗದ ಡಿಟಿಜಲೀಕರಣಕ್ಕೆ ಅಗತ್ಯ ನೆರವು ನೀಡಲು‌ ಬದ್ಧ ಎಂದ ಅವರು, ಶ್ರೀರಾಮ ವಿದ್ಯಾಕೇಂದ್ರದ ಪದವಿ ವಿಭಾಗದ ಎಲ್ಲಾ ವಿದ್ಯಾರ್ಥಿಗಳಿಗೂ ಲ್ಯಾಪ್ ಟಾಪ್ ವಿತರಣೆಗೆ ಇಪ್ಕೋ ಹಾಗೂ ಸದಾಸ್ಮಿತ ಫೌಂಡೇಷನ್ ಮೂಲಕ ಶೀಘ್ರ ಯೋಜನೆ‌ ರೂಪಿಸುವುದಾಗಿ ತಿಳಿಸಿದರು.
ಔಷಧಿಗಳಿಗೆ ಕೊರತೆ ಇದ್ದ ಭಾರತ ಇಂದು
110 ದೇಶಗಳಿಗೆ ಅಗತ್ಯ ಔಷಧಿ ಸರಬರಾಜು ಮಾಡುವ ಸಾಮರ್ಥ್ಯ ಪಡೆದುಕೊಂಡಿದ್ದು, ಇದು ನಮ್ಮ ಪ್ರಧಾನಮಂತ್ರಿಗಳ ಆಡಳಿತದ ಸಾಧನೆ ಎಂದರು.
ಕೋವಿಡ್ ಸಂಕಷ್ಟದ ಸಂದರ್ಭ ಎಲ್ಲಾ ಕೆಲಸ‌ ನಿಲ್ಲಿಸಿದ್ದರೆ,ಈ ಬಾರಿ ಕೃಷಿ ಕ್ಷೇತ್ರದಲ್ಲಿ 32.6 ಶೇಕಡಾ ಹೆಚ್ಚು ರಾಸಾಯನಿಕ ಮಾರಾಟವಾಗಿದೆ ಎಂದರು. ನಗದು ರಹಿತ ವ್ಯವಸ್ಥೆಯ ಮೂಲಕ ರಾಸಾಯನಿಕ ಗೊಬ್ಬರ ಖರೀದಿಗೂ ಅವಕಾಶ ಹಾಗೂ ಸಬ್ಸಿಡಿ ನೀಡಿಕೆಗೆ ಅವಕಾಶ ಒದಗಿಸಲಾಗಿದೆ ಎಂದರು.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸದಾಸ್ಮಿತ ಫೌಂಡೇಷನ್ ಮೂಲಕ ಅನೇಕ ಪರಿಹಾರ ಕಾರ್ಯಕ್ರಮಗಳನ್ಙು ನಡೆಸಿಕೊಟ್ಟಿದೆ.‌ ಮುಂದಿನ ಹಂತದಲ್ಲಿ
ಅಂತರ್ಜಲ ವೃದ್ಧಿಗೆ ಪೂರಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ರವರು ಮಾತನಾಡಿ, ಜಗತ್ತಿನ‌ಪರಿವರ್ತನೆಯ ಶಕ್ತಿ ಭಾರತದಲ್ಲಿದೆ, ಇಲ್ಲಿನ ವ್ಯಕ್ತಿ ನಿರ್ಮಾಣ ಕಾರ್ಯವು ನಮ್ಮಲ್ಲೇ ಸಧ್ವಿನಿಯೋಗವಾಗಬೇಕು ಎಂದರು.
ಕಲಿಕೆಯ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಿ, ವಿದ್ಯಾರ್ಜನೆಗೆ ನ್ಯಾಯ ಒದಗಿಸುವ ಕಾರ್ಯಮಾಡಬೇಕು ಎಂದರು.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಅಧ್ಯಕ್ಷ , ಇಪ್ಕೋ ನಿರ್ದೇಶಕರಾದ ಡಾ. ಎಂ.ಯನ್. ರಾಜೇಂದ್ರ ಕುಮಾರ್ ಮಾತನಾಡಿ, ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿ ಗಳ ಶಿಸ್ತು ಬೇರಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಕಾಣಲು ಅಸಾಧ್ಯ, ಇಲ್ಲಿನ ಶಿಕ್ಷಣ ಕ್ರಮ ಉತ್ತಮ ಭವಿಷ್ಯ ರೂಪಿಸುವ ಶಕ್ತಿ ಹೊಂದಿದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ತಂತ್ರಜ್ಞಾನದ ಬೆಳವಣಿಗೆಗೆ ಪೂರಕವಾಗಿ ವಿದ್ಯಾರ್ಥಿಗಳ ಶಿಕ್ಷಣದಲ್ಲೂ ಬದಲಾವಣೆಯಾಗಿದ್ದು, ಇಪ್ಕೋ ಸಂಸ್ಥೆ ನೀಡುವ ಲ್ಯಾಪ್ ಟಾಪ್ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಲಿ ಎಂದವರು ಹಾರೈಸಿದರು.

ಕೋಲಾರದ ಶಾಸಕ, ಇಪ್ಕೋ ನಿರ್ದೇಶಕ ಕೆ. ಶ್ರೀನಿವಾಸ ಗೌಡ, ಬೆಂಗಳೂರಿನ ಸದಾಸ್ಮಿತ ಪೌಂಡೇಶನ್‍ನ ಅಧ್ಯಕ್ಷ ಡಾ. ಶಿವರಾಮ್ , ಕಾರ್ಯದರ್ಶಿ ಅನಿತಾ ಮಂಜುನಾಥ , ಇಪ್ಕೋ ಮಂಗಳೂರು ಕ್ಷೇತ್ರಾಧಿಕಾರಿ ಸಂಗಮೇಶ್ ಎಂ.ಬಿ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ದ ಅಧ್ಯಕ್ಷ ವಸಂತ ಮಾಧವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಪ್ಕೋದ ಕರ್ನಾಟಕ ರಾಜ್ಯ ಮಾರಾಟ ವ್ಯವಸ್ಥಾಪಕರಾದ ಡಾ. ಸಿ.ನಾರಾಯಣ ಸ್ವಾಮಿ ಪ್ರಸ್ತಾವನೆಗೈದರು.

ಪದವಿ ವಿಭಾಗದ ಪ್ರಾಂಶುಪಾಲರಾದ ಕೃಷ್ಣಪ್ರಸಾದ ಕಾಯರ್‍ಕಟ್ಟೆ ಸ್ವಾಗತಿಸಿದರು. ಉಪನ್ಯಾಸಕಿ ವಿದ್ಯಾ ವಂದಿಸಿದರು. ಕು.ಕವಿತಾ ಕಾರ್ಯಕ್ರಮ‌ ನಿರ್ವಹಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here