ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ- ವಿಟ್ಲ ತಾಲೂಕು ಇದರ ವತಿಯಿಂದ ಹಿಂದೂ ದೇವಿ ದೇವತೆಗಳನ್ನು ಅವಹೇಳನ ಶಬ್ದಗಳಲ್ಲಿ ನಿಂದಿಸುವ ಮೂಲಕ ಕೋಮು ಗಲಭೆ ವಾತಾವರಣ ಸೃಷ್ಟಿ ಮಾಡಿದ ಕಂಬಳಬೆಟ್ಟು ನಿವಾಸಿ ರಿಜ್ವಾನ್ ಖಾನ್ ವಿರುದ್ಧ ವಿಟ್ಲ ಆರಕ್ಷಕ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ.

ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲ್ಲೂಕು ಕಾರ್ಯದರ್ಶಿ ಹರ್ಷೇಂದ್ರ ರೈ ನೀಡಿದ ದೂರಿನ ಮೇರೆಗೆ ಎಫ್.ಐ.ಆರ್. ದಾಖಲಾಗಿ ಆರೋಪಿಯ ಬೆನ್ನು ಹತ್ತಿದ ವಿಟ್ಲ ಠಾಣಾ ಉಪನಿರೀಕ್ಷಕ ವಿನೋದ್ ರೆಡ್ಡಿ ಮತ್ತು ತಂಡ ಸಕಲೇಶಪುರದಲ್ಲಿ ಆರೋಪಿ ರಿಜ್ವಾನ್ ಖಾನ್ ನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ, ವಿಟ್ಲ ತಾಲ್ಲೂಕು ಉಪಾಧ್ಯಕ್ಷರಾದ ರಾಜೇಶ್ ಕರೋಪಾಡಿ ಹಾಗೂ ಚೇತನ್ ಕಡಂಬು ಇನ್ನಿತರ ಕಾರ್ಯಕರ್ತರ ನೇತೃತ್ವದಲ್ಲಿ ದೂರು ದಾಖಲಿಸಲಾಗಿತ್ತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here