ಬಂಟ್ವಾಳ: ಶ್ರೀ ದೇವಿ ಭಜನಾ ಮಂದಿರ ಪೆರಾಜೆ ಇದರ ವತಿಯಿಂದ ಪೆರಾಜೆ ಶ್ರೀ ದೇವಿ ಮಂದಿರದಲ್ಲಿ ನ.21 ರಂದು ಶನಿವಾರ ಬೆಳಿಗ್ಗೆ ಯಿಂದ ಗ್ರಾಮದ ಮಕ್ಕಳಿಗೆ ಕುಣಿತ ಭಜನಾ ತರಬೇತಿ ಕಾರ್ಯಕ್ರಮ ನಡೆಯಿತು.

ವಿಟ್ಲ ತಾಲೂಕಿನ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷರಾಗಿರುವ ಗಣೇಶ ಕುಲಾಲ್ ಕೆದಿಲ ಕಾರ್ಯಾಗಾರ ಉದ್ಘಾಟಸಿದರು.
ಉದ್ಘಾಟಿಸಿ ಬಳಿಕ ಮಾತನಾಡಿದ ಗಣೇಶ್ ಅವರು ಭಜನೆ ದೇವರನ್ನ ಮನಸ್ಸಲ್ಲಿ ಇರಿಸಿ ತನ್ಮಯತೆ ಕೊಡುತ್ತದೆ. ಕುಣಿತ ಭಜನೆ ಇಡೀ ದೇಹವನ್ನೇ ದೇವರ ಕಡೆಗೆ ಸೆಳೆಯುತ್ತದೆ. ಈ ನಿಟ್ಟಿನಲ್ಲಿ ಮಂದಿರದ ಈ ಕಾರ್ಯ ಶ್ಲಾಘನೀಯ ಎಂದರು.
ಹಿರಿಯರಾದ ಜಯಾನಂದ ಪೆರಾಜೆ, ಮಂದಿರದ ಗೌರವ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಬುಡೋಳಿಗುತ್ತು, ಗುಡ್ಡ ಚಾಮುಂಡಿ ಟ್ರಸ್ಟ್ ಅಧ್ಯಕ್ಷರಾದ ಮಾಧವ ಕುಲಾಲ್ ಪಾಳ್ಯ, ಯುವ ವೇದಿಕೆ ಅಧ್ಯಕ್ಷ ನಿತಿನ್ ಅರ್ಬಿ , ಮಂದಿರದ ಉಪಾಧ್ಯಕ್ಷರಾದ ದಿನಕರ ಪೂಜಾರಿ, ಮಂದಿರದ ಆಡಳಿತ ಮಂಡಳಿಯ ಸದಸ್ಯರಾದ ಸಂದೀಪ್ ಮಿತ್ತಪೆರಾಜೆ, ಬಾಲಕೃಷ್ಣ ಪೆರಾಜೆ, ಜ್ಯೋತಿಬಾಲಕೃಷ್ಣ ಪೆರಾಜೆ, ಹರಿಂದ್ರ ಜೋಗಿಬೆಟ್ಟು ಉಪಸ್ಥಿತರಿದ್ದರು.
ಶ್ರೀ ದೇವಿ ಭಜನಾ ಮಂದಿರದ ಅಧ್ಯಕ್ಷರಾದ ಯತಿರಾಜ್ ಪೆರಾಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here