



ಮಂಗಳೂರು : ಯುವಕನ ಮೇಲೆ ತಲಾವಾರು ದಾಳಿ ನಡೆದ ಘಟನೆ ಮಂಗಳೂರುನ ಹೊರ ವಲಯದಲ್ಲಿ ನಡೆದಿದೆ.
ಅಡ್ಡೂರು ನಿವಾಸಿ ಮಹಮ್ಮದ್ ತಾಜುದ್ದೀನ್ ಮೇಲೆ ದಾಳಿ ತಂಡದಿಂದ ದಾಳಿ ನಡೆದಿದ್ದು ಘಟನೆಯಿಂದ ಗಾಯಗೊಂಡ ತಾಜುದ್ದೀನ್ ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಂಗಳೂರಿನ ಅಡ್ಡೂರಿನಲ್ಲಿ ಘಟನೆ ನಡೆದಿದ್ಧು ಮೂರು ಮಂದಿಯ ತಂಡದಿಂದ ಕೊಲೆ ಯತ್ನ ನಡೆದಿದೆ. ಫರ್ವೀಝ್ ಮತ್ತು ತಂಡದಿಂದ ದಾಳಿ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಯುವಕ ಅಡ್ಡೂರಿನಿಂದ ಮನೆ ಕಡೆ ತೆರಳುವ ವೇಳೆ ಘಟನೆ ನಡೆದಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಪೋಲೀಸರು ಬೇಟಿ ನೀಡಿದ್ದಾರೆ.





