ಬಂಟ್ವಾಳ: ತಾಲೂಕಿನ ಬರಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೇಗಿನ ಬಲ್ಯ, ಬಲ್ಯ ಹಾಗೂ ಹೊನ್ನಪ್ಪರೆಕೋಡಿ ರಸ್ತೆ ಕಾಂಕ್ರೀಟಿಕರಣದ ಶಿಲಾನ್ಯಾಸವನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಕಮಾಲಾಕ್ಷಿ ಕೆ. ಪೂಜಾರಿ ನೆರವೇರಿಸಿದರು.

ಮೇಗಿನ ಬಲ್ಯ ರಸ್ತೆ ಕಾಂಕ್ರಟಿಕರಣಕ್ಕೆ 5 ಲಕ್ಷ ರೂ. ಅನುದಾನ ಮತ್ತು ಬಲ್ಯ ರಸ್ತೆ ಕಾಂಕ್ರಟಿಕರಣಕ್ಕೆ 5 ಲಕ್ಷ ರೂ. ಅನುದಾನವನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಒದಗಿಸಿದರು. ಹೊನ್ನಪ್ಪರೆಕೋಡಿ ರಸ್ತೆ ಕಾಂಕ್ರಟಿಕರಣಕ್ಕೆ 4 ಲಕ್ಷ ಅನುದಾನವನ್ನು ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ ಒದಗಿಸಿದದ್ದಾರೆ.

ಈ ಸಂದರ್ಭದಲ್ಲಿ ಬರಿಮಾರು ಬಿಜೆಪಿಯ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಜೈನ್, ಕಡೇಶ್ವಾಲ್ಯ ಗ್ರಾ.ಪಂ.ಮಾಜಿ ಅಧ್ಯಕ್ಷ ಸದಾಶಿವ ಜಿ., 1 ನೇ ವಾರ್ಡ್ ಬಿಜೆಪಿ ಅಧ್ಯಕ್ಷ ಸಂತೋಷ ಕುಮಾರ್, 3ನೇ ವಾರ್ಡ್ ಬಿಜೆಪಿ ಕಾರ್ಯದರ್ಶಿ ಮೋಹನ್ ಗುಳಿಗಕೋಡಿ, 2 ನೇ ವಾರ್ಡ್ ಬಿಜೆಪಿ ಅಧ್ಯಕ್ಷ ಅಶ್ವತ್ಥ್ ಬರಿಮಾರು, ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಗುರುರಾಜ್ ಆಳ್ವ ಹಾಗೂ ಬಿಜೆಪಿ ಪ್ರಮುಖರಾದ ಧನಂಜಯ ಬಲ್ಯ, ಸದಾನಂದ ಪೂಜಾರಿ, ಜಗದೀಶ ಪೂಜಾರಿ ಬರಿಮಾರು ಮತ್ತು ಗುತ್ತಿಗೆದಾರರಾದ ನಾಗೇಶ್, ಮಾರ್ಷಲ್ ಪಾಯಸ್ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

 

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here