



ಮಂಗಳೂರು: ಕೆನರಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯುನ್ಮಾನ ಮತ್ತು ಸಂಪರ್ಕ ತಾಂತ್ರಿಕ ವಿಭಾಗದ ವತಿಯಿಂದ “ಮಿಶಿನ್ ಲರ್ನಿಂಗ್ ಆಂಡ್ ಇಟ್ಸ್ ಪ್ರಾಕ್ಟಿಕಲ್ ಆಪ್ಲಿಕೇಶನ್ಸ್” ಕಾರ್ಯಾಗಾರವು ಡಿಸೆಂಬರ್ 14 ರಿಂದ 18ರ ವರೆಗೆ ನಡೆಯಲಿದೆ.
ಮಣಿಪಾಲ್ ಡಾಟ್ ನೆಟ್ ನಿರ್ದೇಶಕ ಡಾ. ನಿರಂಜನ್ ಯು.ಸಿ., ಎಂ.ಐ.ಟಿ. ಯ ಕಂಪ್ಯೂಟರ್ ಸಾಯನ್ಸ್ ವಿಭಾಗದ ಪ್ರಾಧ್ಯಾಪಕ ಡಾ. ಭಾರ್ಗವ್ ಜೆ ಭಟ್ಕಲ್ಕರ್, ಸೈಜ್ವೇರ್ ಕಂಪನಿಯ ಸ್ಥಾಪಕ ಶ್ರೀಧರ್ ಎಸ್.ಆರ್., ಮಂಗಳೂರಿನ ಕಷ್ಯಪ ತರಬೇತಿ ಕೇಂದ್ರದ ಹೃಷಿಕೇಶ್ ಭಟ್ ಮುಂತಾದವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲಿರುವರು.
ಐಐಟಿ ಮುಂಬೈ, ಐಐಎಸ್ ಸಿ ಬೆಂಗಳೂರು ಮುಂತಾದೆಡೆ 25 ವರ್ಷಗಳಿಗಿಂತ ಹೆಚ್ಚಿನ ಕಾಲ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಹಾಗೂ ಎನ್ಐಇ ಮೈಸೂರು ಇದರ ನಿರ್ದೇಶಕ ಡಾ.ಅಶೋಕ್ ರಾವ್ ಪ್ರಾಸ್ತಾವಿಕ ಮಾತು ನೀಡಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಗಣೇಶ್ ವಿ. ಭಟ್ ಮತ್ತು ವಿದ್ಯುನ್ಮಾನ ಮತ್ತು ಸಂಪರ್ಕ ತಾಂತ್ರಿಕ ವಿಭಾಗದ ಮುಖ್ಯಸ್ಥೆ ಡಾ. ರಾಜಲಕ್ಷ್ಮಿ ಸಾಮಗಾ ಬಿ.ಎಲ್. ಹಾಗೂ ಸಂಚಲನಾಧಿಕಾರಿ ಡಾ. ದಯಾನಂದ ಜಿ.ಕೆ. ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





