ಧರ್ಮಸ್ಥಳ: ಶ್ರೀ ಶಂಕರ ವಾಹಿನಿಯ ವತಿಯಿಂದ ಭಜನಾ ಸಾಮ್ರಾಟ್‌ ಕಾರ್ಯಕ್ರಮವು ಅನೇಕ ಸರಣಿಗಳ ಯಶಸ್ಸನ್ನು ಕಂಡಿದ್ದು, ಬಹು ಜನರ ಅಪೇಕ್ಷೆಯಂತೆ ಈ ವರ್ಷವು ಪುನರರಾಂಭಿಸಲಾಗುತ್ತಿದೆ. ಆ ಪ್ರಯುಕ್ತ ಡಿ.12 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಜನಾ ಸಾಮ್ರಾಟ್-2020 ಆಡಿಷನ್ ‌ಕಾರ್ಯಕ್ರಮವನ್ನು ಜರಗಲಿದೆ.

ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಕಾರ್ಯಕ್ರಮವನ್ನುಉದ್ಘಾಟಿಸಲಿದ್ದಾರೆ. ಭಜನಾ ತಂಡಗಳ ಆಡಿಷನ್‌ನ್ನುಇದೇ ದಿನ ನಡೆಸಲಾಗುತ್ತದೆ. 18 ರಿಂದ 40 ವರ್ಷ ವಯೋಮಿತಿಯ, ಕನಿಷ್ಟ ಒಂದು ತಂಡದಲ್ಲಿ, ವಾದ್ಯಗೊಷ್ಠಿಯವರೂ ಸೇರಿ, ಒಟ್ಟು 7 ರಿಂದ 9 ಪುರುಷ ಹಾಗೂ ಮಹಿಳಾ ಸದಸ್ಯರು ಭಾಗವಹಿಸಬಹುದು. ಯಾವುದೇ ಭಾಷೆ, ಶೈಲಿಯಲ್ಲಿ ಹಾಡಬಹುದಾಗಿದೆ. ಒಂದು ಭಜನಾ ತಂಡಕ್ಕೆ 10 ನಿಮಿಷಗಳ ಕಾಲಾವಕಾಶವಿರುತ್ತದೆ ಎಂದು ಶ್ರೀ ಶಂಕರ ವಾಹಿನಿಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಆಸಕ್ತ ಭಜನಾ ಮಂಡಳಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶ್ರೀ ಶಂಕರ ವಾಹಿನಿಯ ನಿತ್ಯ (ದೂರವಾಣಿ ಸಂಖ್ಯೆ-9632200803) ಇವರನ್ನು ಸಂಪರ್ಕಿಸಬಹುದಾಗಿದೆ.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here