Thursday, October 26, 2023

ಇರುಳರಸ

Must read

ಚಂದ್ರ ನಿನ್ನ ಕಂಬನಿ
ಬಾನ ತುಂಬ ಕನ್ನಡಿ
ಮೋಡ ಮುಸುಕಿಕೊಂಡರೂ
ಮೋಸ ಮಾಡೆ ಇರಳಿಗೂ

ಒಂದು ಪಕ್ಷ ಬೆಳೆಯುವೆ
ಇನ್ನೊಂದರಲ್ಲಿ ಕರಗುವೆ
ಏರು ಇಳುವು ಇದ್ದರೂ
ಸುರಿಸುತಿರುವೆ ಬೆಳಕನೇ

ದಕ್ಷ ಶಾಪ ವಕ್ಷದಿ
ಜಿಂಕೆ ಕಲೆಯು ಮೊಗದಲಿ
ಎಲ್ಲ ಮರೆತು ನಡೆವೆ ನೀ
ಜಗದ ಜನರ ಹರುಷ ನೀ

ಬಾನ ಬಯಲೆ ಆಲಯ
ಗೊತ್ತು ನಿನಗೆ ಸ್ಥಿತಿ ಲಯ
ನಿನ್ನ ಪಾಳಿ ರವಿಗೆ ವಹಿಸಿ
ಮರೆಗೆ ಸರಿವೆ ಅನುದಿನ

ಆಗಸವನೆ ನೋಡದವನು
ನಿನ್ನ ಅಂದ ಸವಿಯದವನು
ಇದ್ದರೇನು?ಸತ್ತರೇನು?
ಶವದ ಬಾಳೆ ಅವನದು!

ನೀ.ಶ್ರೀಶೈಲ ಹುಲ್ಲೂರು

 

More articles

Latest article