ಬಂಟ್ವಾಳ: ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶದ ಅಂಗವಾಗಿ ದೃಢಕಲಶ ಆಗಬೇಕಿರುವ ಕಾರಣದಿಂದ ಡಿ.28ರಿಂದ ಫೆ.17ರವರೆಗೆ ಸಾರ್ವಜನಿಕರಿಗೆ ದೇವರ ದರ್ಶನ ಇರುವುದಿಲ್ಲ.
ಕೊರೊನಾ ಹಿನ್ನೆಲೆ, ಬ್ರಹ್ಮಕಲಶೋತ್ಸವ ನಡೆದ ಬಳಿಕ ಜೀಣೋದ್ಧಾರದ ನಂತರದ ಕಾರ್ಯಗಳು ಆಗಿರಲಿಲ್ಲ. ದೃಢಕಲಶ ಬಾಕಿ ಉಳಿದಿತ್ತು. ಪ್ರಸ್ತುತ ಸಾನಿಧ್ಯದಲ್ಲಿ ಸಣ್ಣ-ಪುಟ್ಟ ಜೀಣೋದ್ಧಾರದ ಕೆಲಸ ನಡೆಸಿ, ದೃಢಕಲಶ ಮಾಡಬೇಕಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ದೇವರ ದರ್ಶನ ಇರುವುದಿಲ್ಲ. ಈ ಅವಧಿಯಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸೀಮೆಯ ಒಳಗೆ ವಿಶೇಷ ಕಾರ್ಯಕ್ರಮ ಮಾಡುವುದಾದರೆ, ದೇವರಲ್ಲಿ ಪ್ರಾರ್ಥಿಸಿ ಮುಂದುವರೆಸಬಹುದಾಗಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here