ಬಂಟ್ವಾಳ: ಮದುವೆ ಹಾಲ್ ಗಳಲ್ಲಿ ಮಕ್ಕಳ ,ಮಹಿಳೆಯರ ಕುತ್ತಿಗೆಯಿಂದ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಮಹಿಳೆಯೋರ್ವಳನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ.

ಮುಡಿಪು ನಿವಾಸಿ ಸಿದ್ದೀಕ್ ಎಂಬವರ ಪತ್ನಿ ಫಾತಿಮಾ ಸಹಿನಾಜ್ ಬಂಧಿತ ಆರೋಪಿ.
ಮದುವೆ ಸಮಾರಂಭದಲ್ಲಿ ಮದುವೆ ಹಾಲ್ ಗಳಲ್ಲಿ ಬ್ಯಾಗ್ ನಿಂದ ಹಾಗೂ ಮಕ್ಕಳ ಮತ್ತು ಮಹಿಳೆಯರ ಕುತ್ತಿಗೆ ಗೆ ಕೈ ಹಾಕಿ ಬಂಗಾರ ಗಳನ್ನು ಕಳವು ಮಾಡುತ್ತಿದ್ದ ಆರೋಪದ ಮೇಲೆ ಮಹಿಳೆಯನ್ನು ಪೋಲೀಸರು ಬಂಧಿಸಿದ್ದಾರೆ.

ಮದುವೆ ಹಾಲ್ ಗಳಲ್ಲಿರುವ ಸಿ.ಸಿ.ಟಿವಿ ಪೂಟೇಜ್ ನಲ್ಲಿ ಕಳ್ಳತನ ಮಾಡುವ ದೃಶ್ಯ ಸೆರೆಯಾಗಿದೆ.
ಈ ಬಗ್ಗೆ ಹಾಲ್ ಗಳ ಮಾಲಕರ ದೂರುಗಳು ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಪೋಲೀಸ್ ಠಾಣೆಗಳಿಗೆ ದಾಖಲಾಗಿತ್ತು.ಗುರುವಾರ ಪಾಣೆಮಂಗಳೂರು ಎಸ್.ಎಸ್.ಆಡಿಟೋರಿಯಂ ಹಾಲ್ ನಲ್ಲಿ ಈ ಮಹಿಳೆ ಹೆಣ್ಣು ಮಗುವೊಂದರ ಕುತ್ತಿಗೆಯಿಂದ ಸರವೊಂದನ್ನು ಎಗರಿಸಲು ಪ್ರಯತ್ನಿಸಿದ ವೇಳೆ ಸಿಕ್ಕಿಬಿದ್ದಿದ್ದಾಳೆ.

ಕಳ್ಳತನ ಹೀಗೆ
ಅಷ್ಟಕ್ಕೂ ಮಹಿಳೆ ಕಳವು ಮಾಡುವುದರ ಯಾರದ್ದು ಗೊತ್ತೇ?
ಕೇವಲ ಮಹಿಳೆಯರ ಬ್ಯಾಗ್ ಅಥವ ಕುತ್ತಿಗೆ ಮತ್ತು ಹೆಚ್ಚಾಗಿ ಮಕ್ಕಳ ಕುತ್ತಿಗೆಯ ಮೇಲೆ ಇವಳ ಚಿತ್ತಪ್ರಭಾವ ಬೀರುತ್ತದೆ.
ಮಹಿಳೆಯರು ಗುಂಪಾಗಿ ಸೇರುವ ಜಾಗದಲ್ಲಿ ಅಥವಾ ಅವರ ಬ್ಯಾಗ್ ಗಳಿಂದ ಬಂಗಾರ ಕಳವು ಮಾಡುವುದು ಇವಳ ಚಾಳಿ.ಜೊತೆಗೆ ಮಕ್ಕಳ ಕುತ್ತಿಗೆ ಯಿಂದ ಕಳವು ಮಾಡುವುದರಲ್ಲಿ ಇವಳು ನಿಸ್ಸೀಮಳು.
ಮಕ್ಕಳು ಮದುವೆ ಸಮಾರಂಭ ಗಳಲ್ಲಿ ಊಟ ಮಾಡಿ ಕೈ ತೊಳೆಯುವ ವೇಳೆಯನ್ನು ಸದುಪಯೋಗ ಪಡಿಸಿಕೊಂಡು ಕಳವು ಮಾಡುತ್ತಾಳೆ.
ಗುರುವಾರ ಕೂಡ ಇದೇ ರೀತಿ ಹೆಣ್ಣು ಮಗುವೊಂದು ಊಟ ಮಾಡಿ ಕೈ ತೊಳೆಯುತ್ತಿದ್ದಾಗ ಕುತ್ತಿಗೆಯಿಂದ ಸರ ಎಳೆಯಲು ಪ್ರಯತ್ನಿಸಿ ದ್ದಾಳೆ , ಸರ ಎಳೆಯುವುದು ಗಮನಕ್ಕೆ ಬಂದ್ದಿದ್ದರಿಂದ ಮಗು ಜೋರಾಗಿ ಅತ್ತಿದ್ದಾಳೆ, ಹಾಲ್ ನಲ್ಲಿ ಹೆಣ್ಣು ಮಗಳು ಅಳುವುದನ್ನು ನೋಡಿ ವಿಚಾರಿಸಿ ದಾಗ ಇವಳು ಕಳವಿಗೆ ಪ್ರಯತ್ನಿಸಿದ ವಿಚಾರ ಬೆಳಕಿಗೆ ಬಂದಿದೆ.
ಕೂಡಲೇ ಬಂಟ್ವಾಳ ನಗರ ಠಾಣಾ ಪೋಲೀಸರಿಗೆ ಮಾಹಿತಿ ನೀಡಿದ್ದು ಪೋಲೀಸರು ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ವೇಳೆ ಎಲ್ಲಾ ವಿಚಾರಗಳನ್ನು ಬಾಯಿ ಬಿಟ್ಟಿದ್ದಾಳೆ.

ನ.29 ರಂದು ಎಸ್.ಎಸ್‌.ಅಡಿಟೋರಿಯಂ ಹಾಲ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಅಬುಬಕ್ಕರ್ ಸಿದ್ದೀಕ್ ಎಂಬವರ ಹೆಣ್ಮಗಳ 14 ಗ್ರಾಂ ಚಿನ್ನವನ್ನು ಕಳವು ಮಾಡಿದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಸ್ಟೇಷನ್ ನಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು.

ವಿಚಾರಣೆ ವೇಳೆ ಫಾತಿಮಾ ಅವರು ಕಳೆದ 10 ವರ್ಷ ಗಳಿಂದ ಇದೇ ದಂದೆಯಲ್ಲಿ ತೊಡಗಿರುವ ಬಗ್ಗೆ ಮಾಹಿತಿ ನೀಡಿದ್ದಾಳೆ.ಎಸ್. ಎಸ್.ಮಹಲ್ ಮದುವೆ ಹಾಲ್ ಮೂರು ಬಾರಿ ಕಳವು ಮಾಡಿದ ಬಗ್ಗೆ ಯೂ ಒಪ್ಪಿಕೊಂಡಿದ್ದಾಳೆಯಶಸ್ವಿ ಹಾಲ್ ಫರಂಗಿ ಪೇಟೆ , ತೊಕ್ಕೊಟ್ಟು ಯುನಿಟಿ, ತಲಪಾಡಿ ಖಜನಾ ಸೇರಿದಂತೆ ಇತರ ಹಲವು ಕಡೆಗಳಲ್ಲಿ ಕಳವು ಮಾಡಿದ ಬಗ್ಗೆ ಅವಳು ಒಪ್ಪಿಕೊಂಡಿದ್ದಾಳೆ.ಕಳವು ಮಾಡಿದ ಚಿನ್ಜಾಭರಣಗಳನ್ನು ಚಿನ್ನದ ಅಂಗಡಿಗೆ ನೀಡಿ ಕರಗಿಸಿ ಹೊಸ ರೂಪ ಮಾಡಿಸಿದ ಸುಮಾರು 234 ಗ್ರಾಂ ಚಿನ್ನವನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಉಳಿದಂತೆ ಮಾರಾಟ ಮಾಡಿದ ಬಂಗಾರದ ಹಣವನ್ನು ಬ್ಯಾಂಕ್ ನಲ್ಲಿ ಇಟ್ಟಿರುವುದಾಗಿಯೂ ಅವಳು ತಿಳಿಸಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳವು ಆರೋಪಿ ಮಹಿಳೆಯನ್ನು ಬಂಧಿಸಿದ ಪೋಲೀಸರು ನ್ಯಾಯಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಎಸ್.ಪಿ. ಲಕ್ಮೀಪ್ರಸಾದ್ ಅವರ ನಿರ್ದೇಶನ ದಂತೆ ಬಂಟ್ವಾಳ ಡಿ.ವೈ.ಎಸ್.ಪಿ .
ಡಿ.ಸೋಜ ಮತ್ತು ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮಾರ್ಗದರ್ಶನ ದಲ್ಲಿ ಬಂಟ್ವಾಳ ನಗರ ಠಾಣಾ ಎಸ್.ಐ. ಅವಿನಾಶ್ ಪ್ರಕರಣ ದಾಖಲಿಸಿಕೊಂಡು ಅಪರಾಧ ವಿಭಾಗದ ಎಸ್.ಐ.
ಕಲೈಮಾರ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.ಕಾರ್ಯಚರಣೆಯಲ್ಲಿ ಅಪರಾಧ ವಿಭಾಗದ ಸಿಬ್ಬಂದಿ ಗಳು ಭಾಗವಹಿಸಿದ್ದರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here