ಬೆಳ್ತಂಗಡಿ: ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಯೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಆರಂಬೋಡಿ ಗ್ರಾಮದ ಸಿದ್ದಕಟ್ಟೆಯ ಆರಂಬೋಡಿಯಲ್ಲಿ ನ. 19 ರಂದು ಗುರುವಾರ ನಡೆದಿದೆ.
ಆರಂಬೋಡಿ ಗ್ರಾಮದ ಕೋಡ್ಯೆಲು ಮನೆ ನಿವಾಸಿ ನಾರಾಯಣ ಶೆಟ್ಟಿ ಅವರ ಪುತ್ರ ಸಮರ್ಥ್(16) ಮೃತಪಟ್ಟ ಬಾಲಕ. ಈತ ಸಿದ್ದಕಟ್ಟೆ ಗುಣಶ್ರೀ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ.
ಗುರುವಾರ ಬೆಳಿಗ್ಗೆ ನೋಟ್ಸ್ ಬುಕ್ ತಿದ್ದುಪಡಿಗಾಗಿ ಶಾಲೆಗೆ ತೆರಳಿದ್ದಾನೆ ಎನ್ನಲಾಗಿದೆ. ಆದರೆ ಸಂಜೆವರೆಗೂ ಈತ ಹಿಂದಿರುಗದ ಹಿನ್ನೆಲೆ ಮನೆಮಂದಿ ಹುಡುಕಿದಾಗ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಾಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here