


ಬಂಟ್ವಾಳ: ಇಲ್ಲಿನ ಕಂದಾಯ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ನ್ಯಾಯವಂಚಿತ ಕಡತಗಳಿಗೆ ನ್ಯಾಯ ಸಿಗದಿರುವುದು ಸಹಿತ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಡಿಸೆಂಬರ್ 7 ರಂದು ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂಭಾಗ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಅವರು ಪ್ರಕಟಣೆ ತಿಳಿಸಿದ್ದಾರೆ.
ಸರಕಾರಿ ಜಮೀನು ಮತ್ತು ನಿವೃತ್ತ ಸೈನಿಕರಿಗೆ ಮೀಸಲಿಟ್ಟ ಜಮೀನು ತೆರವುಗೊಳಿಸಲು ವಿಳಂಬ ಧೋರಣೆ,ಪಂಚಾಯತ್ ಗೆ ಸಂಬಂಧಿಸಿ ಸಾರ್ವಜನಿಕ ರಸ್ತೆಗೆ ಅಡ್ಡಿಪಡಿಸುವವರ ಮೇಲೆ ಕ್ತಮಕೈಗೊಳ್ಳಲು ಹಿಂದೇಟು ಹಾಕುವುದು, ತಾಲೂಕು ಕಚೇರಿಯಲ್ಲಿ ಕೆಲ ಸಿಬ್ಬಂದಿಗಳು ಉದ್ದೇಶಪೂರ್ವಕ ಎಂಬಂತೆ ಕಡತ ಕಾಣೆಯಾಗಿಸುವುದು ಸಹಿತ ಇತರ ಬೇಡಿಕೆಯನ್ನು ಮುಂದಿಟ್ಟು ಈ ಉಪವಾಸ ನಡೆಸಲಾಗುವುತ್ತಿದೆ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಲಾಗಿದೆ.ಅಂದು ಜಿಲ್ಲಾಧಿಕಾರಿಯವರು ಸ್ಥಳಕ್ಕಾಗಮಿಸಿ ನ್ಯಾಯ ಒದಗಿಸುವ ತನಕ ಉಪವಾಸ ಸತ್ಯಾಗ್ರಹ ನಡೆಸಲಾಗುವುದೆಂದು ಅವರು ತಿಳಿಸಿದ್ದಾರೆ.







